
ಮಂಗಳೂರು(ಏ.25): ಬಂಟ್ವಾಳದ ಪುರಸಭೆಯ ಪರಿಸರ ಅಭಿಯಂತರರು ಒಂದೇ ಥರ್ಮಾೕಮೀಟರ್‌ನಲ್ಲಿ ಹಲವು ಪೌರ ಕಾರ್ಮಿಕರ ಜ್ವರ ಪರೀಕ್ಷೆ ನಡೆಸಿರುವ ವಿಡೊಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಂಟ್ವಾಳ ಪುರಸಭೆಯಲ್ಲಿ ಪರಿಸರ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿರುವ ಯಾಸ್ಮೀನ್ ಸುಲ್ತಾನ್ ಅವರು ಈ ಎಡವಟ್ಟು ಮಾಡಿದ್ದು, ಒಬ್ಬರ ಬಾಯಿಂದ ಇನ್ನೊಬ್ಬರ ಬಾಯಿಗೆ ಥರ್ಮಾೕಮೀಟರ್ ಶಿಫ್ಟ್ ಮಾಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.
23 ಸಾವಿರ ಮೀನುಗಾರರಿಗೆ 60 ಕೋಟಿ ರು. ಸಾಲಮನ್ನಾ ಬಿಡುಗಡೆ: ಕೋಟ
ಇಬ್ಬರು ಮೃತ, ಎರಡು ಪಾಸಿಟಿವ್ ಕೇಸ್ ಇರುವ ಬಂಟ್ವಾಳದಲ್ಲಿನ ಸರ್ಕಾರಿ ಅಧಿಕಾರಿಯಿಂದಲೇ ಬೇಜವಬ್ದಾರಿ ವರ್ತನೆಯ ಬಗ್ಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ಜ್ವರ ತಪಾಸಣೆ ಸಂದರ್ಭ ಕುದಿಯುವ ನೀರಿನಲ್ಲಿ ಥರ್ಮಾೕಮೀಟರ್ ಹಾಕಿ ಬಳಿಕ ಇನ್ನೊಬ್ಬರಿಗೆ ಬಳಸುವಂತೆ ಆರೋಗ್ಯ ಇಲಾಖೆಯ ನಿಯಮವಿದೆ.
ಲಾಕ್ ಡೌನ್ ಇನ್ನೊಂದು ಮುಖ; ಆಹಾರ ಸಿಗದೇ ಪ್ರಾಣಿಗಳ ಪರದಾಟ
ಕೊರೊನಾದ ಸಂದರ್ಭ ಜ್ವರ ಪರೀಕ್ಷೆಗೆ ಥರ್ಮೋಮೀಟರ್ ಬಳಸುವುದಕ್ಕೂ ನಿರ್ಬಂಧ ಇದೆ ಎನ್ನಲಾಗಿದೆ. ಆದರೆ ಇಲ್ಲಿ ಈ ನಿಯಮವನ್ನು ಗಾಳಿಗೆ ತೂರಿ ಅಧಿಕಾರಿ ನಿರ್ಲಕ್ಷ್ಯ ತೋರಿದ್ದಾರೆ.
ನೋಟಿಸ್ ಜಾರಿ:
ಪುರಸಭಾ ಪರಿಸರ ಅಭಿಯಂತರರ ಬೇಜವಬ್ದಾರಿ ವರ್ತನೆಯನ್ನು ಪ್ರಶ್ನಿಸಿ ಪುರಸಭಾ ಮುಖ್ಯಾಧಿಕಾರಿ ಲೀನಾಬ್ರಿಟ್ಟೋ ನೋಟಿಸದ ಜಾರಿ ಮಾಡಿದ್ದಾರೆ. ನಿಮ್ಮ ಮೇಲೆ ಯಾಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್ನಲ್ಲಿ ಪ್ರಶ್ನಿಸಿದ್ದು, ಮೂರು ದಿನದ ಒಳಗೆ ಲಿಖಿತ ಸಮಜಾಯಿಷಿ ನೀಡುವಂತೆ ಸೂಚಿಸಿದ್ದಾರೆ. ಪುರಸಭಾ ಖ್ಯಾಧಿಕಾರಿಯ ಗಮನಕ್ಕೆ ತಾರದೆ ಜ್ವರ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.