ಮಂಗಳೂರು: ಸ್ಪೀಕರ್ ಖಾದರ್ ವಿರುದ್ಧ ಅವಹೇಳನ ಪೋಸ್ಟ್‌, ಎಸ್‌ಡಿಪಿಐ ಮುಖಂಡ ರಿಯಾಜ್ ಅರೆಸ್ಟ್

By Girish Goudar  |  First Published Dec 12, 2023, 9:31 PM IST

ಎಸ್‌ಡಿಪಿಐ ಮುಖಂಡ ರಿಯಾಜ್ ಕಡಂಬುವನ್ನು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋ ತೆರವು ವಿಚಾರದಲ್ಲಿ ಫೋಟೋ ತೆರವು ಮಾಡುವ ಬಗ್ಗೆ ಸ್ಪೀಕರ್ ಖಾದರ್ ಅಭಿಪ್ರಾಯ ತಿಳಿಸಿದ್ದರು. 'ನನ್ನ ಕೆಲಸ ಜೋಡಿಸುವುದು, ಕಿತ್ತು ಬಿಸಾಕುವುದಲ್ಲ' ಎಂದಿದ್ದರು ಖಾದರ್. ಆದರೆ ಇದಕ್ಕೆ ವಿರುದ್ಧವಾಗಿ ಫೇಸ್ ಬುಕ್ ನಲ್ಲಿ ಖಾದರ್ ವಿರುದ್ಧ ಪೋಸ್ಟ್ ಹಾಕಿದ್ದ ರಿಯಾಜ್ 


ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು(ಡಿ.12):  ಸಾವರ್ಕರ್ ವಿಚಾರದಲ್ಲಿ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವಹೇಳನ ಆರೋಪದಡಿ ಎಸ್‌ಡಿಪಿಐ ಪಕ್ಷದ ಮುಖಂಡನನ್ನು ಮಂಗಳೂರು ಪೊಲೀಸರು ಇಂದು(ಮಂಗಳವಾರ) ಬಂಧಿಸಿದ್ದಾರೆ.

Tap to resize

Latest Videos

ಎಸ್‌ಡಿಪಿಐ ಮುಖಂಡ ರಿಯಾಜ್ ಕಡಂಬುವನ್ನು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋ ತೆರವು ವಿಚಾರದಲ್ಲಿ ಫೋಟೋ ತೆರವು ಮಾಡುವ ಬಗ್ಗೆ ಸ್ಪೀಕರ್ ಖಾದರ್ ಅಭಿಪ್ರಾಯ ತಿಳಿಸಿದ್ದರು. 'ನನ್ನ ಕೆಲಸ ಜೋಡಿಸುವುದು, ಕಿತ್ತು ಬಿಸಾಕುವುದಲ್ಲ' ಎಂದಿದ್ದರು ಖಾದರ್. ಆದರೆ ಇದಕ್ಕೆ ವಿರುದ್ಧವಾಗಿ ಫೇಸ್ ಬುಕ್ ನಲ್ಲಿ ಖಾದರ್ ವಿರುದ್ಧ ರಿಯಾಜ್ ಪೋಸ್ಟ್ ಹಾಕಿದ್ದರು‌.

ಮಂಗಳೂರು: ನರ್ಸಿಂಗ್‌ ಕೋರ್ಸ್‌ಗೆ ಸೇರಿದ ವಾರದಲ್ಲೇ ವಿದ್ಯಾರ್ಥಿ ಆತ್ಮಹತ್ಯೆ!

ರಿಯಾಜ್ ಹಾಕಿದ್ದ ಪೋಸ್ಟ್ ನಲ್ಲೇನಿತ್ತು?

'ಇಷ್ಟೇ... ಅದ್ಯಾವ ಪರಿಸರ ಹೇಳಿ, ಚಪ್ಪಲಿ ನೆಕ್ಕಿ ಸಾವರ್ಕರ್ ನ ಫೋಟೋವನ್ನು ಇಟ್ಟು ಜೋಡಿಸುತ್ತಿದ್ದ ಪರಿಸರ. ಈ ವ್ಯಕ್ತಿಯಿಂದ RSS ವಿರುದ್ಧ ನಿಲ್ಲಲು ಈ ಆಯಸ್ಸು ಪೂರ್ತಿ ಅಧಿಕಾರದಲ್ಲಿದ್ದರೂ ಸಾಧ್ಯವಿಲ್ಲ. ಚುನಾವಣೆಯಲ್ಲಿ ಕೇಳ್ತಿದ್ರಲ್ಲಾ SDPI ಯಾಕೆ ಒಬ್ಬ ಮುಸ್ಲಿಂ MLA ವಿರುದ್ಧ ಸ್ಪರ್ಧೆ ಮಾಡುವುದು ಅಂತ.‌ 'ನೋಡಿ ಉತ್ತರ ಸ್ಪಷ್ಟವಿದೆ ದೇಶದ್ರೋಹಿ, ಸಂವಿಧಾನ ವಿರೋಧಿ, ಜಾತ್ಯತೀತ ವಿರೋಧಿ, ಕೋಮುವಾದಿ RSS ಜೊತೆ ಹೊಂದಾಣಿಕೆ ಮಾಡಿಕೊಂಡು ಈ ರೀತಿ ಜೋಡಿಸಲು ಹೊರಟಿರುವುದಕ್ಕೆ. ಎಂದಾದರೂ ಒಂದು ದಿನ SDPI ಅದೊರಳಗೆ ಲಗ್ಗೆ ಇಟ್ಟರೆ, ಕಿತ್ತು ಬಿಸಾಕಿಯೇ ಬಿಸಾಕಲು ಸದನದಲ್ಲಿ ಹೋರಾಟ ಮಾಡಿಯೇ ಮಾಡುತ್ತೇವೆ. ಅದ್ಯಾವ ವ್ಯಕ್ತಿ ಸಭಾಧ್ಯಕ್ಷ ಆಗಿದ್ದರೂ ಕೂಡ. ಈ ಸಭಾಧ್ಯಕ್ಷರಿಗೆ ಚಾಲೆಂಜ್ ಕಿತ್ತು ಬಿಸಾಕಿ, ಟಿಪ್ಪು ಭಾವಚಿತ್ರ ಧಮ್ಮಿದ್ದರೆ ಅಳವಡಿಸಿ ಎಂದು ಖಾದರ್ ವಿರುದ್ದ ಪೋಸ್ಟ್ ಮಾಡಿದ್ದ ರಿಯಾಜ್ ಕಡಂಬು. ಸದ್ಯ ಮಂಗಳೂರಿನ ಉರ್ವಾ ಠಾಣೆಯಲ್ಲಿ ರಿಯಾಜ್ ವಿಚಾರಣೆ ನಡೆಯುತ್ತಿದೆ.

ರಿಯಾಜ್ ಬಂಧನಕ್ಕೆ ಎಸ್‌ಡಿಪಿಐ ಕಿಡಿ!

ಬೆಳಗಾವಿ ವಿಧಾನಸಭೆಯಲ್ಲಿ ಸಾವರ್ಕರ್ ಫೋಟೋ ತೆಗೆಯುವ ವಿಚಾರವಾಗಿ ಮಾನ್ಯ ಪ್ರಿಯಾಂಕ್ ಖರ್ಗೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದಕ್ಕೆ ಟಾಂಗ್ ಕೊಡುವಂತೆ ಹೇಳಿಕೆ ನೀಡಿದ್ದ ಮಾನ್ಯ ಸಭಾಪತಿ ಯುಟಿ ಖಾದರ್‌ರವರು ನನ್ನದು ಜೋಡಿಸುವ ಮನಸ್ಥಿತಿ ನಾನು ಬೆಳೆದ ಪರಿಸರ ಅಂತದ್ದು ಎಂದು ತಮ್ಮ ಹೇಳಿಕೆಗೆ ಸಮರ್ಥನೆಯಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತುಗಳನ್ನು ಸೇರಿಸಿಕೊಂಡು, ಸಾವರ್ಕರ್ ಫೋಟೋ ತೆಗೆಯದಿರುವ ತಮ್ಮ ನಡೆಯನ್ನು ಸಮರ್ಥನೆ ಮಾಡಿಕೊಂಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ SDPI ನಾಯಕ ರಿಯಾಜ್ ಕಡಂಬು ಅವರು ಒಂದು ಫೇಸ್ಬುಕ್ ಸ್ಟೇಟಸ್ ಅನ್ನು ಹಾಕಿದ್ದರು. ರಿಯಾಜ್ ಅವರ ಹೇಳಿಕೆಯಲ್ಲಿ ಕೋಮುವಾದಿ ಪ್ರಚೋದಕನಾಗಿದ್ದ ಸಾವರ್ಕರ್‌ನನ್ನು ಸಮರ್ಥನೆ ಮಾಡಿಕೊಳ್ಳುವ ಯಾರೇ ಆದರೂ ಅವರನ್ನು ಖಂಡಿಸುವ ಗಟ್ಟಿ ನಿರ್ಧಾರ ಇತ್ತು. 

ಪುತ್ತೂರು ಸರ್ಕಾರಿ ಆಸ್ಪತ್ರೆ ಬಾಗಿಲಲ್ಲಿ ‘ಬುರ್ಖಾ ತೆಗೆದು ಬನ್ನಿ’ ಫಲಕ, ವಿವಾದ!

ಹೌದು ನಾವು ಮತ್ತು ನೀವೆಲ್ಲರೂ ಕೋಮುವಾದಿ ಸಾವರ್ಕರ್‌ನನ್ನು ಅತ್ಯಂತ ಕಠಿಣವಾಗಿ ವಿರೋಧಿಸುತ್ತೇವೆ ಮತ್ತು ಸಾವರ್ಕರನ ಸಮರ್ಥಕರನ್ನು ಸಂಘಪರಿವಾರಗಳ ಬೂಟ್ ಲಿಕ್ಕರ್ಸ್ ಎಂದೇ ಕರೆದಿದ್ದೇವೆ, ಮುಂದೆಯೂ ಅಂತಹವರನ್ನು ಹಾಗೆಯೇ ಕರೆಯುತ್ತೇವೆ. ಅದು ಯಾರಾದರೂ ಸರಿ. ರಿಯಾಜ್ ಅವರನ್ನು ಅರೆಸ್ಟ್ ಮಾಡುವಂತಹ ಯಾವ ಅಪರಾಧಿಕ ಕೃತ್ಯದ ಹೇಳಿಕೆಗಳು ಇವೆ ಎಂದು ನೀವೇ ಪರಿಶೀಲಿಸಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಎದುರಾಗಿ ಅರೆಸ್ಟ್ ಮಾಡುವಂತಹ ಸರ್ವಾಧಿಕಾರಿ ನಿಲುವು ಬಿಜೆಪಿಯದು ಆಗಿದ್ದಾಗ ಮಾತ್ರ ನಾವು ವಿರೋಧಿಸಬೇಕಾಗಿಲ್ಲ. ಪ್ರಜಾಪ್ರಭುತ್ವದ ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿ ಸರ್ವಾಧಿಕಾರಿ ಮನೋಭಾವನೆಯನ್ನು ತೋರುವ ಯಾವುದೇ ಸರ್ಕಾರವನ್ನು, ಯಾವುದೇ ಪಕ್ಷವನ್ನಾದರೂ ನಾವು ಪಕ್ಷ ಭೇದ ಮರೆತು ಖಂಡಿಸಬೇಕಾಗುತ್ತದೆ. 

ಅದು ನಿಜವಾದ ಪ್ರಜಾಪ್ರಭುತ್ವದ ಸೌಂದರ್ಯವಾಗಿರುತ್ತದೆ. ಇವತ್ತು ರಿಯಾಜ್ ಅವರಿಗೆ ಆಗಿದ್ದು ನಾಳೆ ನಮಗೂ ಆಗಬಹುದು. ನಾನು ಸಾವರ್ಕರ್‌ನನ್ನು ಖಂಡಿಸುತ್ತೇನೆ. ಹಾಗೆ ಸಾವರ್ಕರ್ ಸಮರ್ಥಕ ಮಾನ್ಯ ಸಭಾಪತಿ ಯುಟಿ ಖಾದರ್ ಅವರ ಹೇಳಿಕೆಯನ್ನು ಅತ್ಯಂತ ಕಠಿಣವಾಗಿ ಖಂಡಿಸುತ್ತೇವೆ ಎಂದು ಎಸ್‌ಡಿಪಿಐ ಕಿಡಿ‌ ಕಾರಿದೆ.

click me!