ಶಾಸಕರ ಸಮಯಪ್ರಜ್ಞೆ : ತಪ್ಪಿದ ದುರಂತ - 20 ಜೀವ ಉಳಿಸಿದ ರೇಣುಕಾಚಾರ್ಯ

By Suvarna News  |  First Published May 13, 2021, 3:35 PM IST
  • ಹೊನ್ನಾಳಿ ಆಸ್ಪತ್ರೆಯಲ್ಲಿಯೂ ದಿಢೀರ್ ಆಕ್ಸಿಜನ್ ಕೊರತೆ 
  • ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಮಯ ಪ್ರಜ್ಞೆ ಯಿಂದ ತಪ್ಪಿದ  ಭಾರಿ ದುರಂತ  
  • 20 ರೋಗಿಗಳ ಪ್ರಾಣ ಉಳಿಸಿದ ಶಾಸಕರು

ದಾವಣಗೆರೆ(ಮೇ.13): ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿದ್ದಂತೆ ಆಕ್ಸಿಜನ್‌ಗೂ ಎಲ್ಲೆಡೆ ಹಾಹಾಕಾರ ಶುರುವಾಗಿದೆ. ಹೊನ್ನಾಳಿ ಆಸ್ಪತ್ರೆಯಲ್ಲಿಯೂ ದಿಢೀರ್ ಕೊರತೆ ಎದುರಾಗಿದ್ದು, ಈ ವೇಳೆ ಶಾಸಕ ರೇಣುಕಾಚಾರ್ಯ ತಕ್ಷಣ ನೆರವಾಗಿದ್ದಾರೆ. 

ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ 1 ಗಂಟೆಗೆ ಆಕ್ಸಿಜನ್ ಕೊರತೆ ಎದುರಾಗಿದ್ದು,  ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಮಯ ಪ್ರಜ್ಞೆ ಯಿಂದ  ಭಾರಿ ದುರಂತ ತಪ್ಪಿದೆ.

Latest Videos

undefined

ಬೆಂಗಳೂರಲ್ಲಿ ತಡರಾತ್ರಿ 30 ರೋಗಿಗಳ ಪ್ರಾಣ ಉಳಿಸಿದ ಸೋನು ಸೂದ್ ಟ್ರಸ್ಟ್ .

ಕೂಡಲೇ ಕಾರ್ಯಪ್ರವೃತ್ತರಾದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಹೊನ್ನಾಳಿ ಪಟ್ಟಣದಲ್ಲಿರುವ ಆಸ್ಪತ್ರೆಗೆ ತಾಲೂಕು ಅಧಿಕಾರಿಗೊಂದಿಗೆ  ಭೇಟಿ‌ ನೀಡಿದ್ದಾರೆ.  ಪಿ ಪಿ ಕಿಟ್ ಧರಿಸಿ ವೆಂಟಿಲೇಟರ್ ವಾರ್ಡಿಗೆ ಬಂದು ಆಕ್ಸಿಜನ್ ಸ್ಪೀಡ್  ಪರಿಶೀಲನೆ ನಡೆಸಿದ್ದಾರೆ. ಈ ವೇಳೆ  20 ಜನ ಕೊವಿಡ್ ರೋಗಿಗಳು ಆಕ್ಸಿಜನ್ ಬೆಡ್ ನಲ್ಲಿದ್ದು ಕೇವಲ ಮೂರು ಗಂಟೆಗೆ ಸಾಕಾಗುವಷ್ಟು  ಆಕ್ಸಿಜನ್ ಬಾಕಿ ಉಳಿದಿತ್ತು

ಸರ್ಕಾರ ನಡೆಸೋದೇ ಕಷ್ಟ: ಅಸಹಾಯಕತೆ ಹೊರಹಾಕಿದ ರೇಣುಕಾಚಾರ್ಯ  

ಕೂಡಲೇ ಅಧಿಕಾರಿಗಳೊಂದಿಗೆ ಖಾಲಿ ಸಿಲಿಂಡರ್ ಸಮೇತ ಹರಿಹರಕ್ಕೆ ತೆರಳಿದ ಶಾಸಕರು ಮಧ್ಯರಾತ್ರಿ 1 ಗಂಟೆಗೆ ಹರಿಹರದ ಸದರನ್‌ ಗ್ಯಾಸ್ ರೀಫಿಲ್ಲಿಂಗ್  ಘಟಕಕ್ಕೆ ತೆರಳಿ ತಾವೆ ತೆರಳಿ ಸಿಲಿಂಡರ್ ತುಂಬಿಸಿದ್ದಾರೆ. 

ಮತ್ತೇ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ತೆರಳಿ ಆಕ್ಸಿಜನ್ ಸಿಲಿಂಡರ್ ಜೋಡಿಸಿದ ಶಾಸಕರು 20 ರೋಗಿಗಳ ಪ್ರಾಣ ಉಳಿಸಿದ್ದಾರೆ. ಶಾಸಕರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ ತಪ್ಪಿದೆ.  ಶಾಸಕರ ಕಾರ್ಯಕ್ಕೆ ರೋಗಿಗಳು  ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. 

click me!