Yadgir: ನರೇಗಾದಡಿ ಗ್ರಾಮೀಣ ಭಾಗದ ಕೆರೆಗಳ ಪುನರುಜ್ಜೀವನ

By Govindaraj S  |  First Published Aug 15, 2022, 10:29 PM IST

ಗ್ರಾಮೀಣ ಭಾಗದಲ್ಲಿ ಕೆರೆ, ಕಟ್ಟೆಗಳು ಅವನತಿ ಹಂತದಲ್ಲಿದ್ದು, ಅವುಗಳಿಗೆ ಪುನರುಜ್ಜೀವನ ನೀಡಿ ನಶಿಸಿ ಕೊಳವೆಬಾವಿಗಳಿಗೆ ಮರುಜೀವ ನೀಡಲು ಕೇಂದ್ರ ಸರ್ಕಾರ ಅಮೃತ ಸರೋವರ ಯೋಜನೆ ಜಾರಿಗೆ ತಂದಿದ್ದು, ತಾಲೂಕಿನ ಎಂಟು ಕೆರೆಗಳು ಉದ್ಯೋಗ ಖಾತರಿ ಯೋಜನೆಯಡಿ ಅಭಿವೃದ್ಧಿ ಹೊಂದುತ್ತಿವೆ.


ನಾಗರಾಜ್‌ ನ್ಯಾಮತಿ

ಸುರಪುರ (ಆ.15): ಗ್ರಾಮೀಣ ಭಾಗದಲ್ಲಿ ಕೆರೆ, ಕಟ್ಟೆಗಳು ಅವನತಿ ಹಂತದಲ್ಲಿದ್ದು, ಅವುಗಳಿಗೆ ಪುನರುಜ್ಜೀವನ ನೀಡಿ ನಶಿಸಿ ಕೊಳವೆಬಾವಿಗಳಿಗೆ ಮರುಜೀವ ನೀಡಲು ಕೇಂದ್ರ ಸರ್ಕಾರ ಅಮೃತ ಸರೋವರ ಯೋಜನೆ ಜಾರಿಗೆ ತಂದಿದ್ದು, ತಾಲೂಕಿನ ಎಂಟು ಕೆರೆಗಳು ಉದ್ಯೋಗ ಖಾತರಿ ಯೋಜನೆಯಡಿ ಅಭಿವೃದ್ಧಿ ಹೊಂದುತ್ತಿವೆ.

Tap to resize

Latest Videos

undefined

ನಶಿಸಿ ಹೋಗುತ್ತಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿ ಆ ಕೆರೆಯ ದಡದಲ್ಲೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಕೇಂದ್ರ ಸರ್ಕಾರ ಏಪ್ರಿಲ್‌ ತಿಂಗಳಲ್ಲೇ ಆದೇಶ ನೀಡಿತ್ತು. ಅದರಂತೆ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 269 ಕೆರೆಗಳಿದ್ದು, ಅದರಲ್ಲಿ ಈ ಯೋಜನೆಗೆ 75 ಕೆರೆಗಳನ್ನು ಗುರುತಿಸಲಾಗಿದೆ. ಸುರಪುರ ತಾಲೂಕಿನಲ್ಲಿ 8 ಎಂಟು ಕೆರೆಗಳು ಆಯ್ಕೆಯಾಗಿವೆ.

Yadagiri: ಮಳೆ ನಿಂತು ಹೋದ ಮೇಲೆ ಪ್ರವಾಹ ಭೀತಿ!

ಶಾಶ್ವತ ಧ್ವಜ ಸ್ತಂಭ: ಬಾದ್ಯಾಪುರ ಗ್ರಾಪಂನ ಭೈರಿಮಡ್ಡಿ ಕೆರೆ, ಪೇಠಅಮ್ಮಾಪುರ ಗ್ರಾಪನ ಪೇಠ ಅಮ್ಮಾಪುರದ ಕೆರೆ ಕಾಮಗಾರಿ ಪೂರ್ಣಗೊಂಡಿದ್ದು ಸ್ವಾತಂತ್ರ್ಯ ದಿನದಂದು ಲೋಕಾರ್ಪಣೆಗೊಳ್ಳಲಿವೆ. ಈ ಕೆರೆಗಳ ದಡದ ಮೇಲೆಯೇ 75ನೇ ವರ್ಷದ ಅಮೃತ ಮಹೋತ್ಸವದ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯುತ್ತದೆ. ಇದಕ್ಕಾಗಿಯೇ ಶಾಶ್ವತ ಧ್ಜಜ ಕಟ್ಟೆಸಿದ್ಧವಾಗಿದೆ. ಗೌರವಾನ್ವಿತ ವ್ಯಕ್ತಿಗಳಿಂದ ಧ್ವಜಾರೋಣ ನೆರವೇರಲಿದೆ.

ಎಂಟು ಕೆರೆಗಳು ಆಯ್ಕೆ: ಸುರಪುರ ತಾಲೂಕಿನಲ್ಲಿ ಎಂಟು ಕೆರೆಗಳು ಆಯ್ಕೆಯಾಗಿದ್ದು, ಎರಡು ಕೆರೆಗಳ ಕಾಮಗಾರಿ ಪೂರ್ಣಗೊಂಡರೆ ಇನ್ನುಳಿದ 6 ಕೆರೆಗಳ ಕಾಮಗಾರಿ ನಡೆಯುತ್ತಿದೆ. ಒಂದು ಕೆರೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 25 ಲಕ್ಷ ರು.ಗಳು ಖರ್ಚು ಮಾಡುತ್ತಿದೆ. ಈಗಾಗಲೇ ಎರಡು ಕೆರೆಗಳಲ್ಲಿ ಕಾಮಗಾರಿ ಮುಕ್ತಾಯಗೊಂಡಿದೆ. ಪ್ರಸಕ್ತ ಸಾಲಿನ ಮುಂಗಾರು ಮಳೆಯಿಂದ ಕೆರೆಕಟ್ಟೆಗಳು ತುಂಬುತ್ತಿವೆ. ಈಗಾಗಲೇ ಅಮೃತಸರೋವರ ಯೋಜನೆಯೊಳಗೆ ಆಯ್ಕೆಯಾಗಿದ್ದ ಕೆರೆಗಳು ಸಹ ತುಂಬಿ ಹರಿಯುತ್ತಿದ್ದು, ರೈತರಲ್ಲಿ ಮಂದಹಾಸ ಮೂಡಿದೆ.

ಉದ್ಯೋಗ ಖಾತರಿ ಯೋಜನೆಯಡಿ 10 ಲಕ್ಷ ರು.ಗಳು ಉದ್ಯೋಗ ಖಾತರಿ ಹಾಗೂ 15 ಲಕ್ಷ ರು.ಗಳು ಸಾಮಗ್ರಿ ಖರೀದಿಸಲಾಗಿದೆ. ಕೂಲಿಕಾರ್ಮಿಕರಿಗೆ ಉದ್ಯೋಗ ಲಭ್ಯವಾಗಿದೆ. ಅಲ್ಲದೆ ಊರಿನ ಕರೆಯೂ ಅಭಿವೃದ್ಧಿಯಾಗಿದೆ ಎಂದು ಮಹೇಶ ರಾವೂರು ಅಮ್ಮಾಪುರ ತಿಳಿಸಿದ್ದಾರೆ.

ದಿನ ಕಳೆದಂತೆ ಕೈಗಾರಿಕ ಕ್ರಾಂತಿಯಿಂದಾಗಿ ಬೇಸಿಗೆಯಲ್ಲಿ ಕೆರೆಗಳು, ಕೊಳವೆಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಗುತ್ತಿತ್ತು. ಅಮೃತ ಸರೋವರ ಯೋಜನೆಯಿಂದ ಅಂತರ್ಜಲ ಹೆಚ್ಚಾಗಿ ಹೊಲಗಳಲ್ಲಿ ಹಸಿರು ಕಾಣಲಿದೆ.
-(ನರಸಿಂಹನಾಯಕ) ರಾಜೂಗೌಡ, ಶಾಸಕ, ಸುರಪುರ.

ಪಾನ್ ಶಾಪ್‌ನಲ್ಲಿಯೇ ಗಾಂಜಾ ಮಿಶ್ರಿತ ಚಾಕೊಲೇಟ್ ಮಾರಾಟ ದಂಧೆ: ಇಬ್ಬರ ಬಂಧನ

ಪ್ರತಿದಿನ 200ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆರೆಗಳ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ. ಈ ಯೋಜನೆಯಿಂದಾಗಿ ಸುರಪುರ ಭಾಗದಲ್ಲಿ ಜನರು ಕೆಲಸಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಿದಂತಾಗಿದೆ. ತಾಲೂಕಿನಲ್ಲಿ ಎಂಟು ಕೆರೆಗಳು ಆಯ್ಕೆಯಾಗಿವೆ. ಹಂತ ಹಂತವಾಗಿ ಇನ್ನೂ ಹೆಚ್ಚಿನ ಕೆರೆಗಳನ್ನು ಆಯ್ಕೆ ಮಾಡಲಾಗುವುದು.
-ಚಂದ್ರಶೇಖರ ಪವಾರ್‌, ತಾಪಂ ಇಒ, ಸುರಪುರ.

click me!