ಪತ್ನಿ ಬಳಿ ಕೊಟ್ಯಂತರ ಸಾಲ ಪಡೆದಿರುವ ಶಿರಾ ಅಭ್ಯರ್ಥಿ ರಾಜೇಶ್‌

Kannadaprabha News   | Asianet News
Published : Oct 16, 2020, 07:47 AM IST
ಪತ್ನಿ ಬಳಿ ಕೊಟ್ಯಂತರ ಸಾಲ ಪಡೆದಿರುವ ಶಿರಾ ಅಭ್ಯರ್ಥಿ ರಾಜೇಶ್‌

ಸಾರಾಂಶ

ತುಮಕೂರು ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ತಮ್ಮ ಪತ್ನಿ  ಕೋಟಿ ಕೋಟಿ ರು ಮೌಲ್ಯದ ಸಾಲ ಪಡೆದುಕೊಂಡಿದ್ದಾರೆ

ತುಮಕೂರು (ಅ.16): ಶಿರಾ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ರಾಜೇಶಗೌಡ ತಮ್ಮ ಬಳಿ 15 ಕೋಟಿ ರು. ಆಸ್ತಿ ಇದ್ದು, ತಮ್ಮ ಪತ್ನಿ ತೇಜಸ್ವಿನಿ ಹೆಸರಲ್ಲಿ 4 ಕೋಟಿ ರು. ಮೌಲ್ಯದ ಆಸ್ತಿ ಇದೆ.

2019-20ರ ವಾರ್ಷಿಕ ಆದಾಯ 2.57 ಕೋಟಿ ರು. , ನಗದು 1.9 ಲಕ್ಷ ರು. ಎಂದು ಹೇಳಿದ್ದಾರೆ. 

ಆ್ಯಕ್ಸಿಸ್‌ ಬ್ಯಾಂಕಿನಲ್ಲಿ 3.8 ಲಕ್ಷ ರು. ಮ್ಯೂಚುಯಲ್‌ ಫಂಡ್‌, ಮ್ಯಾಟ್ರಿಕ್‌ ಇಮೆಜಿನ್‌ ಇಂಡಿಯಾದಲ್ಲಿ 4500 ಷೇರು, ಸ್ಪೆಕ್ಟ್ರಂ ಡಯಾಗ್ನಾಸ್ಟಿಕ್‌ ಹೆಲ್ತ್‌ಕೇರ್‌ನಲ್ಲಿ ರಾಜೇಶ್‌ ಗೌಡ ಮತ್ತು ಪತ್ನಿ 1.20 ಕೋಟಿ ರು., ಎಂ.ಎಸ್‌.ಸ್ಪೆಕ್ಟ್ರಂ ಡಯಾಗ್ನಾಸ್ಟಿಕ್‌ ಆ್ಯಂಡ್‌ ಹೆಲ್ತ್ ಕೇರ್‌ನಲ್ಲಿ 1.56 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದಾರೆ.

ಬೈ ಎಲೆಕ್ಷನ್: ಶಿರಾದಲ್ಲಿ ಧೂಳೆಬ್ಬಿಸಿದ ಡಿಕೆ ಶಿವಕುಮಾರ್-ಸಿದ್ಧರಾಮಯ್ಯ ..

ತಂದೆ ಮೂಡಲಗಿರಿಯಪ್ಪರ ಬಳಿ 1 ಕೋಟಿ, ಪತ್ನಿ ತೇಜಸ್ವಿನಿ ಬಳಿ 1.43 ಕೋಟಿ, ಸಹೋದರಿ ಡಾ.ಕವಿತಾ ಬಳಿ 60 ಲಕ್ಷ ಹಾಗೂ ತಾಯಿ ಲಕ್ಷ್ಮಿದೇವಿ ಬಳಿ 15 ಲಕ್ಷ ಸಾಲ ಮಾಡಿದ್ದಾರೆ.

PREV
click me!

Recommended Stories

ಶಿರೂರು ಪರ್ಯಾಯೋತ್ಸವ : ಗರಿಗೆದರಿದ ಉಡುಪಿ
ಕಾರವಾರ ಯುವತಿ ಆತ್ಮಹ*ತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮರು ಮರಣೋತ್ತರ ಪರೀಕ್ಷೆಗೆ ಪೋಷಕರ ಪಟ್ಟು!