ಹಿರಿಯ ವರದಿಗಾರ ಸುನೀಲ್ ಹೆಗ್ಗರವಳ್ಳಿ ಇನ್ನಿಲ್ಲ

By Suvarna News  |  First Published Jul 12, 2021, 8:42 PM IST

* ಹಿರಿಯ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ನಿಧನ
* ಗೋಣಿಬೀಡು ಆಸ್ಪತ್ರೆಯಲ್ಲಿ ಹೃದಯಘಾತದಿಂದ ಕೊನೆಯುಸಿರು
* ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿಯ ಸುನೀಲ್
* ರವಿ ಬೆಳಗೆರೆ  ಜತೆ ಗುರುತಿಸಿಕೊಂಡಿದ್ದವರು


ಬೆಂಗಳೂರು(ಜು. 12)  ಅಪರಾಧ ಜಗತ್ತಿನ  ಹಿರಿಯ ವರದಿಗಾರ ಸುನೀಲ್ ಹೆಗ್ಗರವಳ್ಳಿ (43) ಅಕಾಲಿಕ ಸಾವನ್ನಪ್ಪಿದ್ದಾರೆ. ಹಾಯ್ ಬೆಂಗಳೂರು ಪತ್ರಿಕೆ ಪತ್ರಿಕೆ ಮೂಲಕ ತಮ್ಮ ವೃತ್ತಿಜೀವನವನ್ನುಆರಂಭಿಸಿದ ಸುನೀಲ್ ಹೆಗ್ಗರವಳ್ಳಿ ತಮ್ಮ  ಸ್ವಂತ ಜಿಲ್ಲೆಯಾದ ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಹೃದಯಾಘಾತದಿಂದ ನಿಧನರಾಗಿದ್ದಾರೆ.  ಹಾಯ್ ಬೆಂಗಳೂರು ಪತ್ರಿಕೆಯ ವರದಿಗಾರರಾಗಿ ಅವರು ಮಾಡಿದ ಸಾಕಷ್ಟು ವರದಿಗಳು ದೊಡ್ಡ ಸಂಚಲನವನ್ನೇ ಮೂಡಿಸಿದ್ದವು. ಹಿರಿಯ ಪತ್ರಕರ್ತ ರವಿ ಬೆಳಗೆರೆಯವರ ಅತ್ಯಾಪ್ತನಾಗಿದ್ದುಕೊಂಡು ನಂತರ ಅನಾರೋಗ್ಯದ ಸನ್ನಿವೇಶದಲ್ಲಿ ಪತ್ರಿಕೆಯನ್ನು ಸಂಪಾದಕನಾಗಿ ಮುನ್ನಡೆಸಿದ್ದರು.

Tap to resize

Latest Videos

ಟೈಗರ್ ಜಿಂದಾ ಹೈ; ಬೆಳಗೆರೆ ಸಂದರ್ಶನ

ಗೋಣಿಬೀಡು ಆಸ್ಪತ್ರೆಯಲ್ಲಿ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿಯ ಸುನೀಲ್ ರವಿ ಬೆಳಗೆರೆ ಜತೆ ಗುರುತಿಸಿಕೊಂಡಿದ್ದರು
ಶೂಟೌಟ್ ವಿವಾದದ ಸನ್ನಿವೇಶದಲ್ಲಿ ರವಿ ಬೆಳಗೆರೆ ಅವರ ಮೇಲೆಯೇ ಸುಪಾರಿ ಆರೋಪ ಮಾಡಿ ಹಾಯ್ ಬೆಂಗಳೂರು ಕಚೇರಿಯಿಂದ ಹೊರಬಿದ್ದಿದ್ದರು ಹೆಗ್ಗರವಳ್ಳಿ.ನಂತ್ರ ಚಾರ್ಲಿ ಟೈಮ್ಸ್ ಕ್ರೈಮ್ ಪೇಪರ್ ಶುರುಮಾಡಿದ್ದರು. ಯೂ ಟ್ಯೂಬ್ ಚಾನೆಲ್ ಕೂಡ ಆರಂಭಿಸಿ ಗಮನ ಸೆಳೆದಿದ್ದರು. ಅಕಾಲಿಕ ನಿಧನಕ್ಕೆ ಪತ್ರಕರ್ತ ಸಮೂಹ ಸಂತಾಪ ವ್ಯಕ್ತಪಡಿಸಿದೆ

click me!