ದಾವಣಗೆರೆ: ಮತದಾರರ ಪಟ್ಟಿವಿಶೇಷ ಪರಿಷ್ಕರಣೆ

By Kannadaprabha News  |  First Published Sep 8, 2019, 2:43 PM IST

ಚುನಾವಣಾ ಆಯೋಗ ಆದೇಶದಂತೆ ಸೆ. 1ರಿಂದ 30ರ ವರೆಗೆ ದಾವಣಗೆರೆಯಲ್ಲಿ ಸಮಗ್ರ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನರು ಎಲ್ಲಿ ವಾಸವಿರುವರೋ ಅದಕ್ಕೆ ಸಂಬಂಧಪಟ್ಟವಿಧಾನಸಭಾ ಕ್ಷೇತ್ರದ ಭಾಗದ ಸಂಖ್ಯೆಯಲ್ಲಿ ಮಾತ್ರವೇ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನಮೂದಿಸಬೇಕಾಗಿದೆ.


ದಾವಣಗೆರೆ(ಸೆ.08): ಚುನಾವಣಾ ಆಯೋಗ ಆದೇಶದಂತೆ ಸೆ. 1ರಿಂದ 30ರ ವರೆಗೆ ಸಮಗ್ರ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮ ಹಮ್ಮಿಕೊಂಡಿದೆ.

ಮತಗಟ್ಟೆಮಟ್ಟದ ಅಧಿಕಾರಿಗಳು ಈ ಅವಧಿಯಲ್ಲಿ ಮತದಾರರ ಪಟ್ಟಿಯೊಂದಿಗೆ ಮತದಾರರ ಮನೆ ಬಾಗಿಲಿಗೆ ಬರಲಿದ್ದಾರೆ. ಸಾರ್ವಜನಿಕರು ಈ ಸದಾವಕಾಶ ಉಪಯೋಗಿಸಿಕೊಂಡು ಅವರು ಎಲ್ಲಿ ವಾಸವಿರುವರೋ ಅದಕ್ಕೆ ಸಂಬಂಧಪಟ್ಟವಿಧಾನಸಭಾ ಕ್ಷೇತ್ರದ ಭಾಗದ ಸಂಖ್ಯೆಯಲ್ಲಿ ಮಾತ್ರವೇ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನಮೂದಿಸಬೇಕು ಎಂದಿದ್ದಾರೆ.

Tap to resize

Latest Videos

ಅನರ್ಹ ಶಾಸಕರನ್ನು ತ್ಯಾಗ-ಬಲಿದಾನ ನೀಡೋ ಸೈನಿಕರಿಗೆ ಹೋಲಿಸಿದ ರೇಣುಕಾಚಾರ್ಯ!

ಒಂದು ವೇಳೆ ಒಬ್ಬರೇ ವಿವಿಧೆಡೆಗಳಲ್ಲಿ ತಮ್ಮ ಹೆಸರು ನಮೂದಿಸಿದಲ್ಲಿ ತಾವೇ ಸ್ವಯಂ ಪ್ರೇರಿತರಾಗಿ ಪುನರಾವರ್ತನೆಯಾಗುವ ತಮ್ಮ ಹೆಸರನ್ನು ಖುದ್ದು ತೆಗೆದುಹಾಕಲು ನಮೂನೆ-7 ಭರ್ತಿ ಮಾಡಿ ಸೆ. 30ರೊಳಗೆ ನೀಡಬೇಕು.

ಹೆಸರು ತಿದ್ದುಪಡಿ:

ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು, ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು ತಿದ್ದುಪಡಿಯಾಗ ಬೇಕಾದಲ್ಲಿ (ಹೆಸರು, ಲಿಂಗ, ಜನ್ಮ ದಿನಾಂಕ, ವಿಳಾಸ, ಭಾವಚಿತ್ರ) ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಬೇಕಾದ್ದಲ್ಲಿ, ಮತ್ತು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾಯಿಸ ಬೇಕಾದಲ್ಲಿ ನಮೂನೆಗಳನ್ನು ದಾಖಲಾತಿಗಳೊಂದಿಗೆ ನೀಡಬಹುದು.

ದಾವಣಗೆರೆ: ಹಾಲಿಗೆ ಮಾಜಿ ಅಬಕಾರಿ ಸಚಿವರ ಕ್ಲಾಸ್‌..!

ಮತದಾರರ ಸಹಾಯವಾಗಿ ಮೊಬೈಲ್‌ ಆ್ಯಪ್‌(ವೋಟರ್‌ ಹೆಲ್ಪ್‌ಲೈನ್‌, ಮೊಬೈಲ್‌ ಆ್ಯಪ್‌), ಎನ್‌ವಿಎಸ್‌ಪಿ ಪೋರ್ಟಲ್‌, ಸಾಮಾನ್ಯ ಸೇವಾ ಕೇಂದ್ರ, ಮತದಾರರ ಸೌಲಭ್ಯ ಕೇಂದ್ರ ತಹಶೀಲ್ದಾರ್‌ ಕಚೇರಿಯಲ್ಲಿ ಮಾಹಿತಿ ಪಡೆಯಬಹುದು. ವಿಕಲಚೇತನ ಮತದಾರರು ಸಹಾಯಕರು ಬೇಕಾಗಿದ್ದಲ್ಲಿ ಮತದಾರರ ಸಹಾಯವಾಣಿ 1950ರಲ್ಲಿ ಮಾಹಿತಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ವಿಧಾನಸಭಾ ಕ್ಷೇತ್ರದ ಮತಗಟ್ಟೆಮಟ್ಟದ ಅಧಿಕಾರಿಗಳು ತಾಲೂಕು ಕಚೇರಿಯ ಚುನಾವಣಾ ಸಿಬ್ಬಂದಿ ಸಂಪರ್ಕಿಸಬಹುದು ಎಂದು ತಾಲೂಕು ತಹಶೀಲ್ದಾರ್‌ ತಿಳಿಸಿದ್ದಾರೆ.

click me!