ಯಡಿಯೂರಪ್ಪ ಬಳಿಕ ಇವರೇ ಅಂತೆ ಮುಂದಿನ ಮುಖ್ಯಮಂತ್ರಿ..!

Kannadaprabha News   | Asianet News
Published : Jul 25, 2021, 07:55 AM ISTUpdated : Jul 25, 2021, 08:16 AM IST
ಯಡಿಯೂರಪ್ಪ ಬಳಿಕ ಇವರೇ ಅಂತೆ ಮುಂದಿನ ಮುಖ್ಯಮಂತ್ರಿ..!

ಸಾರಾಂಶ

* ಮುಂದಿನ ಸಿಎಂ ಮುನೇನಕೊಪ್ಪ! * ಶಾಸಕರ ಅಭಿಮಾನಿಗಳಿಂದ ಫೇಸ್‌ಬುಕ್‌ನಲ್ಲಿ ಪೋಸ್ಟ್‌ * ತಮ್ಮ ಪರವಾಗಿ ಪೋಸ್ಟ್‌ ಮಾಡದಂತೆ ಶಾಸಕ ಮುನೇನಕೊಪ್ಪ ಮನವಿ  

ಹುಬ್ಬಳ್ಳಿ(ಜು.25): ‘ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮುಂದಿನ ಸಿಎಂ...!’ ಇಂಥದೊಂದು ಸಂದೇಶ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶಾಸಕರ ಅಭಿಮಾನಿಗಳು ಪೇಸ್‌ಬುಕ್‌ಲ್ಲಿ ಈ ಪೋಸ್ಟ್‌ ಹಾಕಿದ್ದು, ಅದಕ್ಕೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿವೆ. ಎರಡು ದಿನಗಳಿಂದ ಇದು ಬಹುಚರ್ಚಿತ ವಿಷಯವಾಗಿದೆ. ಆದರೆ ಶಾಸಕರು ಮಾತ್ರ ತಮ್ಮ ಪರವಾಗಿ ಈ ರೀತಿ ಪೋಸ್ಟ್‌ ಹಾಕದಂತೆ ಮನವಿ ಮಾಡಿದ್ದಾರೆ.

ಅತ್ತ ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಕುರಿತು ರಾಜ್ಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ರೇಸ್‌ನಲ್ಲಿ ಇರುವ ಶಾಸಕರ ಹೆಸರುಗಳು ಹೊರ ಬೀಳುತ್ತಿವೆ. ಲಿಂಗಾಯತ ಮುಖಂಡರೆನಿಸಿರುವ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿದರೆ ಲಿಂಗಾಯತರಿಗೆ ಪಟ್ಟ ಕಟ್ಟಬೇಕು ಎಂಬ ಬೇಡಿಕೆ ಹಲವು ಮಠಾಧೀಶರು, ಮುಖಂಡರದ್ದು. ಅದರಲ್ಲೂ ಪಂಚಮಸಾಲಿ ಸಮುದಾಯಕ್ಕೆ ಸೇರಿದವರೇ ಸಿಎಂ ಸ್ಥಾನ ಅಲಂಕರಿಸಲಿ ಎಂಬ ಕೂಗು ಒಂದೆಡೆ ಕೇಳಿ ಬರುತ್ತಿದ್ದಂತೆ ಸಚಿವ ಮುರುಗೇಶ ನಿರಾಣಿ, ಶಾಶಕ ಅರವಿಂದ ಬೆಲ್ಲದ ಅವರ ಹೆಸರು ಚಾಲ್ತಿಗೆ ಬಂದಿವೆ. ಇದೀಗ ಅದೇ ಪಂಚಮಸಾಲಿ ಸಮುದಾಯಕ್ಕೆ ಸೇರಿರುವ ಶಂಕರ ಪಾಟೀಲ ಮುನೇನಕೊಪ್ಪ ಅವರನ್ನು ಸಿಎಂ ಮಾಡಿ ಎಂಬ ಬೇಡಿಕೆ ಅವರ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ.

ಗರಿಗೆದರಿದೆ ಭಾರೀ ಕುತೂಹಲ: ಶ್ರಾವಣಕ್ಕೆ ಹೊಸ ಸಿಎಂ? ದೆಹಲಿ ಸಂದೇಶವೇನು?

ರಾಜ್ಯದಲ್ಲಿ 13 ಜನ ಪಂಚಮಸಾಲಿ ಶಾಸಕರಿದ್ದಾರೆ. ಈ 13ರಲ್ಲಿ ಸಿಎಂ ಆಗಲು ಯಾರು ಯೋಗ್ಯರು? ಎಂಬ ಸಂದೇಶ ಹರಿಬಿಟ್ಟಿದ್ದು, ಅದಕ್ಕೆ ಹಲವರು ಮುನೇನಕೊಪ್ಪ ಹೆಸರನ್ನು ಪ್ರಸ್ತಾಪಿಸಿ, ಇವರು ಯೋಗ್ಯರು ಎಂದು ಕಮೆಂಟ್‌ ಮಾಡಿದ್ದಾರೆ.
 

PREV
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ