ನಿಮ್ಮ ತಾತನಂತೆ ಕೆಲಸ ಮಾಡು-ಇಲ್ಲ ಪಟ್ಟ ಬಿಟ್ಟು ಕೊಡು : ರಾಹುಲ್‌ಗೆ ದೊರೆಸ್ವಾಮಿ

Kannadaprabha News   | Asianet News
Published : Feb 02, 2021, 07:08 AM IST
ನಿಮ್ಮ ತಾತನಂತೆ ಕೆಲಸ ಮಾಡು-ಇಲ್ಲ ಪಟ್ಟ  ಬಿಟ್ಟು ಕೊಡು : ರಾಹುಲ್‌ಗೆ ದೊರೆಸ್ವಾಮಿ

ಸಾರಾಂಶ

ನಿಮ್ಮ ತಾತನ ಚರಿತ್ರೆ ಓದಿ ಅವರ ತರ ಕೆಲಸ ಮಾಡು ಇಲ್ಲದಿದ್ದಲ್ಲಿ ಪಟ್ಟ ಬಿಟ್ಟುಕೊಡು ಹೀಗೆಂದು ಹೀಗೆಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ  ರಾಹುಲ್ ಗಾಂಧಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ಮೈಸೂರು (ಫೆ.02): ‘ದೇಶ ಹೊತ್ತಿ ಉರಿಯುತ್ತಿದ್ದರೂ ಕಾಂಗ್ರೆಸ್‌ ಸತ್ತು ಹೋಗಿದ್ದು, ಈ ರಾಹುಲ್ ಗಾಂಧಿಯಂತೂ ಮನೆಯಿಂದ ಹೊರಗೆ ಬರುವುದೇ ಇಲ್ಲ’ ಎಂದು ಆಕ್ಷೇಪಿಸಿರುವ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ‘ನಿಮ್ಮ ತಾತ ನೆಹರೂ ಅವರ ಚರಿತ್ರೆ ಓದಿ, ಅವರಂತೆ ಕೆಲಸ ಮಾಡು. 

ಇಲ್ಲದಿದ್ದರೆ ನಿಮ್ಮ ಕುಟುಂಬ ಬಿಟ್ಟು ಬೇರೆಯವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಲಿ’ ಎಂದು ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ನಗರದಲ್ಲಿ ಸೋಮವಾರ ಖಾಸಗಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಎಚ್‌.ಡಿ. ದೇವೇಗೌಡ ಅವರು ಆರು ಕೊಟ್ಟರೆ ಅತ್ತೆ ಕಡೆಗೆ ಮೂರು ಕೊಟ್ಟರೆ ಸೊಸೆ ಕಡೆಗೆ ಎಂಬಂತೆ ಆಡುತ್ತಿದ್ದಾರೆ. ಇವರನ್ನು ನಂಬಿದರೆ ಯಾವುದೇ ಹೋರಾಟ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ನಮ್ಮ ಬೆಂಗಳೂರು ಅವಾರ್ಡ್‌: ಜೀವಮಾನ ಸಾಧನೆ ಪ್ರಶಸ್ತಿಗೆ ದೊರೆಸ್ವಾಮಿ ಭಾಜನ .

ದೇಶವನ್ನು ಉಳಿಸಿಕೊಳ್ಳಲು ಒಂದೂವರೆ ಸಾವಿರ ಮಂದಿಯನ್ನು ಸೇರಿಸಿ ಹೋರಾಡಲು ತಯಾರಿ ನಡೆಸುತ್ತಿದ್ದೇನೆ. ಹಿಂದೂ, ಕ್ರೈಸ್ತ, ಮುಸ್ಲಿಂ ತಲಾ 500 ಮಂದಿಯೊಂದಿಗೆ ದೆಹಲಿಯಲ್ಲಿ ಹೋಗಿ ಹೋರಾಟ ಮಾಡಲು ಸಿದ್ದನಾಗಿದ್ದೇನೆ. 

ಈ ಹಿನ್ನೆಲೆಯಲ್ಲಿ ಈಗಾಗಲೇ ನಿರಂತರವಾಗಿ ಸಭೆ ನಡೆಸುತ್ತಿದ್ದೇನೆ. ಇವರಲ್ಲಿ ಈಗಾಗಲೇ 200ರಿಂದ 300 ಮಂದಿ ಜೈಲಿಗೆ ಹೋಗಲೂ ಸಿದ್ಧ ಎಂದರು.

-ರಾಹುಲ್‌ ಗಾಂಧಿಗೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಸಲಹೆ

PREV
click me!

Recommended Stories

ಬೆಂಗಳೂರು : ನಗರದ 5 ಪಾಲಿಕೆಗೆ ಬ್ಯಾಲೆಟ್‌ ಪೇಪರಲ್ಲೇ ಚುನಾವಣೆ
ತವರಿನಲ್ಲಿ ಬಿಗ್‌ಬಾಸ್‌ ವಿಜೇತ ಗಿಲ್ಲಿ ನಟಗೆ ಅದ್ಧೂರಿ ಸ್ವಾಗತ