ಸೈನೆಡ್‌ ಮೋಹನ್‌ ಕೊನೆಯ ಕೇಸ್‌ ಕೂಡಾ ಸಾಬೀತು

By Kannadaprabha News  |  First Published Jun 21, 2020, 7:43 AM IST

ಸರಣಿ ಸ್ತ್ರೀ ಹಂತಕ, ಸೈನೆಡ್‌ ಮೋಹನ್‌, ಕಾಸರಗೋಡಿನ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಬೆಂಗಳೂರಿಗೆ ಕರೆದೊಯ್ದು, ಅತ್ಯಾಚಾರ ಎಸಗಿ ಬಳಿಕ ಸೈನೆಡ್‌ ಮಾತ್ರೆ ನೀಡಿ ಕೊಲೆ ಮಾಡಿದ ಪ್ರಕರಣ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶನಿವಾರ ಸಾಬೀತಾಗಿದೆ.


ಮಂಗಳೂರು(ಜೂ.21): ಸರಣಿ ಸ್ತ್ರೀ ಹಂತಕ, ಸೈನೆಡ್‌ ಮೋಹನ್‌, ಕಾಸರಗೋಡಿನ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಬೆಂಗಳೂರಿಗೆ ಕರೆದೊಯ್ದು, ಅತ್ಯಾಚಾರ ಎಸಗಿ ಬಳಿಕ ಸೈನೆಡ್‌ ಮಾತ್ರೆ ನೀಡಿ ಕೊಲೆ ಮಾಡಿದ ಪ್ರಕರಣ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶನಿವಾರ ಸಾಬೀತಾಗಿದೆ.

19ನೇ ಪ್ರಕರಣದಲ್ಲಿ ಸೈನೈಡ್‌ ಮೋಹನ್‌ಗೆ ಜೀವಾವಧಿ

Tap to resize

Latest Videos

undefined

ಇದು ಸೈನೈಡ್‌ ಮೋಹನ್‌ನ 20ನೇ ಹಾಗೂ ಕೊನೆಯ ಪ್ರಕರಣವಾಗಿದೆ. ಶಿಕ್ಷೆಯ ಪ್ರಮಾಣದ ಬಗ್ಗೆ ಜೂ.24ರಂದು ವಿಚಾರಣೆ ನಡೆಯಲಿದೆ. 2009 ಅಕ್ಟೋಬರ್‌ನಲ್ಲಿ ಮೋಹನ್‌ ಬಂಧಿತನಾದ ವೇಳೆ ಯುವತಿಯ ತಂಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

18ನೇ ಪ್ರಕರಣದಲ್ಲೂ ಸೈನೈಡ್‌ ಮೋಹನ್‌ ಅಪರಾಧ ಸಾಬೀತು

ಈ ಪ್ರಕರಣದಲ್ಲಿ ಮೃತ ಯುವತಿಯ ಪರೀಕ್ಷೆಯಲ್ಲಿ ಸೈನೆಡ್‌ ಅಂಶ ಇರುವುದು ದೃಢೀಕರಣಗೊಂಡಿತ್ತು. ಆರೋಪಿ ಮೋಹನ್‌, ಯುವತಿಯನ್ನು ಸೈನೆಡ್‌ ತಿನ್ನಿಸಿ ಕೊಲೆ ಮಾಡಿರುವ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶರಾದ ಸಯೀದುನ್ನಿಸಾ ತೀರ್ಮಾನಿಸಿ ಆತ ತಪ್ಪಿತಸ್ಥ ಎಂದು ಘೋಷಿಸಿದ್ದಾರೆ. ಈ ಪ್ರಕರಣದಲ್ಲಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಜುಡಿತ್‌ ಒ.ಎಂ.ಕ್ರಾಸ್ತಾ ಅವರು ಈ ಮೊದಲು ಹಾಗೂ ಪ್ರಸ್ತುತ ಜಯರಾಮ ಶೆಟ್ಟಿಅವರು ವಾದಿಸಿದ್ದರು.

click me!