ಬೆಳಗಾವಿ ಬೈಎಲೆಕ್ಷನ್‌: ಮರಾಠ ಮತ ಸೆಳೆಯಲು ಜಾರಕಿಹೊಳಿ ಹಿಂದಿ ಭಾಷಣ..!

Kannadaprabha News   | Asianet News
Published : Apr 05, 2021, 01:45 PM ISTUpdated : Apr 05, 2021, 02:19 PM IST
ಬೆಳಗಾವಿ ಬೈಎಲೆಕ್ಷನ್‌: ಮರಾಠ ಮತ ಸೆಳೆಯಲು ಜಾರಕಿಹೊಳಿ ಹಿಂದಿ ಭಾಷಣ..!

ಸಾರಾಂಶ

ಬೆಲೆ ಏರಿಕೆ ತಡೆಯಲು ಕೇಂದ್ರದಲ್ಲಾಗಲಿ ಅಥವಾ ರಾಜ್ಯದಲ್ಲಾಗಲಿ ಜನಪರ ಸರ್ಕಾರ ಇರಬೇಕು| ಅದಾನಿ, ಅಂಬಾನಿ ಪರವಾದ ಸರ್ಕಾರ ಇರಬಾರದು| ಜನವಿರೋಧಿ ನೀತಿ ಅನುಸರಿಸಿದರೆ ಜನರೇ ಸರ್ಕಾರಕ್ಕೆ ತಕ್ಕ ಉತ್ತರ ನೀಡುತ್ತಾರೆ| ಹಿಂದಿ ಭಾಷಣ, ಕೇಸರಿ ಪೇಟ: ಯಳ್ಳೂರಲ್ಲಿ ಸತೀಶ್‌ ಜಾರಕಿಹೊಳಿ ಪ್ರಚಾರ|

ಬೆಳಗಾವಿ(ಏ.05):  ಬೆಳಗಾವಿ ಲೋಕಸಭಾ ಉಪಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ಸತೀಶ್‌ ಜಾರಕಿಹೊಳಿ ಅವರು ಭಾನುವಾರ ಮರಾಠಿ ಭಾಷಿಕರೇ ಹೆಚ್ಚಿರುವ ಯಳ್ಳೂರು ಗ್ರಾಮದಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದರು. ಅಲ್ಲದೆ, ಕೇಸರಿ ಪೇಟ ಧರಿಸಿ ಮರಾಠಿಗರನ್ನು ಸೆಳೆಯಲು ಯತ್ನಿಸಿದ್ದಾರೆ.

ಈ ವೇಳೆ ಮಾತನಾಡಿದ ಜಾರಕಿಹೊಳಿ ಅವರು, ಬೆಲೆ ಏರಿಕೆ ತಡೆಯಲು ಕೇಂದ್ರದಲ್ಲಾಗಲಿ ಅಥವಾ ರಾಜ್ಯದಲ್ಲಾಗಲಿ ಜನಪರ ಸರ್ಕಾರ ಇರಬೇಕು. ಅದಾನಿ, ಅಂಬಾನಿ ಪರವಾದ ಸರ್ಕಾರ ಇರಬಾರದು. ಜನವಿರೋಧಿ ನೀತಿ ಅನುಸರಿಸಿದರೆ ಜನರೇ ಸರ್ಕಾರಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂಬ ಸಂದೇಶ ಸಾರಬೇಕಿದೆ ಎಂದು ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

'ರಮೇಶ್ ಜಾರಕಿಹೊಳಿಗೆ ಕೊರೋನಾ ಬಂದಿದೆ'

ಕಳೆದ ನಾಲ್ಕು ತಿಂಗಳಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈವರೆಗೂ ಪ್ರಧಾನಿ ಮೋದಿ ಸ್ಥಳಕ್ಕೆ ಭೇಟಿ ನೀಡಿಲ್ಲ, ಸೆಲೆಬ್ರಿಟಿಗಳ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲು ಮೋದಿ ಅವರಿಗೆ ಸಮಯ ಇದೆ, ರೈತರಿಗಾಗಿ ಸಮಯ ಇಲ್ಲ ಎಂದು ಕಿಡಿಕಾರಿದ್ದಾರೆ.
 

PREV
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ