ಸಂವಿಧಾನದ ಆಶಯದಂತೆ ಬಡವರ ಸಮಸ್ಯೆಗೆ ಸ್ಪಂದಿಸುವೆ: ಶಾಸಕ ಎಚ್‌.ಡಿ.ತಮ್ಮಯ್ಯ

By Kannadaprabha News  |  First Published Jun 3, 2023, 1:20 AM IST

ಸಂವಿಧಾನದ ಆಶಯದಂತೆ ಪಕ್ಷಾತೀತ, ಜಾತ್ಯಾತೀತವಾಗಿ ಎಲ್ಲಾ ವರ್ಗದ ಬಡವರ ಸಮಸ್ಯೆಗಳಿಗೆ ಸ್ಪಂದಿಸಿ ಬದ್ಧತೆಯಿಂದ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದರು. 


ಚಿಕ್ಕಮಗಳೂರು (ಜೂ.03): ಸಂವಿಧಾನದ ಆಶಯದಂತೆ ಪಕ್ಷಾತೀತ, ಜಾತ್ಯಾತೀತವಾಗಿ ಎಲ್ಲಾ ವರ್ಗದ ಬಡವರ ಸಮಸ್ಯೆಗಳಿಗೆ ಸ್ಪಂದಿಸಿ ಬದ್ಧತೆಯಿಂದ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದರು. ತಾಲೂಕು ಕಚೇರಿಯಲ್ಲಿ ಆರಂಭಿಸಲಾದ ನೂತನ ಶಾಸಕರ ಜನಸಂಪರ್ಕ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನದ ಆಶಯದಂತೆ ತಾವು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಅದರಂತೆ ಆದ್ಯತೆ ಮೇಲೆ ಬಡವರ ಸಮಸ್ಯೆಗಳನ್ನು ಬಗೆಹರಿಸುವ ಜೊತೆಗೆ ಕ್ಷೇತ್ರದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಬೇಕು. 

ಸಾರ್ವಜನಿಕರಿಗೆ ಪಾರದರ್ಶಕ ಜನಸ್ನೇಹಿ ಆಡಳಿತ ನೀಡಲು ಬದ್ದವಾಗಿದ್ದೇನೆ ಎಂದರು. ಯಾವುದೇ ವ್ಯಕ್ತಿ ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತಂದರೆ ಸಂಬಂಧಪಟ್ಟಇಲಾಖೆ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಅವರ ಕೆಲಸ ಮಾಡಬೇಕೆಂದು ಸೂಚಿಸಿದ್ದೇನೆ. ಕ್ಷೇತ್ರದಲ್ಲಿ ನನಗೆ ಶಾಸಕರನ್ನಾಗಿಸಿದ್ದೀರಿ ಅವರೆಲ್ಲರಿಗೂ ಇದೇ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆಂದು ಹೇಳಿದರು. ದೀನ ದಲಿತ, ಶೋಷಿತರು, ಅಲ್ಪಸಂಖ್ಯಾತರು ಹಾಗೂ ಬಡವರ ಬಗ್ಗೆ ಕಾಳಜಿ ಹೊಂದಿದ್ದು, ಇವರಿಗೆ ಸರ್ಕಾರದ ಸವಲತ್ತು ತಲುಪಿಸಲು ಕಟಿ ಬದ್ಧನಾಗಿದ್ದೇನೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ. 

Tap to resize

Latest Videos

undefined

ಸಾರ್ವಜನಿಕ ಸೇವೆಯಲ್ಲಿ ಉದಾಸೀನತೆ ಬೇಡ: ಶಾಸಕ ಎಂ.ಟಿ.ಕೃಷ್ಣಪ್ಪ ಎಚ್ಚರಿಕೆ

ನಾವು ಮೌನವಾಗಿರುವುದನ್ನು ದೌರ್ಬಲ್ಯ ಎಂದು ಪರಿಗಣಿಸಬಾರದು. ನಮ್ಮ ಬೆಂಬಲಿಗರಿಗೆ, ಕಾರ್ಯಕರ್ತರಿಗೆ ತೊಂದರೆ ಕೊಡುತ್ತಿರುವುದು ಗಮನಕ್ಕೆ ಬಂದಿದೆ. ಇನ್ನು ಮುಂದೆ ಹಳೆ ಚಾಳಿ ಮುಂದುವರೆಸಿದರೆ ನಮಗೆ ನೀಡಿರುವ ಸಂವಿಧಾನಾತ್ಮಕ ಹಕ್ಕನ್ನು ಚಲಾಯಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರೀತಿ ರಾಜಕಾರಣವನ್ನು ಜನ ಒಪ್ಪಿದ್ದಾರೆ. ಅದಕ್ಕೆ ಬದ್ಧನಾಗಿ ಕೆಲಸ ಮಾಡುತ್ತೇನೆ. ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದ ತಮ್ಮಯ್ಯ ನೂತನ ಕಚೇರಿಯಲ್ಲಿ 3 ದಿನ ಹಾಗೂ ಕಾಂಗ್ರೆಸ್‌ ಕಚೇರಿಯಲ್ಲಿ ಪ್ರತಿ ಬುಧವಾರ ಇದ್ದು, ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತೇನೆ ಎಂದು ಭರವಸೆ ನೀಡಿದರು. 

ಇನ್ನು ಮುಂದೆ ನನ್ನನ್ನು ನೋಡಲು ಬರುವ ಮತದಾರರು, ಕಾರ್ಯಕರ್ತರು, ಹಿತೈಷಿಗಳು, ಸ್ನೇಹಿತರು, ಪಕ್ಷದ ಮುಖಂಡರು ಯಾವುದೇ ಕಾರಣಕ್ಕೂ ಹಾರ, ತುರಾಯಿ, ಪೇಟ, ಶಾಲು, ತರುವುದು ಬೇಡ, ಬದಲಾಗಿ ಒಂದು ಪುಸ್ತಕ ಒಂದು ಗುಲಾಬಿ ಹೂ ಕೊಟ್ಟರೆ ಸಾಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಬಿ.ಎಂ ಸಂದೀಪ್‌, ಪಕ್ಷದ ಮುಖಂಡರಾದ ಎಂ.ಎಲ್‌. ಮೂರ್ತಿ, ಎಚ್‌.ಪಿ. ಮಂಜೇಗೌಡ, ಎ.ಎನ್‌. ಮಹೇಶ್‌, ಎಚ್‌.ಎಚ್‌. ದೇವರಾಜ್‌, ಸೈಯದ್‌ ಹನೀಫ್‌, ಮಹಮದ್‌ ಅಕ್ಬರ್‌, ಕೆ.ಮಹಮದ್‌. ಅತೀಕ್‌ ಖೈಸರ್‌, ಡಿ.ಸಿ ಪುಟ್ಟೇಗೌಡ, ರೂಬಿನ್‌ ಮೊಸಸ್‌ ಇದ್ದರು.

ವಿಪಕ್ಷಗಳಿಗೆ ಗ್ಯಾರಂಟಿ ಬಗ್ಗೆ ಅನವಸರ ಗೊಂದಲ: ಸಂಸದ ಡಿ.ಕೆ.ಸುರೇಶ್‌

ಜವಾಬ್ದಾರಿ ಹೆಚ್ಚಳ: ಜನಪರ ಕಾಳಜಿ, ವಿಚಾರಗಳಿಗೆ ಸ್ಪಂದಿಸುವ ಶಾಸಕ ಎಚ್‌.ಡಿ ತಮ್ಮಯ್ಯ ಅವರು ಕಚೇರಿ ಉದ್ಘಾಟಿಸಿ ತಮ್ಮ ಜವಾಬ್ದಾರಿ ಹೆಚ್ಚಿಸಿಕೊಂಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ. ಕೆ.ಪಿ ಅಂಶುಮಂತ್‌ ಹೇಳೀದರು. ಕ್ಷೇತ್ರದಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಸುವ ಜೊತೆಗೆ ಅಭಿವೃದ್ಧಿ ವಿಚಾರಗಳಿಗೂ ಆದ್ಯತೆ ನೀಡಬೇಕು ಹಾಗೂ ಕಾಂಗ್ರೆಸ್‌ ಪಕ್ಷ ನೀಡಿರುವ ಪ್ರಣಾಳಿಕೆ ಅಂಶಗಳನ್ನು ಅನುಷ್ಠಾನ ಗೊಳಿಸಲು ಶ್ರಮಿಸಬೇಕೆಂದು ಎಂದು ಹೇಳಿದರು. ಸರ್ವ ಜನಾಂಗದ ಶಾಂತಿಯ ತೋಟ ಎಂಬಂತೆ ಕ್ಷೇತ್ರದಲ್ಲಿ ಸಂವಿಧಾನ ಬದ್ಧ ಅಧಿಕಾರ ಬಳಸಿ ಎಲ್ಲರಿಗೂ ಸರ್ಕಾರದ ಸೌಲಭ್ಯಗಳು ತಲುಪುವಂತೆ ಮಾಡುವ ಶಕ್ತಿ ತಮ್ಮಯ್ಯ ಅವರಿಗೆ ಬರಲಿ ಎಂದು ಹಾರೈಸಿದರು.

click me!