'ರಮೇಶ್ ಜಾರಕಿಹೊಳಿ ಬಾಯಿಗೆ ಬಂದಂಗೆ ಮಾತನಾಡ್ತಾರೆ'

By Suvarna News  |  First Published Dec 5, 2019, 1:37 PM IST

ರಮೇಶ್ ಜಾರಕಿಹೊಳಿದು  ಬಾಲಿಶವಾದ ಹೇಳಿಕೆಯಾಗಿದೆ ಎಂದ ಸಿದ್ದರಾಮಯ್ಯ| ರಮೇಶ್, ಐಡಿಯಾಲಜಿ ಗೊತ್ತಿಲ್ಲ, ಪೊಲಿಟಿಕಲ್ ಫಿಲಾಸಫಿ ಗೊತ್ತಿಲ್ಲ, ಏನೂ ಓದುಕೊಂಡಿಲ್ಲ. ಬಾಯಿಗೆ ಬಂದಂಗೆ ಮಾತನಾಡ್ತಾರೆ| ಬಿಜೆಪಿಯವರ ಹೆಳಿಕೆಗೆ ತಲೆಕೆಡಿಸಿಕೊಳ್ಳಬೇಕಿಲ್ಲ|


ಬಾಗಲಕೋಟೆ(ಡಿ.05): ಜವಾಬ್ದಾರಿ ಏನಾದ್ರೂ ಇದ್ರೆ ಹೀಗೆಲ್ಲ ಮಾತನಾಡುವುದಿಲ್ಲ. ರಾಜಕಾರಣದಲ್ಲಿ ಹುಡುಗಾಟಿಕೆ ಆಡಬಾರದು. ಗಂಭೀರವಾಗಿ ಮಾತನಾಡೋದನ್ನ ಕಲಿಯಬೇಕು ಎಂದು ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. 

ಸಿದ್ದರಾಮಯ್ಯರನ್ನ ಬಿಜೆಪಿಗೆ ಕರೆತರುತ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿಕೆಗೆ ಗುರುವಾರ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಮೇಶ್ ಜಾರಕಿಹೊಳಿದು  ಬಾಲಿಶವಾದ ಹೇಳಿಕೆಯಾಗಿದೆ. ನಮ್ಮ ಜೀವನದ  ಹೋರಾಟನೇ ಕೋಮುವಾದಿ ಶಕ್ತಿ ವಿರುದ್ಧವಾಗಿದೆ. ಅವನ್ಯಾರೋ ರಮೇಶ್, ಐಡಿಯಾಲಜಿ ಗೊತ್ತಿಲ್ಲ, ಪೊಲಿಟಿಕಲ್ ಫಿಲಾಸಫಿ ಗೊತ್ತಿಲ್ಲ, ಏನೂ ಓದುಕೊಂಡಿಲ್ಲ. ಬಾಯಿಗೆ ಬಂದಂಗೆ ಮಾತನಾಡ್ತಾರೆ ಎಂದು ರಮೇಶ್ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇನ್ನು ಕಾಂಗ್ರೆಸ್ ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ದಲಿತ ಸಿಎಂ ವಿಚಾರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಏನೇ ತೀರ್ಮಾನ ಆಗ್ಬೇಕಾದ್ರೆ ಫಲಿತಾಂಶ ಬರಬೇಕು. ಆ ಮೇಲೆ ಹೈಕಮಾಂಡ್ ಏನು ತೀರ್ಮಾನ ಮಾಡ್ತಾರೆ ನೋಡೋಣ. ಈಗಲೇ ಚರ್ಚೆ ಮಾಡಿದ್ರೆ ಹೇಗೆ, ನಮಗೊಂದು ಹೈಕಮಾಂಡ್ ಇದೆ. ನಾವು ಬೈ ಎಲೆಕ್ಷನ್ ನಲ್ಲಿ 10 ಸೀಟು ಗೆಲ್ಲಬೇಕು. 5 ಸೀಟು ಗೆದ್ರೆ ಬಿಜೆಪಿ 112 ಸ್ಥಾನ ಆಗುತ್ತೆ. ಕಾಂಗ್ರೆಸ್ 10, ಜೆಡಿಎಸ್ ಒಂದು,ಎರಡು ಗೆಲ್ಲಬೇಕು. ಆಗ ಮಾತ್ರ ಈ ವಿಷಯ ಚರ್ಚೆಗೆ ಬರೋದು. ಇನ್ನು ಫಲಿತಾಂಶವೇ ಬಂದಿಲ್ಲ ಈಗಲೇ ಚರ್ಚೆ ಮಾಡಿದ್ರೆ ಹೇಗೆ, ಈಗಲೇ ಚರ್ಚೆ ಮಾಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. 

ಬೈ ಎಲೆಕ್ಷನ್ ನಲ್ಲಿ ಸಿದ್ದರಾಮಯ್ಯ ಏಕಾಂಗಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅದೆಲ್ಲ ಸುಳ್ಳು, ಬಿಜೆಪಿಯವರು ಪ್ರಚಾರಕ್ಕಾಗಿ ಹಾಗೆ ಹೇಳುತ್ತಾರೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಕಿಲ್ಲ. ಬಿಜೆಪಿ ಅಪಪ್ರಚಾರದವರಾಗಿದ್ದಾರೆ. ಲಕ್ಷಾಂತರ ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ ಎಂದು ತಿಳಿಸಿದ್ದಾರೆ. 

'ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅತಿ ಶೀಘ್ರದಲ್ಲಿ ಬಿಜೆಪಿಗೆ ಬರ್ತಾರೆ'

ಆಪರೇಷನ್ ಕಮಲ ಮಾಡೋಕೆ ಮುಂದಾದ್ರೆ ಜನ ಬಿಜೆಪಿಯವರನ್ನು ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ. ಸಿದ್ದರಾಮಯ್ಯ ಹೊರಗಿಟ್ಟು ಹೆಚ್. ಡಿ. ಕುಮಾಸ್ವಾಮಿ ಹಾಗೂ ಮಾಜಿ ಸಚಿವ ಡಿ ಕೆ ಶಿವಕುಮಾರ್ ಭೇಟಿ ಬಗ್ಗೆ ಗರಂ ಆದ ಸಿದ್ದರಾಮುಯ್ಯ ಹೈಕಮಾಂಡ್ ನವರು ಏನಾದ್ರೂ ಹೇಳಿದ್ದಾರೆ ಏನ್ರಿ ಎಂದು ಹೇಳಿದ್ದಾರೆ. 

ಇಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

click me!