ವೈದ್ಯೆಯ ಅತ್ಯಾಚಾರ & ಕೊಲೆ ಕೇಸ್: ರಾಜ್ಯವ್ಯಾಪಿ ವೈದ್ಯರ ಮುಷ್ಕರ, ಯಾವ ವೈದ್ಯಕೀಯ ಸೇವೆ ಇರುತ್ತೆ? ಇರಲ್ಲ?

By Mahmad Rafik  |  First Published Aug 17, 2024, 10:37 AM IST

ಕೋಲ್ಕತ್ತಾ ವೈದ್ಯೆಯ ರೇಪ್ ಆಂಡ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ವೈದ್ಯರು ಮುಷ್ಕರಕ್ಕೆ  ಕರೆ ನೀಡಿದ್ದಾರೆ. ರಾಜ್ಯದಲ್ಲಿಯೂ 5,000 ಸಾವಿರಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಓಪಿಡಿ ಬಂದ್ ಆಗಿವೆ.


ಬೆಂಗಳೂರು: ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಇಂದು ದೇಶದ್ಯಾಂತ ವೈದ್ಯರು ಮುಷ್ಕರಕ್ಕೆ ಕರೆ ನೀಡಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆ 11 ಗಂಟೆಗೆ ವೈದ್ಯರು ರಸ್ತೆಗಿಳಿದು ಪ್ರತಿಭಟನೆ ನಡೆಸಲಿದ್ದಾರೆ. ಚಾಮರಾಜಪೇಟೆಯ IMA ಕಚೇರಿ ಎದುರು ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಕಿದ್ವಾಯಿ, ಜಯದೇವ, ಬೌರಿಂಗ್, ನಿಮಾನ್ಸ್ ಆಸ್ಪತ್ರೆ ವೈದ್ಯರು ಕಳೆದ ಐದು ದಿನಗಳಿಂದ ಕಪ್ಪು ಪಟ್ಟಿ ಕಟ್ಟಿಕೊಂಡು ಸೇವೆ ಸಲ್ಲಿಸಿದ್ದರು. ಇಂದು ಎಲ್ಲಾ ವೈದ್ಯ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಇತ್ತ ರಾಜ್ಯ ಸರ್ಕಾರ ಪ್ರತಿಭಟನೆ ತಡೆಯಲು ಎಲ್ಲಾ ಸರ್ಕಾರಿ ವೈದ್ಯ ಸಿಬ್ಬಂದಿ ಸೇವೆಗೆ ಹಾಜರಾಗಬೇಕೆಂದು ಆದೇಶ ಹೊರಡಿಸಿದೆ. ಸರ್ಕಾರದ ಆದೇಶಕ್ಕೂ ಬಗ್ಗದ ವೈದ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. 

ರಾಜ್ಯದಲ್ಲಿ 5,000 ಸಾವಿರಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಬೆಳಗ್ಗೆಯಿಂದ OPD ಬಂದ್ ಆಗಿವೆ. ಬೆಂಗಳೂರಿನ‌ 1800 ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ OPD ಸೇವೆ ಅಲಭ್ಯವಾಗಿದೆ. ನಾಳೆ ಬೆಳಗ್ಗೆ 6 ಗಂಟೆಯವರೆಗೆ ಓಪಿಡಿ ಸೇವೆ ಕಂಪ್ಲೀಟ್ ಬಂದ್ ಆಗಲಿದೆ. 

Tap to resize

Latest Videos

ರಾಜ್ಯದಲ್ಲಿ ಏನೇನು ಸೇವೆ ಲಭ್ಯ? 
ಹೆರಿಗೆ, ತುರ್ತು ಸರ್ಜರಿ, ಮೆಡಿಕಲ್ ಶಾಪ್ಸ್ , ಆಸ್ಪತ್ರೆಗಳಲ್ಲಿ ತುರ್ತು ಸೇವೆ , ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಸೇವೆಗಳು ಲಭ್ಯ ಇರಲಿವೆ. 

ರಾಜ್ಯದಲ್ಲಿ ಯಾವೆಲ್ಲಾ ವೈದ್ಯಕೀಯ  ಸೇವೆಗಳು ಇರಲ್ಲ
ಡಯಾಲಿಸಿಸ್ ಸೇವೆ, ಓಪಿಡಿ , ಡೆಂಟಲ್ ಸರ್ವಿಸ್ ಮತ್ತು  ಮಕ್ಕಳ ಓಪಿಡಿ 

ಪ್ರತಿಭಟನೆಗೆ ಯಾರೆಲ್ಲ ಬೆಂಬಲ?
ಫನಾ ಖಾಸಗಿ ಆಸ್ಫತ್ರೆಗಳ ಒಕ್ಕೂಟ, ಸರ್ಕಾರಿ ವೈದ್ಯಾಧಿಕಾರಿಗಳ ಅಸೋಸಿಯೇಶನ್, ಮಕ್ಕಳ ವೈದ್ಯರ ಅಸೋಸಿಯೇಶನ್, ಅರ್ಥೋಪಿಟಿಕ್ ಅಸೋಸಿಯೇಶನ್, ಮೆಡಿಕಲ್ ಕಾಲೇಜ್ ವೈದ್ಯರ ಅಸೋಸಿಯೇಶನ್ , ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ 

ಹತ್ಯೆಯಾದ ದಿನ ಕೋಲ್ಕತ್ತಾ ಟ್ರೈನಿ ವೈದ್ಯೆ ಬರೆದ ಕೊನೆಯ ಡೈರಿಯಲ್ಲಿ ಏನಿತ್ತು?

ವೈದ್ಯರ ಮುಷ್ಕರದ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರೂ ರೋಗಿಗಳು ಆಸ್ಪತ್ರೆಯತ್ತ ಆಗಮಿಸುತ್ತಿದ್ದಾರೆ. ಓಪಿಡಿ ಕೌಂಟರ್ ಮುಂದೆ ಜನರು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡು ಬರುತ್ತಿವೆ. ಕೆಲ ಆಸ್ಪತ್ರೆಗಳಲ್ಲಿ ಓಪಿಡಿ ಕಾರ್ಡ್ ವಿತರಣೆ ಮಾಡಲಾಗುತ್ತಿದ್ದು, ವೈದ್ಯರು ಬರೋದು ಅನುಮಾನ ಎಂಬ ಮಾಹಿತಿ ನೀಡಿ ಟಿಕೆಟ್ ನೀಡಲಾಗುತ್ತಿದೆ. ಬೌರಿಂಗ್, ಕಿದ್ವಾಯಿ, ನಿಮಾನ್ಸ್, ಕೆಸಿ ಜನರಲ್ ಆಸ್ಪತ್ರೆಯ ಓಪಿಡಿ ಕೌಂಟರ್ ಬಳಿ ರೋಗಿಗಳು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಕೇವಲ ತುರ್ತು ಸೇವೆಗಳು ಮಾತ್ರ ಲಭ್ಯವಾಗುತ್ತಿವೆ. ದೂರದೂರುಗಳಿಂದ ಬಂದಿರುವ ರೋಗಿಗಳು ಮುಷ್ಕರದ ವಿಷಯ ತಿಳಿದು ಹಿಂದಿರುಗಿತ್ತಿದ್ದಾರೆ. 

ಬರ್ನ್ಸ್ ಟ್ರಾಮಾ ಯಾವುದು ಕ್ಲೋಸ್ ಇಲ್ಲ. ಕೊಲ್ಕತ್ತಾ ವೈದ್ಯ ವಿದ್ಯಾರ್ಥಿನಿ ಅಮಾನುಷ ಹತ್ಯೆ ಪ್ರಕರಣದ ಬಗ್ಗೆ ಮಾಹಿತಿ ಕೊಟ್ಟಿದ್ದೀವಿ. ಈ ಘಟನೆ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ತ್ವರಿತ ಅಂದ್ರೆ ತುರ್ತು ಚಿಕಿತ್ಸೆಗೆ ಮಾತ್ರ ಇವತ್ತು ಓಪನ್ ಇರುತ್ತದೆ. Opdಗೆ  ಸಾಮಾನ್ಯವಾಗಿ ಬರುವಂತಹ ರೋಗಿಗಳು ಮತ್ತೆ ಮತ್ತೆ ಬರುವವರು, ಅವರಿಗೆ ಮಾತ್ರೆ ಅವಶ್ಯಕತೆ ಇರುತ್ತದೆ. ಯಾರಿಗೂ ಯಾವುದೇ ರೋಗಿಗೂ  ತೊಂದರೆ ಆಗಿಲ್ಲ. ಪ್ರತಿಭಟನೆ ಬಗ್ಗೆ ಡೀನ್, ಡೈರೆಕ್ಟರ್ ಈ ಬಗ್ಗೆ ಮಾಹಿತಿ ಮುಂಚೆ ಕೊಟ್ಟಿದ್ದಾರೆ. ಯಾವ ರೋಗಿಗಳಿಗೆ ಕೂಡ ತೊಂದ್ರೆ ಆಗಲ್ಲ. ರೋಗಿಗಳಿಗೆ ಯಾವುದೇ ಸಮಸ್ಯೆ ಆಗದ ರೀತಿ ನೋಡಿಕೊಳ್ಳುತ್ತೇವೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ಮನೋಶಾಸ್ತ್ರಜ್ಞೆ ವಾಣಿ ಪ್ರಭಾ ಹೇಳಿದ್ದಾರೆ.

ವೈದ್ಯೆ ರೇಪ್ & ಮರ್ಡರ್ ಆದ ಕೋಲ್ಕತ್ತಾ ಕಾಲೇಜಿನ ಕರಾಳ ಮುಖ ತೆರೆದಿಟ್ಟ ಮಹಿಳಾ ವೈದ್ಯೆಯ ಆಡಿಯೋ

click me!