18 ರಸ್ತೆ ದುರಸ್ತಿ ಅಭಿವೃದ್ಧಿಗೆ ₹119 ಕೋಟಿ ಬಿಡುಗಡೆ: ಕೋಟಾ ಶ್ರೀನಿವಾಸ್‌ ಪೂಜಾರಿ

Published : Jun 11, 2026, 07:36 AM IST
Kota Shrnivas Poojari

ಸಾರಾಂಶ

ಕೇಂದ್ರದ ಸಿಆರ್‌ಐಎಫ್ ನಿಧಿಯಿಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ 18 ರಸ್ತೆಗಳ ಅಭಿವೃದ್ಧಿಗೆ ₹119 ಕೋಟಿ ಬಿಡುಗಡೆಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಈ ಅನುದಾನವು ಬಾಳೆಹೊನ್ನೂರು-ಶೃಂಗೇರಿ, ಕೊಪ್ಪ-ಶೃಂಗೇರಿ, ಮತ್ತು ಮುಳ್ಳಯ್ಯನಗಿರಿ ರಸ್ತೆ ಸೇರಿದಂತೆ ಕ್ಷೇತ್ರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆಯಾಗಲಿದೆ.

ಚಿಕ್ಕಮಗಳೂರು: ಕೇಂದ್ರದ ಸಿಆರ್‌ಐಎಫ್ ನಿಧಿಯಿಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ 18 ರಸ್ತೆಗಳ ಅಭಿವೃದ್ಧಿಗೆ ₹119 ಕೋಟಿ ಬಿಡುಗಡೆ ಯಾಗಿರುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

18 ಲೋಕೋಪಯೋಗಿ ರಸ್ತೆಗಳಿಗೆ ಅಭಿವೃದ್ಧಿ

ಬಾಳೆಹೊನ್ನೂರು - ಶೃಂಗೇರಿ ರಸ್ತೆ, ಕೊಪ್ಪ- ಶೃಂಗೇರಿ ಸೇರಿದಂತೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ 18 ಲೋಕೋಪಯೋಗಿ ರಸ್ತೆಗಳಿಗೆ ಅಭಿವೃದ್ಧಿ ಕಾಮಗಾರಿಗೆ ಈ ಹಣ ನೀಡಲಾಗಿದೆ. ಬಾಳೆಹೊನ್ನೂರು - ಶೃಂಗೇರಿ ರಸ್ತೆ ಅಭಿವೃದ್ಧಿಗೆ ₹50 ಕೋಟಿ ಕೊಪ್ಪ-ಜಯಪುರ-ಶೃಂಗೇರಿ ರಸ್ತೆ ಅಭಿವೃದ್ಧಿಗೆ ₹6 ಕೋಟಿ, ಕುಂದಾಪುರ-ಬೈಂದೂರು-ವಿರಾಜಪೇಟೆ ರಸ್ತೆಗೆ ₹6 ಕೋಟಿ, ಉಡುಪಿ-ಹಿರಿಯಡ್ಕ-ಕಾರ್ಕಳ-ಸುಬ್ರಹ್ಮಣ್ಯ ರಸ್ತೆಗೆ ₹6 ಕೋಟಿ, ಬ್ರಹ್ಮಾವರ-ಜನ್ನಾಡಿ ರಸ್ತೆ ಅಭಿವೃದ್ಧಿಗೆ ₹5 ಕೋಟಿ, ಬಾರ್ಕೂರು ರಸ್ತೆ ಅಭಿವೃದ್ಧಿಗೆ ₹10 ಕೋಟಿ, ಬಿಡುಗಡೆಯಾಗಿದೆ ಎಂದು ತಿಳಿಸಿದ್ದಾರೆ.

ಶಿರೂರು-ಕೊಕ್ಕರ್ಣೆ-ಸಂತೆಕಟ್ಟೆ ರಸ್ತೆಗೆ ₹3 ಕೋಟಿ, ಹಳೆ ಎಂಬಿಸಿ ರಸ್ತೆಗೆ ₹1.60 ಕೋಟಿ, ಆರೂರು-ಮಣ್ಣಿನ ಜಡ್ಡು-ಕೊಕ್ಕರ್ಣೆ ರಸ್ತೆಗೆ ₹1.40 ಕೋಟಿ, ತೀರ್ಥಹಳ್ಳಿಯಿಂದ ಕುಂದಾಪುರ ರಸ್ತೆಗೆ ₹2 ಕೋಟಿ, ಹೆಬ್ರಿ ತಾಲೂಕಿನ ಮುನಿಯಾಲು- ಕಬ್ಬಿನಾಲೆ ರಸ್ತೆ, ಅತ್ರಾಡಿ-ಮಂಗಳೂರು(ಕಾರ್ಕಳ ತಾಲ್ಲೂಕು), ಕುಂಟಾಡಿ-ಹಳೆಕಟ್ಟೆ-ಕೆಮ್ಮಣ್ಣು ಎಮ್ಡಿಆರ್ ರಸ್ತೆಗೆ ತಲಾ ₹1 ಕೋಟಿ, ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕುಂಟಾಡಿ-ಹಳೆಕಟ್ಟೆ-ಕೆಮ್ಮಣ್ಣು ಎನ್ ಡಿಆರ್ ರಸ್ತೆಗೆ ₹1 ಕೋಟಿ, ನಾರಾವಿ-ಮಂಗಳೂರು (ಕಾರ್ಕಳ ತಾಲೂಕು) ರಸ್ತೆಗೆ 1 ಕೋಟಿ ರು, ಕಡೂರು ತಾಲೂಕಿನ ಬೇಗೂರು ಗೇಟ್‌ನಿಂದ-ಅರೇಹಳ್ಳಿ ಮೂಲಕ ಮಚ್ಚೇರಿ ರಸ್ತೆಗೆ ₹6 ಕೋಟಿ, ಚಿಕ್ಕಮಗಳೂರು ತಾಲೂಕಿನ ಸೀತಾಳಯ್ಯನ ಗಿರಿ-ಮುಳ್ಳಯ್ಯನಗಿರಿ ರಸ್ತೆಗೆ ₹6 ಕೋಟಿ, ಮೂಡಿಗೆರೆ ತಾಲೂಕಿನ ರಾಜ್ಯ ಹೆದ್ದಾರಿ 106ರ ಬಾಳೂರು ಹ್ಯಾಂಡ್ ಪೋಸ್ಟ್ರಿಂದ ಕಳಸ ರಸ್ತೆಗೆ ₹6 ಕೋಟಿ, ತರೀಕೆರೆ ತಾಲೂಕಿನ ರಾಜ್ಯ ಹೆದ್ದಾರಿ 57ರ ಬಾಗಲಕೋಟೆ ಬಿಳಿಗಿರಿರಂಗನ ಬೆಟ್ಟ ರಸ್ತೆ ಅಭಿವೃದ್ಧಿಗೆ ₹6 ಕೋಟಿ ಬಿಡುಗಡೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರಿನಿಂದ ಕನಕಪುರ, ಮೈಸೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರಕ್ಕೆ RRTCಗೆ ಸಿಎಂ ಮನವಿ
ಕಸ ಸಂಸ್ಕರಣೆಗೆ ದೆಹಲಿ ಕಂಪನಿಗೆ 35 ವರ್ಷ ಗುತ್ತಿಗೆ ನೀಡಿ ₹10 ಸಾವಿರ ಕೋಟಿ ಕಿಕ್‌ ಬ್ಯಾಕ್‌? ಆರ್ ಅಶೋಕ್ ಗಂಭೀರ ಆರೋಪ