ಧಾರವಾಡ ಜಿಲ್ಲೆಯ ರೈತರ ಪಾಲಿಗೆ ಕಹಿಯಾದ ಕಬ್ಬು!

By Suvarna News  |  First Published Oct 6, 2022, 7:41 PM IST

ಕಬ್ಬಿಗೆ ಬೆಲೆ ನಿಗದಿ ವಿಚಾರದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತೊಮ್ಮೆ ರೈತರಿಗೆ ಅನ್ಯಾಯ ಎಸಗಿದ ಆರೋಪ ಕೇಳಿ ಬಂದಿದೆ. ಸಕ್ಕರೆ ಕಾರ್ಖಾನೆಯಿಂದ ಬೆಲೆ‌ ನಿಗದಿ ವಿಚಾರದಲ್ಲಿ ತಾರತಮ್ಯ. 


ಹುಬ್ಬಳ್ಳಿ (ಸೆ. 6): ಕಬ್ಬಿಗೆ ಬೆಲೆ ನಿಗದಿ ವಿಚಾರದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತೊಮ್ಮೆ ರೈತರಿಗೆ ಅನ್ಯಾಯ ಎಸಗಿದ ಆರೋಪ ಕೇಳಿ ಬಂದಿದೆ.  ಇದರಿಂದ ಧಾರವಾಡ ಜಿಲ್ಲೆಯಲ್ಲಿ 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆದ  ಅನ್ನದಾತರಿಗೆ ಅನ್ಯಾಯವಾಗಲಿದ್ದು, ಇದನ್ನು ಸರಿಪಡಿಸಿ ಅಂತ ರೈತರು ಆಗ್ರಹಿಸಿದ್ದಾರೆ. ಕಬ್ಬು ನೆಚ್ಚಿಕೊಂಡ ಹೊರಟಿದ್ದ ರೈತನ ಬದುಕು ಮತ್ತೊಮ್ಮೆ ಸಂಕಷ್ಟಕ್ಕೆ‌  ಸಿಲುಕಿದೆ ಅದೂ ಸಕ್ಕರೆ ಸಚಿವರ ತವರು ಜಿಲ್ಲೆಯಲ್ಲಿಯೇ ರೈತರಿಗೆ ಈ ಅನ್ಯಾಯವಾಗುತ್ತಿದ್ದು, ಇದರ ವಿರುದ್ಧ ರೈತರು ದೊಡ್ಡದಾಗಿ ಧ್ವನಿ ಎತ್ತಿದ್ದಾರೆ. ಕಬ್ಬು ಬೆಳೆದ ರೈತನಿಗೆ ಸಕ್ಕರೆ ಕಾರ್ಖಾನೆಯಿಂದ‌ ಭಾರಿ ಅನ್ಯಾಯವಾಗಿದೆ. ಪ್ರತಿ ಟನ್ ಕಬ್ಬಿಗೆ ಕಳೆದ ಬಾರಿಗಿಂತ 220 ರೂಪಾಯಿ ಕಡಿಮೆ ಬೆಲೆ ನಿಗದಿ ಮಾಡಿದ್ದು, ಅತಿವೃಷ್ಟಿಯಿಂದ ನಲುಗಿದ್ದ ಅನ್ನದಾತನ ಬದುಕಿಗೆ ಗಾಯದ ಮೇಲೆ‌ ಬರೆ ಎಳೆದಂತಾಗಿದೆ. ಮಳೆ ಹೊಡೆತಕ್ಕೆ ಕಷ್ಟ ಪಟ್ಟು ಬೆಳೆದ ಅದೆಷ್ಟೋ ಕಬ್ಬು ಕೊಳೆತು ಹೋಗಿದೆ. ಅಳಿದುಳಿದ ಬೆಳೆಯನ್ನ ಸಂರಕ್ಷಿಸಿ ಸಕ್ಕರೆ ಕಾರ್ಖಾನೆಗೆ ಸಾಗಿಸಿದ ರೈತರಿಗೆ ದರ ನಿಗದಿಯಲ್ಲಿ ಅನ್ಯಾಯವಾಗುತ್ತಿದೆ.  

ಧಾರವಾಡ ಜಿಲ್ಲೆಯಲ್ಲಿ ಕಲಘಟಗಿ ಹಾಗೂ ಅಳ್ನಾವರ ತಾಲೂಕಗಳಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯಲಾಗಿದ್ದು  8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆದು ಕಟಾವಿಗೆ ಬಂದಿದೆ. ಕಳೆದ ವರ್ಷ ಪ್ರತಿ ಟನ್‌ಗೆ 2,592 ಬೆಲೆ ನಿಗದಿ ಮಾಡಿದ್ದ ಸಕ್ಕರೆ ಕಾರ್ಖಾನೆ, ಆದ್ರೆ ಈ ವರ್ಷ 2,372 ಬೆಲೆ‌ ನಿಗದಿ ಮಾಡಿದೆ. ಪ್ರತಿ ಟನ್‌ಗೆ 220 ರೂಪಾಯಿ ಬೆಲೆ ಕಡಿಮೆ ಮಾಡಿದ ಸಕ್ಕರೆ ಕಾರ್ಖಾನೆ ನಡೆಯನ್ನು ರೈತರು ವಿರೋಧಿಸಿದ್ದಾರೆ.

Tap to resize

Latest Videos

Mysuru: ಸೆ.16 ರಿಂದ ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಾರಾರಂಭ: ಶಾಸಕ ಸಾ.ರಾ.ಮಹೇಶ್‌

ಧಾರವಾಡ ಜಿಲ್ಲೆಯ ರೈತರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಇಆಯ್ ಡಿ ಪ್ಯಾರಿ ಇಂಡಿಯಾ ಲಿಮಿಟೆಡ್  ಸಕ್ಕರೆ ಕಾರ್ಖಾನೆಗೆ ಕಬ್ಬು ನುರಿಸಲು ಕಳಿಸ್ತಾ ಇದ್ದರು. ಆದ್ರೆ ಬೆಲೆ ನಿಗದಿಯಲ್ಲಿ ರೈತರಿಗೆ ಅನ್ಯಾಯ ನಡೆದಿದೆ ಎಂವ ಆರೋಪ ಮಾಡುತ್ತಿದ್ದಾರೆ.

ಬೆಂಗಳೂರು: ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಸೆ.26ರಂದು ಬೃಹತ್ ರ‍್ಯಾಲಿ

ಇನ್ನೂ 2022-23 ಸಾಲಿನಲ್ಲಿಯೇ ರಸಗೊಬ್ಬರಗಳ ಬೆಲೆ ಹೆಚ್ಚಿಗೆ ಮಾಡಿದ ಸರ್ಕಾರ, ಅದೇ ರೈತ ಬೆಳೆದ ಬೆಳೆಗಳಿಗೆ ಮಾತ್ರ ಬೆಲೆ ಇಲ್ಲದಾಗಿದೆ. ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಸಹ ಧಾರವಾಡ ಜಿಲ್ಲೆಯವರಾಗಿದ್ದು, ಇಲ್ಲಿನ ಕಬ್ಬ ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯವನ್ನು ಸರಿ ಪಡಿಸಲಿ ಅನ್ನೊದು ಜಿಲ್ಲೆಯ ರೈತರ ಒತ್ತಾಯ.‌

click me!