ರಾಮಚಂದ್ರಾಪುರ ಮಠದಲ್ಲಿ ಪರಿಶಿಷ್ಟ ಜಾತಿ ಜನಾಂಗದವರಿಗೆ ಅವರ ಸಂಸ್ಕೃತಿ ಶಿಕ್ಷಣ ನೀಡಲಾಗುತ್ತದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ಬೆಂಗಳೂರು (ಫೆ.07): ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ ಇರಬೇಕು. ಗುರುಕುಲ ಮತ್ತು ವಿಶ್ವವಿದ್ಯಾಲಯಗಳು ಶ್ರೀಮಠದಲ್ಲಿ ಲಭ್ಯವಿದೆ. ಪರಿಶಿಷ್ಟ ಜಾತಿ ಜನಾಂಗದವರಿಗೆ ಅವರ ಸಂಸ್ಕೃತಿ ಶಿಕ್ಷಣ ನೀಡಲಾಗುತ್ತದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಪರಿಶಿಷ್ಟ ಜಾತಿಯವರ ಹಬ್ಬ, ಕಲೆ, ಸಾಹಿತ್ಯದ ಆಧುನಿಕ ಶಿಕ್ಷಣವನ್ನು ನೀಡಲಾಗುತ್ತದೆ. ಚಂದ್ರಗುಪ್ತ ಗುರುಕುಲದಲ್ಲಿ ಪರಿಶಿಷ್ಟ ಜಾತಿಯವರಿಗೆ ಆಧುನಿಕ ಕಲಿಸಲಾಗುತ್ತದೆ ಎಂದರು.
ಗೋವು ಹಾಗೂ ಭಕ್ತಿ ಇದ್ದಲ್ಲಿ ದೇವರ ರಕ್ಷಣೆ ಖಚಿತ: ರಾಘವೇಶ್ವರ ಶ್ರೀ .
ತ್ರಿವೇಣಿ ಗುರುಕುಲದಲ್ಲಿ ಬುಡಕಟ್ಟು ಜನಾಂಗದವರಿಗೆ ಶಿಕ್ಷಣ ನೀಡಲಾಗುತ್ತದೆ. ಜೂನ್ ತಿಂಗಳಲ್ಲಿ ಚಂದ್ರಗುಪ್ತ ಮತ್ತು ತ್ರಿವೇಣಿ ಎರಡು ಗುರುಕುಲಗಳು ಆರಂಭವಾಗಲಿವೆ ಎಂದರು.
ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಉಳುವಿಗಾಗಿ ಇವೆರಡು ಗುರುಕುಲ ಸ್ಥಾಪನೆ ಮಾಡಲಾಗಿದೆ. ನಮ್ಮ ಗುರುಕುಲಗಳಲ್ಲಿ ಎಲ್ಲಾ ಜಾತಿ, ಧರ್ಮ, ಪ್ರದೇಶದ ಮಕ್ಕಳಿದ್ದಾರೆ. ನಮ್ಮ ಗುರುಕುಲ ಮತ್ತು ವಿಶ್ವವಿದ್ಯಾಲಯದಲ್ಲಿ ಕಲಿಯುವುದರಿಂದ ಉದ್ಯೋಗ ಸೀಗುತ್ತದೆ. ಜ್ಯೋತಿಷ್ಯಶಾಸ್ತ್ರ ಕಲಿಯುವುದರಿಂದ ಇದೊಂದು ಉದ್ಯೋಗವಾಗಿ ಉಳಿಯುತ್ತದೆ. ಯೋಗ, ಆಯುರ್ವೇದ ದಂತಹ ಶಿಕ್ಷಣ ನೀಡಲಾಗುತ್ತದೆ. ಗುರುಕುಲದಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಬಹುದು ಎಂದು ರಾಘವೇಶ್ವರ ಶ್ರೀ ಹೇಳಿದರು.
ನಮ್ಮ ಗುರುಕುಲದಲ್ಲಿ 300 ಮಕ್ಕಳಿದ್ದಾರೆ. ಇನ್ನು ಹೆಚ್ಚು ಕಡೆ ಗುರುಕುಲ ಮತ್ತು ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತದೆ. ಗುರುಕುಲ ಮತ್ತು ವಿಶ್ವವಿದ್ಯಾಲಯ ಸ್ಥಾಪನೆಯ ಉದ್ದೇಶ ಭಾರತೀಯ ಶಿಕ್ಷಣ ಮತ್ತು ಸಂಸ್ಕತಿಯನ್ನು ನೀಡುವುದಾಗಿದೆ ಎಂದು ರಾಘವೇಶ್ವರ ಸ್ವಾಮೀಜಿ ಹೇಳಿದರು.