ಕೈಕೊಟ್ಟ ಮುಂಗಾರು: ರೈತ ಕಂಗಾಲು : ಮುಗಿಲತ್ತ ಅನ್ನದಾತನ ಮುಖ

By Kannadaprabha News  |  First Published Jul 2, 2023, 8:19 AM IST

ರೈತನಿಗೆ ಭೂತಾಯಿಯೇ ಸರ್ವಸ್ವ. ಮುಂಗಾರು ಮಳೆಯಿಂದ ರೈತ ಇಷ್ಟೊತ್ತಿಗೆ ಬಿತ್ತನೆ ಶುರು ಮಾಡಿರಬೇಕಿತ್ತು. ಈ ಬಾರಿಯ ಮುಂಗಾರು ಮಳೆಯು 171 ಮಿ.ಮೀಟರ್‌ ರಷ್ಟುಮಾತ್ರ ಮಳೆಯಾಗಿದ್ದು, ತಾಲೂಕಿನಲ್ಲಿ ಈ ವರ್ಷ ಶೇ.15 ರಷ್ಟುಮಳೆ ಕೊರತೆ ಕಂಡು ಬಂದಿದೆ. ರೈತರು ಕಂಗಾಲಾಗಿ ಆಕಾಶದತ್ತ ಮುಖ ಮಾಡಿ ಮಳೆಗಾಗಿ ಎದುರು ನೋಡುತ್ತಿದ್ದಾರೆ.


 ಕೊರಟಗೆರೆ :  ರೈತನಿಗೆ ಭೂತಾಯಿಯೇ ಸರ್ವಸ್ವ. ಮುಂಗಾರು ಮಳೆಯಿಂದ ರೈತ ಇಷ್ಟೊತ್ತಿಗೆ ಬಿತ್ತನೆ ಶುರು ಮಾಡಿರಬೇಕಿತ್ತು. ಈ ಬಾರಿಯ ಮುಂಗಾರು ಮಳೆಯು 171 ಮಿ.ಮೀಟರ್‌ ರಷ್ಟುಮಾತ್ರ ಮಳೆಯಾಗಿದ್ದು, ತಾಲೂಕಿನಲ್ಲಿ ಈ ವರ್ಷ ಶೇ.15 ರಷ್ಟುಮಳೆ ಕೊರತೆ ಕಂಡು ಬಂದಿದೆ. ರೈತರು ಕಂಗಾಲಾಗಿ ಆಕಾಶದತ್ತ ಮುಖ ಮಾಡಿ ಮಳೆಗಾಗಿ ಎದುರು ನೋಡುತ್ತಿದ್ದಾರೆ.

ರಾಜ್ಯ ಸೇರಿದಂತೆ ಜಿಲ್ಲೆಯ ಅನೇಕ ಭಾಗಗಳಲ್ಲಿ ಸಾಧಾರಣ ಯಾಗಿದೆ. ಆದರೆ ಕೊರಟಗೆರೆ ತಾಲೂಕಿನಲ್ಲಿ ಮೋಡ ಕವಿದ ವಾತಾವರಣವಿದ್ದು ಮಳೆ ಮಾತ್ರ ಬರುತ್ತಿಲ್ಲ. ಕಳೆದ ಹಲವಾರು ದಿನಗಳಿಂದ ವಿಪರೀತ ಬಿಸಲಿನ ತಾಪವನ್ನು ಜನತೆ ಅನುಭವಿಸುತ್ತಿದ್ದಾರೆ. ತಾಲೂಕಿನ ರೈತರು ಶೇ.30 ರಿಂದ 35ರಷ್ಟುಮಾತ್ರ ಉಳುಮೆ ಕಾರ್ಯ ಮುಗಿಸಿದ್ದು ಶೇ.65ಕ್ಕೂ ಹೆಚ್ಚಿನ ಪ್ರಮಾಣದ ರೈತರು ಉಳುಮೆ ಮಾಡಲು ಮಳೆರಾಯನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

Tap to resize

Latest Videos

ಕೃಷಿ ಇಲಾಖೆ ಹಾಕಿಕೊಂಡಿರುವ ಯೋಜನೆ:  ತಾಲೂಕಿನ ಮುಂಗಾರು ಬಿತ್ತನೆ ಕೃಷಿ ಚಟುವಟಿಕೆಗೆ ಕೃಷಿ ಇಲಾಖೆಯು ಈ ಬಾರಿ ಹೊಸ ಯೋಜನೆ ರೂಪಿಸಿಕೊಂಡಿದೆ. 4 ಹೋಬಳಿಯಲ್ಲಿ ಸುಮಾರು 31995 ಹೆಕ್ಟೇರ್‌ ಭೂಮಿಯಲ್ಲಿ ಮುಸುಕಿನ ಜೋಳ 16333, ರಾಗಿ 8997, ತೊಗರಿ 850, ಉರುಳಿ 10150, ಶೇಂಗಾ 3000, ಭತ್ತ 550 ಸೇರಿದಂತೆ ಹಲಸಂದೆ, ಸಾಸಿವೆ, ಹರಳು ಋುಣಧಾನ್ಯಗಳ ಬಿತ್ತನೆಗೆ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ತಯಾರಿ ನಡೆಸಿದೆ. ಆದರೆ ಈ ವರ್ಷ ಜೂನ್‌ ಅಂತ್ಯವಾದರೂ ಸಹ ಅಲ್ಲಲ್ಲಿ ಅಲ್ಪ ಸ್ವಲ್ಪ ಮಳೆಯಾಗಿದ್ದು ಬಿತ್ತನೆ ಮಾಡಲು ರೈತರು ಮಳೆಗಾಗಿ ಮುಗಿಲತ್ತ ಮುಖ ಮಾಡಿ ಕಾತುರದಲ್ಲಿದ್ದಾರೆ.

ಬಿತ್ತನೆ ಮತ್ತು ಉಳುಮೆಗೆ ಮುಂಗಾರು ಮಳೆಗಾಗಿ ಎದುರು ನೋಡುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಪ್ರಮಾಣದಲ್ಲಿ ಮಳೆ ಆಗಿದ್ದು, ಕೃಷಿ ಇಲಾಖೆಯಿಂದ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಿಸಲಾಗುತ್ತಿದೆ. ಇಲಾಖೆಯ ಈ ವರ್ಷದ ಯೋಜನೆಯ ಪ್ರಕಾರ ಉತ್ತಮ ಪಸಲಿಗೆ ಮಳೆಯ ಅವಶ್ಯಕತೆ ಅತಿಮುಖ್ಯವಾಗಿದೆ ಎನ್ನುತ್ತಾರೆ ಕೊರಟಗೆರೆಯ ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಎಚ್‌.ನಾಗರಾಜು.

ಮುಂಗಾರು ಮಳೆಯೇ ಬಿತ್ತನೆ ಮತ್ತು ಉಳುಮೆಗೆ ಸೂಕ್ತ ಮಳೆ. ಆದರೆ ಈ ವರ್ಷ ಅಲ್ಪ ಸ್ವಲ್ಪ ಮಳೆಯಾಗಿದೆ. ನಾವು ಉಳುಮೆ ಮಾಡಿಕೊಂಡಿದ್ದು, ಬಿತ್ತನೆಗೆ ಮಳೆಗಾಗಿ ಎದುರು ನೋಡುತ್ತಿದ್ದೇವೆ ಎನ್ನುತ್ತಾರೆ

ಬಳೆವೀರನಹಳ್ಳಿ ರೈತ ಚಿಕ್ಕಿರಪ್ಪ ಟಿ.ಜಿ.

click me!