ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ನಾಳೆ ಕಲಾವಿದರಿಂದ ಪ್ರತಿಭಟನೆ

By Kannadaprabha News  |  First Published Aug 24, 2022, 1:04 PM IST
  • ಉತ್ತರ ಕರ್ನಾಟಕ ಕಲಾವಿದರ ಒಕ್ಕೂಟದಿಂದ ಕಲಾವಿದರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ.
  • ಆ. 25ರಂದು ನಗರದಲ್ಲಿ ಕಲಾವಿದರ ಪ್ರತಿಭಟನಾ ಮೆರವಣಿಗೆ
  • 2000ಕ್ಕೂ ಹೆಚ್ಚು ಕಲಾವಿದರು ವೇಷ-ಭೂಷಣ ಧರಿಸಿ ಪ್ರತಿಭಟನೆಯಲ್ಲಿ ಭಾಗಿ
  • ಡಿಸಿ ಕಚೇರಿಗೆ ಬಂದು ಪ್ರತಿಭಟಿಸಲಿದ್ದಾರೆ

ಧಾರವಾಡ (ಆ.24) : ಉತ್ತರ ಕರ್ನಾಟಕ ಕಲಾವಿದರ ಒಕ್ಕೂಟದಿಂದ ಕಲಾವಿದರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ. 25ರಂದು ನಗರದಲ್ಲಿ ಕಲಾವಿದರ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಮಂಗಳವಾರÜ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಲಾವಿದ, ಹೋರಾಟಗಾರ ಮಹಾದೇವ ದೊಡ್ಡಮನಿ, ಬೆಳಗ್ಗೆ 11.30ಕ್ಕೆ ವಿದ್ಯಾವರ್ಧಕ ಸಂಘದಿಂದ 2000ಕ್ಕೂ ಹೆಚ್ಚು ಕಲಾವಿದರು ವೇಷ-ಭೂಷಣ ಧರಿಸಿ, ಮೆರವಣಿಗೆ ಕೈಗೊಂಡು, ಡಿಸಿ ಕಚೇರಿಗೆ ಬಂದು ಪ್ರತಿಭಟಿಸಲಿದ್ದಾರೆ. ಕಲಾವಿದರ ವಿವಿಧ ಬೇಡಿಕೆ ಈಡೇರಿಸುವಂತೆ ಅನೇಕ ವರ್ಷಗಳಿಂದ ಆಗ್ರಹಿಸುತ್ತ ಬರಲಾಗಿದೆ. ಆದರೆ, ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿ​ಗಳು ಕಲಾವಿದರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು

.ಕಲಾವಿದರ ಬದುಕು ಸಂಕೀರ್ಣತೆ, ಸಂದಿಗ್ಧತೆಯಲ್ಲಿ ಸಾಗಿದೆ: ಸುಚೇಂದ್ರ ಪ್ರಸಾದ್‌

Tap to resize

Latest Videos

ಹಿರಿಯ ಕಲಾವಿದರಿಗೆ 55 ವರ್ಷ ವಯಸ್ಸಿನ ನಂತರ ಮಾಸಾಶನ ನೀಡುವ ಬದಲು 40 ವರ್ಷದಿಂದ ನೀಡಬೇಕು. ಮಾಸಾಶನದ ಮೊತ್ತವನ್ನು . 2ರಿಂದ . 5 ಸಾವಿರಕ್ಕೆ ಹೆಚ್ಚಿಸಬೇಕು. ಕಲಾವಿದರಿಗೆ ಆರೋಗ್ಯ ಕಾರ್ಡ್‌ ವಿತರಿಸಿ, ಅವರ ವೈದ್ಯಕೀಯ ವೆಚ್ಚ ತಗ್ಗಿಸಬೇಕು. ಗ್ರಾಮೀಣ ಭಾಗದ ಕಲೆಗಳ ಉತ್ತೇಜನಕ್ಕೆ ವಿಶೇಷ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು. ಮುಂದಿನ ಹಂತದಲ್ಲಿ ಉತ್ತರ ಕರ್ನಾಟಕ ಭಾಗದ 17 ಜಿಲ್ಲೆಗಳ ಕಲಾವಿದರು ಸೇರಿ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಿದ್ದು, ಕೇಂದ್ರ ಸಚಿವರು, ರಾಜ್ಯ ಸಚಿವರ ಮನೆಯ ಮುಂದೆ ಟೆಂಟ್‌ ಹಾಕಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.

ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ ಆರೋಗ್ಯದಲ್ಲಿ ಸುಧಾರಣೆ

ಸುದ್ದಿಗೋಷ್ಠಿಯಲ್ಲಿ ಇಮಾಮಸಾಬ್‌ ಒಲ್ಲೆಪ್ಪನವರ, ಪ್ರಕಾಶ ಮಲ್ಲಿಗವಾಡ, ಶಿವಾನಂದ ಅಮರಶೆಟ್ಟಿ, ಬಸವರಾಜ ಮುರಗೋಡ ಇದ್ದರು.

ತಮ್ಮ ಬೇಡಿಕೆ ಈಡೇರಿಸದಿದ್ದರೆ ಸರ್ಕಾರದ ಯಾವುದೇ ಜಯಂತಿ ಹಾಗೂ ಕಾರ್ಯಕ್ರಮಗಳಲ್ಲಿ ಕಲಾ ಪ್ರದರ್ಶನ ಮಾಡದಿರಲು ನಿರ್ಧರಿಸಲಾಗಿದೆ. ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಸುಗಮ ಸಂಗೀತ ಕಾರ್ಯಕ್ರಮಕ್ಕೆ . 1.5 ಲಕ್ಷ ನೀಡಿದರೆ, ಜಾನಪದ ಕಲಾ ಪ್ರದರ್ಶನಕ್ಕೆ . 10ರಿಂದ . 15 ಸಾವಿರ ನೀಡುತ್ತಿದೆ. ಮಠಗಳಿಗೆ ಅನುದಾನ ನೀಡುವ ಸರ್ಕಾರ ಕಲಾ ತಂಡಗಳನ್ನು ಕಡೆಗಣಿಸಿದೆ.

ಮಹಾದೇವ ದೊಡ್ಡಮನಿ ಕಲಾವಿದ

click me!