
ಶೃಂಗೇರಿ (ಡಿ.28): ಜಗತ್ತಿಗೆ ಸತ್ಯ ಎಂಬುದು ಒಂದೇ ಧರ್ಮ ಇದೆ. ಬೇರೆ ಎಲ್ಲವೂ ಮತಗಳಷ್ಟೆ. ಅದರಲ್ಲೂ ಕೆಡಕುಗಳನ್ನುಂಟು ಮಾಡುವುದು ಧರ್ಮವೇ ಎಲ್ಲ. ಸತ್ಯದ ತಳಹದಿ ಸರ್ವರ ಒಳಿತು ಇರುವುದೇ ಧರ್ಮ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು. ಪಟ್ಟಣದ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ 50 ನೇ ಸುವರ್ಣ ಮಹೋತ್ಸವ, ಸುವರ್ಣ ಪಟ್ಟಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತದಲ್ಲಿ ವಿವಿಧತೆಯಿದೆ.
ಆದರೆ ಅದು ಪ್ರತ್ಯೇಕತೆಯ ಲಕ್ಷಣವಲ್ಲ ಎಂಬುದರ ಮೂಲಕ ಹಿಂದೂ ರಾಷ್ಟ್ರ ಪರ ವಿರೋಧ ಚರ್ಚೆಯ ವಿಷಯವನ್ನು ಪ್ರಸ್ತಾಪಿಸಲಾಗುತ್ತಿದೆ. ಭಾರತದ ವಿವಿಧತೆ ಬಗ್ಗೆ ವಿವಿಧತೆ ಬಗ್ಗೆ ಕೆಲವರು ಪ್ರತ್ಯೇಕತೆ ಭಾವಿಸಿದ್ದು, ಇದು ಭಾರತದ ವಿವಿಧತೆ ಪ್ರತ್ಯೇಕತೆ ಲಕ್ಷಣವಲ್ಲ. ಕುವೆಂಪು ಕೂಡ ಇದನ್ನೇ ಬರೆದಿದ್ದಾರೆ. ಒಕ್ಕಲಿಗರ ಒಳಪಂಗಡಗಳನ್ನು ಒಗ್ಗೂಡಿಸಿದ ಕೀರ್ತಿ, ಹೆಗ್ಗಳಿಕೆ ಬಾಲಗಂಗಾಧರನಾಥ ಸ್ವಾಮೀಜಿ ಗಳಿಗೆ ಸಲ್ಲುತ್ತದೆ ಎಂದರು.
ಬರಗಾಲದ ಸಮಸ್ಯೆ ಜಿಲ್ಲೆಯಲ್ಲಿ ಯಾವ ಪ್ರಮಾಣದಲ್ಲಿದೆ?: ಕೋಲಾರ ಜಿಲ್ಲಾಧಿಕಾರಿಗೆ ಸಿಎಂ ಪ್ರಶ್ನೆ
ದತ್ತಜಯಂತಿ ಶೋಭಾಯಾತ್ರೆಯಲ್ಲಿ ಅಶೋಕ್, ರವಿ, ಶೋಭಾ: ಪಶ್ಚಿಮಘಟ್ಟದ ತಪ್ಪಲಲ್ಲಿರುವ ಶ್ರೀ ಗುರು ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಮಂಗಳವಾರ ತೆರೆ ಕಾಣಲಿರುವ ದತ್ತಜಯಂತಿ ಉತ್ಸವದ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಸೋಮವಾರ ನಡೆದ ಶೋಭಾಯಾತ್ರೆ ಶಾಂತಿಯುತವಾಗಿ ಸಂಪನ್ನವಾಯಿತು. ತಂಡೋಪ ತಂಡವಾಗಿ ಯಾತ್ರೆಯಲ್ಲಿ ಸಾಗಿದ ಯುವಕರು ಮುಗಿಲು ಮುಟ್ಟುವಂತೆ ಘೋಷಣೆ ಹಾಕುತ್ತಿದ್ದರು. ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆಗೆ ರಸ್ತೆಯ ಉದ್ದಕ್ಕೂ ನಿಂತಿದ್ದ ಸಾರ್ವಜನಿಕರು ಧ್ವನಿ ಗೂಡಿಸುತ್ತಿದ್ದರು.
ಶೋಭಾಯಾತ್ರೆಯಲ್ಲಿ ಡಿಜೆ, ಗೊಂಬೆ ಮೇಳ, ಹಳ್ಳಿ ವಾದ್ಯಗಳು ಇದ್ದವು. ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಸಿ.ಟಿ.ರವಿ, ಪ್ರಮೋದ್ ಮಧ್ವರಾಜ್, ಶಾಸಕ ವಿ.ಸುನಿಲ್ ಕುಮಾರ್ ಮತ್ತಿತರ ನಾಯಕರು ಇದ್ದರು, ಗಣಪತಿ ದೇಗುಲದಿಂದ ಆರಂಭವಾದ ಮೆರವಣಿಗೆಯು ಆಜಾದ್ ಪಾರ್ಕ್ ವೃತ್ತಕ್ಕೆ ತಲುಪಿದ ಬಳಿಕ ಮುಕ್ತಾಯಗೊಂಡಿತು.
ಲೋಕಸಭೆ ಚುನಾವಣೆಯಲ್ಲಿ ಕೋಲಾರದಿಂದ ಬಿಜೆಪಿಯನ್ನು ಗೆಲ್ಲಿಸಿ: ಸಂಸದ ಮುನಿಸ್ವಾಮಿ
ಇಂದು ತೆರೆ: ಮೂರು ದಿನಗಳ ದತ್ತ ಜಯಂತಿ ಉತ್ಸವಕ್ಕೆ ತೆರೆ ಬೀಳಲಿದೆ. ರಾಜ್ಯದ ವಿವಿಧೆಡೆಯಿಂದ ಸಾವಿರಾರು ದತ್ತಭಕ್ತರು ಮಾಲೆ ಧರಿಸಿ ಆಗಮಿಸಿದ್ದಾರೆ. ಬೆಳಿಗ್ಗೆ ಆಗಮಿಸಲಿರುವ ದತ್ತಪೀಠದ ದತ್ತ ಗುಹೆಯೊಳಗೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆದು ನಂತರ ನಿರ್ಗಮಿಸಲಿದ್ದಾರೆ. ದತ್ತಪೀಠಕ್ಕೆ ಅಶೋಕ್ ಭೇಟಿ: ಇದೇ ಮೊದಲ ಬಾರಿಗೆ ದತ್ತಮಾಲೆ ಧರಿಸಿರುವ ಆರ್.ಅಶೋಕ್ ಅವರು ದತ್ತಪೀಠಕ್ಕೆ ತೆರಳಿ ದತ್ತ ಪಾದುಕೆಗಳ ದರ್ಶನ ಪಡೆದರು. ಸುನಿಲ್ ಕುಮಾರ್ ಸಾಥ್ ನೀಡಿದರು.