ಮಣ್ಣಿನ ಮಕ್ಕಳ ಸರಕಾರ ಬಂದರಷ್ಟೇ ರೈತರು, ಬಡವರು, ಜನಸಾಮನ್ಯರ ಪ್ರಗತಿ ಸಾಧ್ಯ ಎಂಬುದನ್ನು ತಾಲೂಕಿನ ರೈತರು ಅರಿಯಬೇಕು ಎಂದು ಜೆಡಿಎಸ್ ಅಭ್ಯರ್ಥಿ ಡಾ.ವಿ.ಎಂ.ರಮೇಶ್ ಬಾಬು ಹೇಳಿದರು.
ಕೆಜಿಎಫ್: ಮಣ್ಣಿನ ಮಕ್ಕಳ ಸರಕಾರ ಬಂದರಷ್ಟೇ ರೈತರು, ಬಡವರು, ಜನಸಾಮನ್ಯರ ಪ್ರಗತಿ ಸಾಧ್ಯ ಎಂಬುದನ್ನು ತಾಲೂಕಿನ ರೈತರು ಅರಿಯಬೇಕು ಎಂದು ಜೆಡಿಎಸ್ ಅಭ್ಯರ್ಥಿ ಡಾ.ವಿ.ಎಂ.ರಮೇಶ್ ಬಾಬು ಹೇಳಿದರು.
ನಗರದ ನಾನಾ ಬಡಾವಣೆಗಳಲ್ಲಿ ಪಕ್ಷದ ಪರ (Election) ಪ್ರಚಾರದಲ್ಲಿ ತೊಡಗಿಸಿಕೊಂಡು ಮಾತನಾಡಿ, ರಾಜ್ಯದ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ಪಂಚರತ್ನ ಯಾತ್ರೆ ಎಚ್.ಡಿ.ಕೆ ಪ್ರಾರಂಬಿಸಿದ್ದಾರೆ, ಪಂಚರತ್ನ ಯೋಜನೆಯ ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ ಹಾಗೂ ವಸತಿ ಯೋಜನೆಗೆ 1.24 ಲಕ್ಷ ಕೋಟಿ ಹಣ ಬೇಕಿದೆ, ಇದಕ್ಕಾಗಿ ಜೆಡಿಎಸ್‌ಗೆ ಸ್ವತಂತ್ರವಾಗಿ ಸರಕಾರ ರಚನೆ ಮಾಡಬೇಕು, ಕೆಜಿಎಫ್‌ಗೆ ರಮೇಶ್‌ಬಾಬು ರಾಜ್ಯಕ್ಕೆ ಕುಮಾರಣ್ಣ ಎಂಬ ಘೋಷ ವಾಕ್ಯದೊಂದಿಗೆ ನಗರದ ಪ್ರತಿ ಮನೆ ಮನೆಗೂ ಭೇಟಿ ನೀಡಿ ಮತದಾರರ ಮನವೊಲಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
undefined
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶ ಆತಂತ್ರವಾದರೆ ಕಾಂಗ್ರೆಸ್ ಅಥವಾ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕಾಗುತ್ತದೆ, ಅತಂಹ ವಾತಾವರಣ ಸೃಷ್ಟಿಮಾಡದೇ ಪೂರ್ಣವದಿ ಸರಕಾರ ಮಾಡಲು ನಿಮ್ಮಲ್ಲರ ಆರ್ಶೀವಾದ ಬೇಕಿದೆ, ರಾಜ್ಯದಲ್ಲಿ 123 ಸ್ಥಾನ ಪಡೆಯಬೇಕಾದರೆ ಕೆಜಿಎಫ್ ವಿಧಾನ ಸಭಾ ಕ್ಷೇತ್ರದಿಂದ ರಮೇಶ್‌ಬಾಬುರನ್ನು ಆಯ್ಕೆ ಮಾಡಿ ವಿಧಾನಸಭೆ ಕಳುಹಿಸಿ ಎಂದರು.
ಇಲ್ಲಿ ಚುನಾವಣಾ ಟಿಕೆಟ್‌ಗೆ ಭಾರಿ ಕಸರತ್ತು
ರಾಯಚೂರು : ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳು ಇವೆ. 7 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಜತೆಗೆ ಈ ಬಾರಿ ಜೆಡಿಎಸ್ ಸ್ಪರ್ಧೆಗೆ ಮುಂದಾಗಿದ್ದು, 2023ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಐದು ವಿಧಾನಸಭಾ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಶಾಸಕ ಮತ್ತು ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಲಿಂಗಸೂಗೂರು ಕ್ಷೇತ್ರಕ್ಕೆ ಸಿದ್ದು ಬಂಡಿ, ದೇವದುರ್ಗ ಕ್ಷೇತ್ರಕ್ಕೆ ಕರೆಮ್ಮ ಗೋಪಾಲ ನಾಯಕ, ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಮೊನ್ನೆ ತಾನೇ ಜೆಡಿಎಸ್ ಸೇರ್ಪಡೆಗೊಂಡ ಸಣ್ಣ ನರಸಿಂಹ ನಾಯಕ ಅವರಿಗೆ ಟಿಕೆಟ್ ಘೋಷಣೆ ಮಾಡಿ ಜೆಡಿಎಸ್ ಹೈಕಮಾಂಡ್ ಆದೇಶ ಮಾಡಿದೆ. ಆದ್ರೆ ಇನ್ನುಳಿದ ಎರಡು ಕ್ಷೇತ್ರಗಳು ಮಾತ್ರ ಯಾರಿಗೆ ಟಿಕೆಟ್ ನೀಡುತ್ತಾರೆ ಎಂಬ ಕುತೂಹಲವಿದೆ. ಹೀಗಾಗಿ ಆ ಎರಡು ಟಿಕೆಟ್ ಗಾಗಿ ಜೆಡಿಎಸ್ ಮುಖಂಡರು ಹೈಕಮಾಂಡ್ ಮನವೊಲಿಸಲು ಮುಂದಾಗಿದ್ದಾರೆ. ಆದ್ರೂ ಆಕಾಂಕ್ಷಿಗಳು ನಮಗೆ ಜೆಡಿಎಸ್ ಟಿಕೆಟ್ ಸಿಗುತ್ತೆ ಅಂತ ಕ್ಷೇತ್ರದಲ್ಲಿ ಓಡಾಟ ಶುರು ಮಾಡಿದ್ದಾರೆ.
Ground Report: ರಾಯಚೂರಿನಲ್ಲಿ ಮೂರೂ ಪಕ್ಷಗಳ ಸಮಬಲದ ಹೋರಾಟ: ಹೇಗಿದೆ ಟಿಕೆಟ್ ಫೈಟ್?
ಜಿಲ್ಲೆಯಲ್ಲಿ ಹೇಗಿದೆ ಜೆಡಿಎಸ್ ಪ್ರಭಾವ :
ರಾಯಚೂರು ಜಿಲ್ಲೆ ಕಾಂಗ್ರೆಸ್ ನ ಭದ್ರಕೋಟೆ ಆಗಿತ್ತು. ಆದ್ರೆ ಕಳೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನ ಜೆಡಿಎಸ್ ಛಿದ್ರಗೊಳಿಸಿ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡು ವಿಧಾನಸಭಾ ಕ್ಷೇತ್ರಗಳಾದ ಮಾನ್ವಿ ಮತ್ತು ಸಿಂಧನೂರು ಕ್ಷೇತ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಜಿಲ್ಲೆಯಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯ ಪ್ರದರ್ಶನ ಮಾಡಿತ್ತು. ಅದೇ ಮಾದರಿಯಲ್ಲಿ 2023ರಲ್ಲಿ ಜೆಡಿಎಸ್ ತನ್ನ ಶಕ್ತಿ ಪ್ರದರ್ಶನಕ್ಕಾಗಿ ಎಲ್ಲಾ ಪಕ್ಷಗಳ ಮುಂಚೆಯೇ 5 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಿ ಘೋಷಣೆ ಮಾಡಿದೆ. ಈಗ ಅಭ್ಯರ್ಥಿಗಳು ಗೆಲುವಿಗಾಗಿ ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಾ ಓಡಾಟ ಶುರು ಮಾಡಿದ್ದಾರೆ.
ಜೆಡಿಎಸ್ ಟಿಕೆಟ್ ಘೋಷಣೆ ಆದ 5 ಕ್ಷೇತ್ರದಲ್ಲಿ ಭಾರೀ ಪೈಪೋಟಿ:
ಸಿಂಧನೂರು ವಿಧಾನಸಭಾ ಕ್ಷೇತ್ರ:
ಸಾಮಾನ್ಯ ಮೀಸಲು ಕ್ಷೇತ್ರವಾದ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ವೆಂಕಟರಾವ್ ನಾಡಗೌಡ ಮತ್ತೊಮ್ಮೆ ಶಾಸಕರಾಗಲು ಪ್ರಚಾರ ಶುರು ಮಾಡಿದ್ದಾರೆ. ಹೀಗಾಗಿ ಸಿಂಧನೂರು ಕ್ಷೇತ್ರದ ವಿವಿಧೆಡೆ ಹತ್ತಾರು ಕಾರ್ಯಕ್ರಮಗಳು ಮಾಡುತ್ತಾ, ಮತ್ತೊಮ್ಮೆ ಗೆಲ್ಲಿಸಿ ಅಂತ ತಿರುಗಾಟ ನಡೆಸಿದ್ದಾರೆ. ಆದ್ರೆ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯ ಹೊಂದಿಲ್ಲ ಎನ್ನಬಹುದು. ಏಕೆಂದರೆ ಹಾಲಿ ಶಾಸಕ ವೆಂಕಟರಾವ್ ನಾಡಗೌಡಗೆ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿದ್ದು, ಹೊಸ ಮುಖದ ಅಭ್ಯರ್ಥಿಗಾಗಿ ಸಿಂಧನೂರು ಕ್ಷೇತ್ರದ ಜನರು ಎದುರು ನೋಡುತ್ತಿದ್ದಾರೆ. ಆದ್ರೂ ಹಾಲಿ ಶಾಸಕ ವೆಂಕಟರಾವ್ ನಾಡಗೌಡ ಕ್ಷೇತ್ರದಲ್ಲಿ ಸುತ್ತಾಟ ಮಾಡಿ ಜೆಡಿಎಸ್ ಪಕ್ಷ ಸಿಂಧನೂರಿನಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರಲು ಕಸರತ್ತು ಶುರು ಮಾಡಿದ್ದಾರೆ.
ಮಾನ್ವಿ ವಿಧಾನಸಭಾ ಕ್ಷೇತ್ರ:
ಮಾನ್ವಿ ಎಸ್ ಟಿ ಮೀಸಲು ಕ್ಷೇತ್ರ. ಮಾನ್ವಿಯಲ್ಲಿ ಜೆಡಿಎಸ್ ನ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅಧಿಕಾರದಲ್ಲಿ ಇದ್ದಾರೆ. ಎರಡನೇ ಬಾರಿಯೂ ಶಾಸಕರಾಗುತ್ತೇನೆ ಎಂಬ ವಿಶ್ವಾಸದೊಂದಿಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಮಾಡುತ್ತಾ ಮತದಾರ ಮನಸೆಳೆಯಲು ಮುಂದಾಗಿದ್ದಾರೆ. ಆದ್ರೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ ಯಾರು ಎಂಬುದು ಇನ್ನೂ ಮಾನ್ವಿ ಕ್ಷೇತ್ರದ ಜನತೆಯಲ್ಲಿ ಗೊಂದಲವಿದೆ. ಹೀಗಾಗಿ ಮತ್ತೊಮ್ಮೆ ಜನರ ಆರ್ಶಿವಾದ ಸಿಗಬಹುದು ಎಂಬ ಮಹಾದಾಸೆಯಿಂದ ಶಾಸಕ ರಾಜಾ ವೆಂಕಟಪ್ಪ ನಾಯಕ ಕ್ಷೇತ್ರದಲ್ಲಿ ಜೆಡಿಎಸ್ ಪರ ಪ್ರಚಾರ ಶುರು ಮಾಡಿದ್ದಾರೆ.