ಮೈಸೂರು: 'ಸಿದ್ದರಾಮಯ್ಯ, ದೇವೇಗೌಡ ಇಬ್ಬರೂ ಬೆನ್ನಿಗೆ ಚೂರಿ ಹಾಕುವವರೇ'

Published : Aug 24, 2019, 12:24 PM IST
ಮೈಸೂರು: 'ಸಿದ್ದರಾಮಯ್ಯ, ದೇವೇಗೌಡ ಇಬ್ಬರೂ ಬೆನ್ನಿಗೆ ಚೂರಿ ಹಾಕುವವರೇ'

ಸಾರಾಂಶ

ವಿಧಾನಸಭೆ ಚುನಾವಣೆಯಲ್ಲಿ ಬಾಯಿಗೆ ಬಂದಂತೆ ಅಪ್ಪರಾಣೆ ಇಟ್ಟುಕೊಂಡು ಮಾತನಾಡಿದ್ರು. ಲೋಕಸಭೆಯಲ್ಲಿ ಭಾಯಿ ಭಾಯಿ ಅಂತ ಅಕ್ಕಪಕ್ಕದಲ್ಲಿ ಕುಳಿತುಕೊಂಡರು. ಕಳೆದ ಮೂರು ದಿನದಿಂದ ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡಿ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ಅವರು ದೇವೇಗೌಡ ಹಾಗೂ ಸಿದ್ದರಾಮಯ್ಯ ವಿರುದ್ಧ  ವಾಗ್ದಾಳಿ ನಡೆಸಿದ್ದಾರೆ.

ಮೈಸೂರು(ಆ.24): ಸಿದ್ದರಾಮಯ್ಯನೂ ಅಷ್ಟೆ, ದೇವೇಗೌಡರೂ ಅಷ್ಟೆ. ಇಬ್ಬರು ಬೆನ್ನಿಗೆ ಚೂರಿ ಹಾಕುವವರೇ ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನೂ ಎಷ್ಟೋ ಜನರ ಬೆನ್ನಿಗೆ ಚೂರಿ ಹಾಕಿಯೇ ಮೇಲೆ ಬಂದಿದ್ದು. ದೇವೇಗೌಡರು ಸಹ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದರು.

ಎಲ್ಲವನ್ನೂ ಜನ ನೋಡ್ತಿದ್ದಾರೆ:

ವಿಧಾನಸಭೆ ಚುನಾವಣೆಯಲ್ಲಿ ಬಾಯಿಗೆ ಬಂದಂತೆ ಅಪ್ಪರಾಣೆ ಇಟ್ಟುಕೊಂಡು ಮಾತನಾಡಿದ್ರು. ಲೋಕಸಭೆಯಲ್ಲಿ ಭಾಯಿ ಭಾಯಿ ಅಂತ ಅಕ್ಕಪಕ್ಕದಲ್ಲಿ ಕುಳಿತುಕೊಂಡರು. ಕಳೆದ ಮೂರು ದಿನದಿಂದ ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಜನ ಎಲ್ಲವನ್ನು ನೋಡುತ್ತಿದ್ದಾರೆ. ಇವರನ್ನು ನೋಡಿ ಜನ ಅಸಹ್ಯ ಪಡುತ್ತಿದ್ದಾರೆ. ರಾಜ್ಯದ ಸ್ಥಿತಿ ಗೂಳಿ ಜಗಳದಲ್ಲಿ ಜೋಳ ಹಾಳಾಯ್ತು ಎನ್ನುವಂತಾಗಿದೆ‌ ಎಂದರು.

ವಿರೋಧ ಪಕ್ಷದಲ್ಲಿದ್ದೀರಿ, ಈಗಲಾದರೂ ಜವಾಬ್ದಾರಿ ಅರಿತುಕೊಂಡು ಕೆಲಸ ಮಾಡಿ ಎಂದು ದೇವೇಗೌಡರು ಹಾಗೂ ಸಿದ್ದರಾಮಯ್ಯ ಹೆಸರು ಹೇಳಿ ವಿ.ಶ್ರೀನಿವಾಸ್ ಪ್ರಸಾದ್ ಸಲಹೆ ನೀಡಿದ್ದಾರೆ.

ಮಾನಸಿಕವಾಗಿ ಅವರು ಮೈತ್ರಿಯಾಗಿರಲಿಲ್ಲ‌. ದೈಹಿಕವಾಗಿ ಬಂದು ಒಟ್ಟಿಗೆ ಕುಳಿತುಕೊಳ್ಳುತ್ತಿದ್ದರು. ಸದನದಲ್ಲಿ ಪಾಯಿಂಟ್ ಆಫ್ ಆರ್ಡರ್  ಎತ್ತಿ ಸಿಎಂರನ್ನ ಸಮರ್ಥಿಸಿಕೊಂಡಿದ್ದೇ ಸಿದ್ದರಾಮಯ್ಯನೇ ಅಲ್ವಾ. ಈಗ್ಯಾಕೆ ಅವರ ಬಗ್ಗೆ ಮಾತನಾಡುತ್ತಿದ್ದಾರೆ..? ಇವರ ಹೇಳಿಕೆಗಳನ್ನ ನೋಡ್ತಿದ್ರೆ ಜನರಿಗೆ ಅಸಹ್ಯವಾಗುತ್ತೆ ಎಂದರು.

ಮೈಸೂರು ಜಿಲ್ಲೆಯ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಲೋಕಸಭೆಯಲ್ಲಿ ಭಾಯಿ ಭಾಯಿ ಅಂತ ಅಕ್ಕಪಕ್ಕದಲ್ಲಿ ಕುಳಿತುಕೊಂಡರು. ಕಳೆದ ಮೂರು ದಿನದಿಂದ ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಆಡಳಿತ ಪಕ್ಷಕ್ಕೆ ಬೆಂಬಲ ನೀಡಿ. ವಿರೋಧ ಪಕ್ಷದಲ್ಲಿ ಕುಳಿತು ಗಂಭೀರವಾಗಿ ಕೆಲಸ ಮಾಡಿ ಎಂದರು.

PREV
click me!

Recommended Stories

ತುಂಗಭದ್ರಾ ಜಲಾಶಯದ ಕ್ರಸ್ಟ್‌ಡ್ ಗೇಟ್‌ ಅಳವಡಿಕೆ ಹಿನ್ನೆಲೆ, 6 ತಿಂಗಳು ಕಾಲುವೆಗಳಿಗೆ ನೀರು ಸ್ಥಗಿತ!
KPTCL ಕೆಲಸ, ಶನಿವಾರ ಬೆಂಗಳೂರಲ್ಲಿ ಕರೆಂಟ್‌ ಇರಲ್ಲ..!