ಕೊರೋನಾ ವಾರಿಯರ್ಸ್‌ ಮೇಲೆ ಹಲ್ಲೆ ನಡೆಸೋರಿಗೆ ಗುಂಡಿಕ್ಕಿ ಎಂದ BJP ಶಾಸಕ

Kannadaprabha News   | Asianet News
Published : Apr 21, 2020, 07:09 AM IST
ಕೊರೋನಾ ವಾರಿಯರ್ಸ್‌ ಮೇಲೆ ಹಲ್ಲೆ ನಡೆಸೋರಿಗೆ ಗುಂಡಿಕ್ಕಿ ಎಂದ BJP ಶಾಸಕ

ಸಾರಾಂಶ

ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡುವವರನ್ನು ಪೊಲೀಸರು ಗುಂಡು ಹಾರಿಸಿ ಕೊಲ್ಲಬೇಕು’ ಎಂದು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು(ಏ.21): ಪಾದರಾಯಪುರದಲ್ಲಿ ಕೊರೋನಾ ವಾರಿಯರ್ಸ್‌ಗಳಾದ ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸ್‌ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ‘ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡುವವರನ್ನು ಪೊಲೀಸರು ಗುಂಡು ಹಾರಿಸಿ ಕೊಲ್ಲಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಪ್ರಕರಣ ಭಾನುವಾರ ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದ ಅವರು, ತ್ಯಾಗಮಯಿಗಳ ಮೇಲೆ ದಾಳಿ ಮಾಡುವವರು ಯಾರೇ ಆಗಲಿ, ಅವನನ್ನು ಗುಂಡಿಟ್ಟು ಕೊಂದರೂ ತಪ್ಪಿಲ್ಲ.

ಹೋಂ ಕ್ವಾರಂಟೈನ್‌ಗಳ ಮೇಲೆ ನಿಗಾ ಇಡುವುದಕ್ಕೆ App; ಬೆಳ್ತಂಗಡಿಯಲ್ಲಿ ಮೊದಲ ಪ್ರಯೋಗ

ಇಂಥ ಸಂದರ್ಭಗಳಲ್ಲಿ ಪೊಲೀಸರು ಅವರ ಶಕ್ತಿಯನ್ನು ಉಪಯೋಗಿಸಲು ಅಧಿಕಾರ ನೀಡಿ ಗೃಹಮಂತ್ರಿಗಳೇ ಎಂದಿದ್ದರು. ಶಾಸಕರ ಈ ಹೇಳಿಕೆ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿತ್ತು. ಸೋಮವಾರ ಮತ್ತೆ ಫೇಸ್ಬುಕ್‌ನಲ್ಲಿ ಹರೀಶ್‌ ಪೂಂಜಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

PREV
click me!

Recommended Stories

ಕೋಲಾರ ಬೀದರ್ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್, ಅಲರ್ಟ್ ಆದ ಪೊಲೀಸರು, ತೀವ್ರ ತಪಾಸಣೆ
ಮೈಸೂರು, ಮಂಡ್ಯದಲ್ಲಿ ಬಾಲ್ಯ ವಿವಾಹಕ್ಕೆ ಗಣನೀಯ ಇಳಿಕೆ, ಸರ್ಕಾರದಿಂದ ಸಿಕ್ಕಿತು ನೆಮ್ಮದಿಯ ಸುದ್ದಿ