ರಾಜ್ಯದಲ್ಲಿ ಎಲ್ಲೇ ಸ್ಪರ್ಧಿಸಿದರೂ ಸಿದ್ದು ಗೆಲ್ಲುತ್ತಾರೆ : ರಾಜಣ್ಣ

By Kannadaprabha News  |  First Published Nov 16, 2022, 4:34 AM IST

ವಿಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯದ 224 ಕ್ಷೇತ್ರಗಳಲ್ಲಿ ಯಾವ ಕ್ಷೇತ್ರದಲ್ಲಾದರೂ ಸ್ಪರ್ಧಿಸಿದರೂ ಗೆದ್ದು ಬರುತ್ತಾರೆ ಎಂದು ಕಾಂಗ್ರೆಸ್‌ ಮುಖಂಡ ಕೆ.ಎನ್‌.ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.


ತುಮಕೂರು (ನ.16):  ವಿಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯದ 224 ಕ್ಷೇತ್ರಗಳಲ್ಲಿ ಯಾವ ಕ್ಷೇತ್ರದಲ್ಲಾದರೂ ಸ್ಪರ್ಧಿಸಿದರೂ ಗೆದ್ದು ಬರುತ್ತಾರೆ ಎಂದು ಕಾಂಗ್ರೆಸ್‌ ಮುಖಂಡ ಕೆ.ಎನ್‌.ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯಗೆ ಮಧುಗಿರಿಗೆ ಆಹ್ವಾನ ಕೊಟ್ಟಿದ್ದೆ. ಈ ಹಿಂದೆ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲು ಮನವಿ ಮಾಡಿದ್ದೆವು, ತುಮಕೂರು ಜಿಲ್ಲೆಗೆ ಬಂದರೆ ಸಂತೋಷ ಎಂದರು.

Tap to resize

Latest Videos

ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ (Dr G Parameshwar)  ಅವರು ಮುಂದೆ ಸಿಎಂ ಮಾಡುವ ಸಂದರ್ಭ ಬಂದರೆ ನಮ್ಮ ಬೆಂಬಲ ಅವರಿಗೆ ನೀಡುತ್ತೇವೆ. ನಮ್ಮ ಜಿಲ್ಲೆಯವರು ಮುಖ್ಯಮಂತ್ರಿ ಆಗುತ್ತಾರೆ ಎಂದರೆ ಬೆಂಬಲ ಕೊಡುವುದು ನಮ್ಮ ಕರ್ತವ್ಯ. ಮಾಜಿ ಶಾಸಕ ಎಚ್‌. ನಿಂಗಪ್ಪ ಕಾಂಗ್ರೆಸ್‌ (Congress) ಸೇರುವುದು ಬಹುತೇಕ ಖಚಿತ, ಟಿಕೆಟ್‌ ನೀಡುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟದ್ದು, ಆ ಬಗ್ಗೆ ನಾನೇನು ಹೇಳುವುದಿಲ್ಲ ಎಂದು ಹೇಳಿದರು.

ಹಾಲು ಉತ್ಪಾದಕರಿಗೆ ಹಣ ನೀಡಿ:

ಹಾಲಿನ ದರ 10 ರು. ಬೇಕಾದರೆ ಹೆಚ್ಚಿಸಲಿ, ಆದರೆ ಕಚೇರಿ ಕೆಲಸಕ್ಕೆ, ಸಂಬಳ, ಸಾರಿಗೆಗೆ ಆ ಹಣವನ್ನು ಉಪಯೋಗಿಸಬಾರದು, 10 ರು. ಗಳನ್ನು ಹಾಲು ಉತ್ಪಾದಕರಿಗೆ ನೀಡಬೇಕು ಎಂಬುದು ನಮ್ಮ ಸಲಹೆ. ಹಾಲು ಉತ್ಪಾದಕರ ಸ್ಥಿತಿ ಕಷ್ಟಕರವಾಗಿದೆ. ಹೀಗಾಗಿ ಎಷ್ಟೇ ಹೆಚ್ಚು ಮಾಡಿದರೂ ಅದನ್ನು ಉತ್ಪಾದಕರಿಗೆ ನೀಡಬೇಕು. ಶಾಲೆಗಳನ್ನು ಕೇಸರಿಕರಣ ಮಾಡಲು ಹೊರಟಿರುವ ಕ್ರಮ ಸರಿಯಲ್ಲ. ಸ್ವಾಮಿ ವಿವೇಕಾನಂದರು ಹೊರದೇಶದಲ್ಲೆಲ್ಲಾ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ ಅಂತಹವರಿಗೆ ಅವಮಾನ ಮಾಡುವುದು ಸರಿಯಲ್ಲ ಎಂದು ಕೆ.ಎನ್‌.ರಾಜಣ್ಣ ನುಡಿದರು.

ರಾಜ್ಯ ಸರ್ಕಾರ ಯಶಸ್ವಿನಿ ಮರು ಜಾರಿಗೆ ಮುಂದಾಗಿದ್ದು 2023ರ ಜನವರಿ 1ರಿಂದ ಯೋಜನೆ ಜಾರಿಗೆ ಬರಲಿದೆ. ಇದಕ್ಕಾಗಿ ಮುಖ್ಯಮಂತ್ರಿಗಳು, ಸಹಕಾರ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿ ಯಶಸ್ವಿನಿ ಯೋಜನೆ ಮತ್ತೆ ಜಾರಿಗೆ ತಂದಿರುವುದು ಅಭಿನಂದನೀಯ. ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಯಶಸ್ವಿನಿ ಯೋಜನೆಯನ್ನು ಜಾರಿಗೆ ತಂದಿದ್ದರು.ಆ ನಂತರ ಅದು ಸ್ಥಗಿತಗೊಂಡಿತ್ತು. 2019ರಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ತುಮಕೂರಿನಲ್ಲಿ ನಡೆದ ಸಹಕಾರಿ ಸಮಾವೇಶದಲ್ಲಿ ಯಶಸ್ವಿನಿ ಮರು ಸ್ಥಾಪನೆಗೆ ಆಗ್ರಹಿಸಲಾಗಿತ್ತು ಎಂದರು.

ಯಶಸ್ವಿನಿ ಯೋಜನೆಯಲ್ಲಿ ನೊಂದಾಯಿಸಿದ ರೈತರು ಮತ್ತು ಸಹಕಾರಿಗಳು ಸುಮಾರು 1650 ಕಾಯಿಲೆಗಳಿಗೆ ಸಂಬಂಧಿಸಿದಂತೆ 850ಕ್ಕೂ ಹೆಚ್ಚು ಸುಸಜ್ಜಿತ ಆಸ್ಪತ್ರೆಗಳಲ್ಲಿ 5 ಲಕ್ಷ ರು.ಗಳವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ. ಹಾಗಾಗಿ ಎಲ್ಲಾ ರೈತರು ತಮ್ಮ ಹತ್ತಿರದ ವಿಎಸ್‌ಎಸ್‌ಎನ್‌ ಕಚೇರಿಯಲ್ಲಿ ಹೆಸರು ನೊಂದಾಯಿಸಿ, ಯಶಸ್ವಿನಿ ಯೋಜನೆಯ ಲಾಭ ಪಡೆದುಕೊಳ್ಳಬಹುದು.ಯಶಸ್ವಿನಿ ಯೋಜನೆಗೆ ನೋಂದಾಯಿಸಲು ಪರಿಶಿಷ್ಟಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಇತರೆಯವರಿಗೆ 500 ರು. ನಿಗದಿಪಡಿಸಲಾಗಿದೆ. ಹೆಚ್ಚು ಜನರು ಇದರ ಲಾಭ ಪಡೆದುಕೊಳ್ಳುವಂತೆ ರಾಜಣ್ಣ ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಜಿ.ಜೆ.ರಾಜಣ್ಣ, ಲಕ್ಷ್ಮೇನಾರಾಯಣ್‌, ನಾರಾಯಣಗೌಡ, ಸಿಂಗದಹಳ್ಳಿ ರಾಜಕುಮಾರ್‌, ಸಹಕಾರ ಇಲಾಖೆಯ ಅಧಿಕಾರಿಗಳಾದ ಎನ್‌.ವೆಂಕಟೇಶ್‌,ಶ್ರೀಧರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತುಮಕೂರು ಜಿಲ್ಲೆಯ ಹತ್ತು ತಾಲೂಕುಗಳ 11 ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಈ ಬಾರಿ ಗೆಲ್ಲುತ್ತದೆ ಎಂಬ ವಿಶ್ವಾಸ ನಮಗಿದೆ. ಮಧುಗಿರಿ ಕ್ಷೇತ್ರದ ಜನ 2023ನೇ ಸಾಲಿನಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಮಧುಗಿರಿಯನ್ನು ಜಿಲ್ಲೆಯನ್ನಾಗಿ ಮಾಡಿಸಲು ಸರ್ಕಾರಕ್ಕೆ ಒತ್ತಡ ತರುತ್ತೇನೆ. 54 ಕೆರೆಗಳಿಗೂ ನೀರು ತುಂಬಿಸುತ್ತೇನೆ, ರೈಲ್ವೆ ಕಾಮಗಾರಿಗಳನ್ನು ಸಂಪೂರ್ಣ ಮಾಡಿಸಲು ಶ್ರಮವಹಿಸುವುದರ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಕಾಳಜಿ ಇಟ್ಟು ಕೆಲಸ ಮಾಡುತ್ತೇನೆ.

ಕೆ.ಎನ್‌.ರಾಜಣ್ಣ ಮಾಜಿ ಶಾಸಕ

click me!