ಪೋಕ್ಸೋ ಕೇಸ್‌ ಹಾಕ್ತೀವಿ ಅಂತಾ ಬೆದರಿಸಿ ವ್ಯಕ್ತಿಯಿಂದ ₹65 ಲಕ್ಷ ಕಿತ್ತ ಐವರು ಮಹಿಳೆಯರ ಖತರ್ನಾಕ್ ಗ್ಯಾಂಗ್!

Kannadaprabha News   | Kannada Prabha
Published : Apr 01, 2026, 11:59 AM IST
Ramanagara 5 Women Extort Rs 65 Lakh from Man with POCSO Case Threat

ಸಾರಾಂಶ

ರಾಮನಗರದಲ್ಲಿ ಐವರು ಮಹಿಳೆಯರ ಗ್ಯಾಂಗ್, ಥಿಯೇಟರ್ ಮಾಲೀಕರೊಬ್ಬರಿಗೆ ಪೋಕ್ಸೊ ಕೇಸ್ ಹಾಕುವುದಾಗಿ ಬೆದರಿಸಿ ₹65 ಲಕ್ಷ ಸುಲಿಗೆ ಮಾಡಿದೆ. ಮದುವೆಯಾಗುವುದಾಗಿ ನಂಬಿಸಿ, ಹಂತ ಹಂತವಾಗಿ ಹಣ ಪಡೆದ ಈ ಗ್ಯಾಂಗ್ ವಿರುದ್ಧ ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮನಗರ (ಏ.1): ಐವರು ಮಹಿಳೆಯರ ಗ್ಯಾಂಗ್‌ವೊಂದು ವ್ಯಕ್ತಿಯೊಬ್ಬರಿಗೆ ಪೋಕ್ಸೊ ಕೇಸ್ ಹಾಕಿಸಿ ಜೈಲಿಗೆ ಕಳಿಸ್ತೇವೆ ಎಂದು ಬೆದರಿಸಿ ₹65 ಲಕ್ಷ ರೂಪಾಯಿ ಕಿತ್ತುಕೊಂಡ ಆಘಾತಕಾರಿ ಘಟನೆ ರಾಮನಗರದಲ್ಲಿ ನಡೆದಿದೆ.

ಐವರು ಮಹಿಳೆಯರ ಖತರ್ನಾಕ್ ಗ್ಯಾಂಗ್

ಈ ಐವರು ಮಹಿಳೆಯರ ಗ್ಯಾಂಗ್‌ ಸಾಮಾನ್ಯರಲ್ಲ. 52 ವರ್ಷದ ಥಿಯೇಟರ್ ಮಾಲೀಕರೊಬ್ಬರಿಂದ ಬರೋಬ್ಬರಿ ₹65 ಲಕ್ಷ ಸುಲಿಗೆ ಮಾಡಿದ್ದಾರೆ. ಶಂಕರ್ ಚಿತ್ರ ಮಂದಿರದ ಮಾಲೀಕ ಎನ್.ಮಂಜುನಾಥ್ ವಂಚನೆಗೊಳಗಾದವರು. 7 ವರ್ಷಗಳ ಹಿಂದೆ ಪತ್ನಿ ಬಿಟ್ಟು ಹೋದ ನಂತರ ಮಂಜುನಾಥ್ ಏಕಾಂಗಿಯಾಗಿದ್ದರು. ಆರೇಳು ತಿಂಗಳ ಹಿಂದೆ ಲತಾ ಎಂಬ ಮಹಿಳೆ ಥಿಯೇಟರ್‌ಗೆ ಸಿನಿಮಾ ನೋಡಲು ಬಂದಾಗ ಮಂಜುನಾಥ್‌ರನ್ನು ಪರಿಚಯ ಮಾಡಿಕೊಂಡು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾಳೆ. 

ನಂತರ ಆಕೆ ಗಗನ ಮತ್ತು ಅಪೂರ್ವ ಎಂಬುವರನ್ನು ಪರಿಚಯಿಸಿದ್ದಾಳೆ. ಈ ಎಲ್ಲಾ ಮಹಿಳೆಯರು ಮೊದಲು ಸಣ್ಣ ಮೊತ್ತದಲ್ಲಿ ಸುಲಿಗೆ ಮಾಡಿ, ನಂತರ ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡಲು ನಿರಾಕರಿಸಿದಾಗಲೆಲ್ಲ ಪೋಕ್ಸೊ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಸಿ ಒಟ್ಟು ₹65 ಲಕ್ಷ ಸುಲಿಗೆ ಮಾಡಿದ್ದಾರೆ. ಈ ಸಂಬಂಧ ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

PREV
Read more Articles on
click me!

Recommended Stories

ಸಡಗರ ಸಂಭ್ರಮದಿಂದ ನಡೆದ ಐತಿಹಾಸಿಕ ಬೇತಮಂಗಲದ ಒನಕೆ ಕರಗ
ಕಳೆದ 5 ವರ್ಷಗಳಲ್ಲಿ 468 ಹುಸಿ ಬಾಂಬ್ ಕರೆ, 14 ಆರೋಪಿಗಳ ಬಂಧನ, ಇಬ್ಬರಿಗೆ ಮಾತ್ರವೇ ಶಿಕ್ಷೆ!