ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪಂದ ಎಂಬಲ್ಲಿ ಸಮುದ್ರದಲ್ಲಿ ಸಂಭವಿಸಿದ ಬದಲಾವಣೆಯಿಂದ ರಾಶಿ ರಾಶಿ ಮೀನುಗಳು ತೀರ ಪ್ರದೇಶಕ್ಕೆ ಬಂದು ಬೀಳುತ್ತಿವೆ. ಮಡಿಕಲ್ ಬೀಚ್ ನಲ್ಲಿ ಹಲವು ಬಗೆಯ ನದಿ ಮೀನುಗಳು ತೀರ ಪ್ರದೇಶದತ್ತ ಧಾವಿಸಿ ಬರುತ್ತಿವೆ.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಆ.10): ಮಳೆಗಾಲ ಆರಂಭವಾಯಿತೆಂದರೆ ಪ್ರಕೃತಿ ನಾನಾ ತರದ ಹೊಸತನಗಳಿಗೆ ಸಾಕ್ಷಿಯಾಗುತ್ತೆ . ಅದರಲ್ಲೂ ಕಡಲ ತೀರಗಳು ಬಗೆಬಗೆಯ ಬದಲಾವಣೆಗಳಿಗೆ ತೆರೆದುಕೊಳ್ಳುತ್ತೆ. ಹೇಳಿ ಕೇಳಿ ಸಮುದ್ರದ ನೀರು ಉಪ್ಪು. ನದಿಯ ನೀರು ಸಪ್ಪೆ. ಈ ಸಪ್ಪೆ ನೀರಿನಲ್ಲಿರುವ ಮೀನುಗಳು ಸಮುದ್ರ ಸೇರಿದಾಗ ವಿಚಿತ್ರ ವಿದ್ಯಮಾನ ಸಂಭವಿಸುತ್ತೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪಂದ ಇಂತಹ ಒಂದು ಪ್ರಾಕೃತಿಕ ವೈಚಿತ್ರ್ಯಕ್ಕೆ ಸಾಕ್ಷಿಯಾಗಿದೆ. ಸಮುದ್ರದಲ್ಲಿ ಸಂಭವಿಸಿದ ಬದಲಾವಣೆಯಿಂದ ರಾಶಿ ರಾಶಿ ಮೀನುಗಳು ತೀರ ಪ್ರದೇಶಕ್ಕೆ ಬಂದು ಬೀಳುತ್ತಿವೆ. ತಾಲೂಕಿನ ಉಪ್ಪುಂದ ಮಡಿಕಲ್ ಬೀಚ್ ನಲ್ಲಿ ಹಲವು ಬಗೆಯ ನದಿ ಮೀನುಗಳು ತೀರ ಪ್ರದೇಶದತ್ತ ಧಾವಿಸಿ ಬರುತ್ತಿವೆ. ಅದರಲ್ಲೂ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿರುವ ಮುರಿಯ ತಳಿಯ ಮೀನಿಗಾಗಿ ತಟದ ನಿವಾಸಿಗಳು ಮುಗಿ ಬೀಳುತ್ತಿದ್ದಾರೆ. ಕತ್ತಲಾದರೆ ಸಾಕು ಹುಡುಕಾಟ ಆರಂಭಿಸುತ್ರಾರೆ. ಕತ್ತಲಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಳು ತೀರ ಪ್ರದೇಶಕ್ಕೆ ಬರುತ್ತವೆ ಬೆಳಕನ್ನು ಅರಸಿಕೊಂಡು ಬರುವ ಮೀನುಗಳೇ ಹೆಚ್ಚು. ಮಳೆ ಹೆಚ್ಚಾದಾಗ ನದಿಯ ನೀರುಗಳೆಲ್ಲ ಹೋಗಿ ಸಮುದ್ರ ಸೇರುತ್ತವೆ.
ಬಿರುಸಾಗಿ ಹರಿಯುವ ನದಿಯ ನೀರಿನ ಜೊತೆ ಲಕ್ಷಾಂತರ ಮೀನುಗಳು ಕೂಡ ಉಪ್ಪು ನೀರು ಸೇರುತ್ತವೆ. ಆದರೆ ಉಪ್ಪು ನೀರಿನ ಒಡನಾಟ ಈ ಮೀನುಗಳಿಗೆ ಇರುವುದಿಲ್ಲ. ಏಕಾಏಕಿ ಉಪ್ಪು ನೀರಿಗೆ ಸೇರಿಕೊಂಡ ಮೀನುಗಳು ಅಲ್ಲಿ ಬದುಕಲಾಗದೆ ತೀರಪ್ರದೇಶಕ್ಕೆ ಹಾದು ಬರುತ್ತದೆ.
ಹೀಗೆ ಬಂದ ಮೀನುಗಳು ಸುಲಭವಾಗಿ ಮತ್ಸ್ಯಪ್ರಿಯರ ಪಾಲಾಗುತ್ತಿದೆ. ಮುರಿಯ ಮೀನಿಗಾಗಿ ಸಮುದ್ರ ತೀರದಲ್ಲಿ ಜನರು ಮುಗಿ ಬೀಳುವುದನ್ನು ಕಾಣಬಹುದು. ಮಳೆ ಬಂದಾಗ ಉಪ್ಪು ನೀರಿಗೆ ಹೊಳೆಯ ನೀರು ಹೋಗಿ ಮುರಿಯ ಮೀನುಗಳು ಅರೆ ಪ್ರಜ್ಞಾವಸ್ಥೆಗೆ ತಲುಪುತ್ತವೆ. ಸಮುದ್ರದ ದಡಕ್ಕೆ ಬಂದು ಬೀಳುತ್ತವೆ.
ಮರವಂತೆ, ಉಪ್ಪುಂದ, ಬೈಂದೂರು, ಶಿರೂರು, ಭಾಗಗಳಲ್ಲಿ ಸಮುದ್ರ ದಡದಲ್ಲಿ ಮುರಿಯ ಮೀನುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬೀಳುತ್ತಿವೆ. ಹೀಗೆ ಬಂದು ಬೀಳುವ ಮೀನುಗಳಿಗೆ ಬೆಳಿಗ್ಗೆಯಿಂದ ರಾತ್ರಿ ವರೆಗೂ ಜನರು ಕಾದು ಕುಳಿತುಕೊಳ್ಳುತ್ತಾರೆ.
Uttara Kannada: ಚಂಡಮಾರುತದಿಂದ ಮೀನುಗಾರಿಕೆ ಮತ್ತೆ ಸ್ಥಗಿತ!
ರಾತ್ರಿ ಹೊತ್ತು ಟಾರ್ಚ್ ಲೈಟ್ ಹಿಡಿದು ಮುರಿಯ ಮೀನಿಗಾಗಿ ಹುಡುಗಾಟ ನಡೆಸುತ್ತಾರೆ. ಬೆಳಕನ್ನು ಕಂಡು ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಳು ತೀರಪ್ರದೇಶಕ್ಕೆ ಬರುತ್ತವೆ, ಹೀಗೆ ಬಂದವರಿಗೆ ಒಬ್ಬೊಬ್ವರಿಗೂ 45, 50 ಕ್ಜೂ ಹೆಚ್ಚು ಮೀನು ಸಿಕ್ಕುತ್ತಿವೆ.
Udupi: ಮೀನುಗಾರರ ಕಷ್ಟ ಆಲಿಸದ ಸಿಎಂ: ಭಟ್ಕಳಕ್ಕೆ ಬಂದವರು ಶಿರೂರಿಗೆ ಬರಲಿಲ್ಲ
ನೆರೆಯಿಂದ ದೋಣಿಗಳಿಗೆ ಹಾನಿ ಪರಿಹಾರ ಕುರಿತು ಸಂಪುಟ ಚರ್ಚೆ: ನೆರೆಹಾವಳಿಯಿಂದಾಗಿ ಹಾನಿಗೊಳಗಾದ ದೋಣಿಗಳಿಗೆ ಹೆಚ್ಚಿನ ಪರಿಹಾರ ನೀಡುವಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ರಾಜ್ಯ ಬಂದರು ಮೀನುಗಾರಿಕಾ ಮತ್ತು ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಹೇಳಿದ್ದಾರೆ.
ಬೈಂದೂರು ತಾಲೂಕಿನ ಶಿರೂರು ಕಳಿಹಿತ್ಲು ಎಂಬಲ್ಲಿ ಇತ್ತೀಚೆಗೆ ನೆರೆಹಾವಳಿಯಿಂದಾಗಿ ಮೀನುಗಾರಿಕಾ ದೋಣಿಗಳು ಹಾನಿಗೊಳಗಾದ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಾಕೃತಿಕ ವಿಕೋಪ ನಿಯಮದಡಿ ಹಾನಿಗೆ ಹೆಚ್ಚಿನ ಅನುದಾನ ನೀಡಲು ಸಾಧ್ಯವಿಲ್ಲದ ಕಾರಣ ಶುಕ್ರವಾರ ನಡೆಯುವ ಸಂಪುಟ ಸಭೆಯಲ್ಲಿ ಶಿರೂರು ಹಾನಿಯ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಮತ್ತು ಗರಿಷ್ಠ ಮೊತ್ತದ ಪರಿಹಾರ ಕೊಡಿಸುವಲ್ಲಿ ಪ್ರಯತ್ನಿಸಲಾಗುವುದು ಎಂದರು.
ಸಭೆಯಲ್ಲಿ ನಾಡದೋಣಿಗಳ ಬೆಲೆ, ಅದರಲ್ಲಿ ಉಪಯೋಗಿಸುವ ಬಲೆ ಹಾಗೂ ಯಂತ್ರಗಳ ಖರ್ಚು ಏನು ಎನ್ನುವುದರ ಕುರಿತು ಸವಿಸ್ತಾರವಾಗಿ ಮಾಹಿತಿ ಪಡೆಯಲಾಗುವುದು. ಸೀಮೆ ಎಣ್ಣೆ ನಿಷೇಧ ಸಮಸ್ಯೆ ಕುರಿತು ರಾಜ್ಯದಲ್ಲಿ ಚರ್ಚೆ ನಡೆಯುತ್ತಿದ್ದು ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲದೇ ನಾಡ ದೋಣಿಗಳ ಸಮಸ್ಯೆಗಳ ಕುರಿತು ಯಾವುದೇ ರೀತಿಯ ಸಮಸ್ಯೆಯಾಗದಂತೆ ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದರು.
ಶಿರೂರು ಭಾಗದಲ್ಲಿ ಸುಮಾರು 48ಕ್ಕೂ ಹೆಚ್ಚು ಮೀನುಗಾರಿಕಾ ನಾಡದೋಣಿಗಳು ಹಾನಿಗೊಳಗಾಗಿರುವುದು ಸರಕಾರದ ಗಮನಕ್ಕೆ ಬಂದಿದೆ. ಹಾನಿಯ ಬಗ್ಗೆ ಈಗಾಗಲೇ ನಾನು ಅಧಿಕಾರಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ನನ್ನ ಸ್ವ ಕ್ಷೇತ್ರದ ಸುಳ್ಯದ ತಾಲೂಕುಗಳಲ್ಲಿ ಮಳೆ ಹಾನಿಯಿಂದ ವಿವಿಧ ಕಡೆಗಳಲ್ಲಿ ಹಾನಿಗಳು ಉಂಟಾಗಿದ್ದು, ಇದರಿಂದ ಶಿರೂರಿಗೆ ಬರಲು ಸ್ವಲ್ಪ ವಿಳಂಬವಾಗಿದೆ ಎಂದರು.