ಪುಟ್ಟ ಮಗುವನ್ನು ಕೈಯಲ್ಲಿ ಹಿಡಿದು ಕೆಂಡ ಹಾಯ್ದ ಅರ್ಚಕ : ವೈರಲ್

By Kannadaprabha News  |  First Published Oct 28, 2020, 12:06 PM IST

ಬೆಂಕಿಯನ್ನು ಉಗುಳುವ ಕೆಂಡದ ಮೇಲೆ ಪುಟ್ಟ ಮಗುವನ್ನು ಎತ್ತಿಕೊಂಡು ಪೂಜಾರಿ ಅಪಾಯಕಾರಿ ರೀತಿಯಲ್ಲಿ ಹೆಜ್ಜೆ ಹಾಕಿದ ಘಟನೆ ನಡೆದಿದೆ.


ರಟ್ಟೀಹಳ್ಳಿ (ಅ.28): ದಂಪತಿಯ ಮನವಿ ಮೇರೆಗೆ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ದೇವಸ್ಥಾನದ ಅರ್ಚಕರೊಬ್ಬರು ಕೆಂಡ ಹಾಯ್ದ ಘಟನೆ ವಿಜಯದಶಮಿಯಂದು ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಬುಳ್ಳಾಪುರದ ದುರ್ಗಾದೇವಿ ಜಾತ್ರಾ ಮಹೋತ್ಸವದಲ್ಲಿ ನಡೆದಿದೆ.

ಮಗುವಾದರೆ ಕೆಂಡ ಹಾಯಿಸುವುದಾಗಿ ದಾವಣಗೆರೆ ಮೂಲದ ದಂಪತಿ ದುರ್ಗಾದೇವಿ ದೇವಸ್ಥಾನದಲ್ಲಿ ಹರಕೆ ಹೊತ್ತಿದ್ದರು. ಅವರಿಗೆ ಮಗುವಾದ ಹಿನ್ನೆಲೆಯಲ್ಲಿ ವಿಜಯದಶಮಿಯಂದು ನಡೆದ ದುರ್ಗಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಅರ್ಚಕರ ಕೈಗೆ ಮಗುವನ್ನು ಕೊಟ್ಟು ಕೆಂಡ ಹಾಯುವ ಹರಕೆ ಪೂರೈಸಿದ್ದಾರೆ.

Tap to resize

Latest Videos

ಸರ್ಪ ಹೆಡೆಬಿಚ್ಚೀತು : ಎಚ್ಚರಿಕೆ ನೀಡಿದೆ ಮೈಲಾರ ದೇವರ ಕಾರ್ಣಿಕ ಭವಿಷ್ಯ ...

ಪ್ರತಿ ವರ್ಷ ವಿಜಯದಶಮಿಯಂದು ದೇವಸ್ಥಾನದಲ್ಲಿ ಕೆಂಡ ಹಾಯುವ ಪದ್ಧತಿ ನಡೆದುಕೊಂಡು ಬಂದಿದೆ. ಅದರಂತೆ ಈ ಸಲವೂ ಆಚರಣೆ ನಡೆದಿದೆ. ದಂಪತಿ ಕೋರಿಕೆ ಮೇರೆಗೆ ಅವರ ಮಗುವನ್ನು ಅರ್ಚಕ ಬಸನಗೌಡ ಅವರು ಕೈಯಲ್ಲಿ ಹಿಡಿದುಕೊಂಡು ಕೆಂಡ ಹಾಯ್ದಿದ್ದಾರೆ. ಅಪಾಯಕಾರಿ ರೀತಿಯಲ್ಲಿ ಒಂದೇ ಕೈಯಲ್ಲಿ ಮಗುವನ್ನು ಎತ್ತಿ ಹಿಡಿದು ಕೆಂಡ ದಾಟುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

click me!