
ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನ ಹಲವೆಡೆ ಇಂದು ಮಧ್ಯಂತರವಾಗಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಪ್ರಕಟಣೆ ಹೊರಡಿಸಿದೆ.
ಬೆಸ್ಕಾಂ ಮಾಹಿತಿ ಪ್ರಕಾರ, 66/11 ಕೆ.ವಿ ಹೆಣ್ಣೂರು ರಸ್ತೆ ಉಪ-ಕೇಂದ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ತುರ್ತು ಕಾಮಗಾರಿಯಿಂದಾಗಿ, ಇಂದು ಬೆಳಗ್ಗೆಯಿಂದ ಸಂಜೆ 05:30 ಗಂಟೆಯವರೆಗೆ ಮಧ್ಯಂತರವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ಈ ಅವಧಿಯಲ್ಲಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿಕೊಂಡಿದೆ.
ಹೆಣ್ಣೂರು ಬಂಡೆ, ಸಾಮುದ್ರಿಕಾ ಎನ್ಕ್ಲೇವ್, ಗ್ರೇಸ್ ಗಾರ್ಡನ್, ಕ್ರಿಸ್ಟ್ ಜಯಂತಿ ಕಾಲೇಜು ಸುತ್ತಮುತ್ತ, ಕೆ. ನಾರಾಯಣಪುರ, ಆಶಾ ಟೌನ್‌ಶಿಪ್, ಐಶ್ವರ್ಯ ಲೇಔಟ್, ಮಾರುತಿ ಟೌನ್‌ಶಿಪ್, ನಗರಗಿರಿ ಟೌನ್‌ಶಿಪ್, ಕೆ. ನಾರಾಯಣಪುರ ಕ್ರಾಸ್, ಬಿಡಿಎಸ್ ಗಾರ್ಡನ್, ಕೊತ್ತನೂರು, ಪಟೇಲ್ ರಾಮಯ್ಯ ಲೇಔಟ್, ಅಂಜನಪ್ಪ ಲೇಔಟ್, ಸಿಎಸ್ಐ ಗೇಟ್, ಬೈರತಿ ಕ್ರಾಸ್, ಬೈರತಿ ಗ್ರಾಮ, ಎವರ್ಗ್ರೀನ್ ಲೇಔಟ್, ಕನಕಶ್ರೀ ಲೇಔಟ್, ಗೆದ್ದಲಹಳ್ಳಿ, ಬ್ಲೆಸ್ಸಿಂಗ್ ಗಾರ್ಡನ್, ಮಂತ್ರಿ ಅಪಾರ್ಟ್‌ಮೆಂಟ್, ಹಿರೇಮಠ್ ಲೇಔಟ್, ಟ್ರಿನಿಟಿ ಫಾರ್ಚ್ಯೂನ್, ಮೈಕಲ್ ಶಾಲೆ, ಬಿಎಚ್‌ಕೆ ಇಂಡಸ್ಟ್ರೀಸ್, ಜಾನಕಿರಾಮ್ ಲೇಔಟ್, ವಡ್ಡರಪಾಳ್ಯ, ಅನುಗ್ರಹ ಲೇಔಟ್, ಕಾವೇರಿ ಲೇಔಟ್, ದೊಡ್ಡಗುಬ್ಬಿ ಕ್ರಾಸ್, ಕುವೆಂಪು ಲೇಔಟ್, ಸಂಗಮ್ ಎನ್ಕ್ಲೇವ್, ನಕ್ಷತ್ರ ಲೇಔಟ್, ತಿಮ್ಮೇಗೌಡ ಲೇಔಟ್, ಆಂಧ್ರ ಕಾಲೋನಿ, ಮಂಜುನಾಥ ನಗರ, ಹೊರಮಾವು ಬಿಬಿಎಂಪಿ ವ್ಯಾಪ್ತಿ, ಅಗರ ಗ್ರಾಮ, ಪಾತಾಳಮ್ಮ ದೇವಸ್ಥಾನ ಸುತ್ತಮುತ್ತ, ಎಕೆಆರ್ ಶಾಲೆ, ನ್ಯೂ ಮಿಲೇನಿಯಮ್ ಶಾಲೆ, ಲಕ್ಕಮ್ಮ ಲೇಔಟ್, ಪ್ರಕಾಶ್ ಗಾರ್ಡನ್, ಕ್ರಿಶ್ಚಿಯನ್ ಕಾಲೇಜು ರಸ್ತೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳು ಸೇರಿವೆ.
ತುರ್ತು ನಿರ್ವಹಣಾ ಕಾಮಗಾರಿಯು ವಿದ್ಯುತ್ ವ್ಯವಸ್ಥೆಯ ಸುರಕ್ಷತೆ ಮತ್ತು ಸುಧಾರಣೆಯ ದೃಷ್ಟಿಯಿಂದ ಅಗತ್ಯವಾಗಿರುವುದರಿಂದ, ಸಾರ್ವಜನಿಕರು ಈ ಅವಧಿಯಲ್ಲಿ ಸಹಕರಿಸುವಂತೆ ಹಾಗೂ ಮುಂಚಿತವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಬೆಸ್ಕಾಂ ಮನವಿ ಮಾಡಿದೆ. ಕಾಮಗಾರಿ ಪೂರ್ಣಗೊಂಡ ನಂತರ ವಿದ್ಯುತ್ ಪೂರೈಕೆಯನ್ನು ಸಹಜ ಸ್ಥಿತಿಗೆ ತರಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.