'ಕೊರೋನಾದಿಂದ ತತ್ತರಿಸಿದ ರೈತನಿಗೆ ಸರ್ಕಾರ ಆಸರೆಯಾಗಬೇಕಿದೆ'

By Kannadaprabha News  |  First Published May 13, 2020, 8:27 AM IST

ಗೋವಿನ ಜೋಳ ಮಾರಾಟ ಮಾಡಲು ಹೋದರೆ ಬೆಲೆ ಕುಸಿತ| ರೈತರು ಗೋವಿನ ಜೋಳ ರಾಶಿ ಮಾಡಿ ಅನುಕೂಲವಿದ್ದರೆ ತಮ್ಮ ಗೋದಾಮಿನಲ್ಲಿ ಸಂಗ್ರಹ ಮಾಡುತ್ತಾರೆ| ಯಾವುದೇ ರೀತಿ ಅನುಕೂಲವಿಲ್ಲದ ರೈತರು ಸರ್ಕಾರ ಮತ್ತು ಖಾಸಗಿ ಗೋದಾಮುಗಳಲ್ಲಿ ಪ್ರತಿ ಕ್ವಿಂಟಲ್‌ಗೆ ಪ್ರತಿ ತಿಂಗಳ 6 ಬಾಡಿಗೆ ಕೊಟ್ಟು ಸಂಗ್ರಹ ಮಾಡಿದ್ದಾರೆ|


ನರಗುಂದ(ಮೇ.13): ಕೊರೋನಾ ಸಂಕಷ್ಟದಿಂದ ತತ್ತರಿಸಿದ ರೈತರಿಗೆ ಸರ್ಕಾರ ಆಸರೆಯಾಗಬೇಕು ಎಂದು ಕಳಸಾ ಬಂಡೂರಿ ಕೇಂದ್ರ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದ್ದಾರೆ.

ತಾಲೂಕಿನ ರೈತರು 2019-20 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಲಪ್ರಭೆ ಕಾಲುವೆಗೆ ಹೊಂದಿಕೊಂಡಿರುವ ನೀರಾವರಿ ಜಮೀನುಗಳಲ್ಲಿ ವಾಣಿಜ್ಯ ಬೆಳೆಯಾದ ಗೋವಿನ ಜೋಳ ಬಿತ್ತನೆ ಮಾಡಿ ಉತ್ತಮ ಬೆಳೆ ತೆಗೆದಿದ್ದಾರೆ. ಆದರೆ ಗೋವಿನ ಜೋಳ ಮಾರಾಟ ಮಾಡಲು ಹೋದರೆ ಬೆಲೆ ಕುಸಿದ ಪರಿಣಾಮ ರೈತರು ಗೋವಿನ ಜೋಳ ರಾಶಿ ಮಾಡಿ ಅನುಕೂಲವಿದ್ದರೆ ತಮ್ಮ ಗೋದಾಮಿನಲ್ಲಿ ಸಂಗ್ರಹ ಮಾಡುತ್ತಾರೆ. ಯಾವುದೇ ರೀತಿ ಅನುಕೂಲವಿಲ್ಲದ ರೈತರು ಸರ್ಕಾರ ಮತ್ತು ಖಾಸಗಿ ಗೋದಾಮುಗಳಲ್ಲಿ ಪ್ರತಿ ಕ್ವಿಂಟಲ್‌ಗೆ ಪ್ರತಿ ತಿಂಗಳ 6 ಬಾಡಿಗೆ ಕೊಟ್ಟು ಸಂಗ್ರಹ ಮಾಡಿದ್ದಾರೆ.

Tap to resize

Latest Videos

ಲಾಕ್‌ಡೌನ್‌ ಎಫೆಕ್ಟ್‌: ರೈತರ ನೆರವಿಗೆ ಧಾವಿಸಿದ ರೈತರು!

ಆದ್ದರಿಂದ ಈ ತಾಲೂಕಿನಲ್ಲಿ ಬೆಳೆದ ಗೋವಿನ ಜೋಳ ಖರೀದಿ ಮಾಡಲು ಈ ಹಿಂದೆ ರೈತರು ಬೆಂಬಲ ಬೆಲೆ ಯೋಜನೆಯಲ್ಲಿ ರೈತರ ಗೋವಿನ ಜೋಳ ಖರೀದಿ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹ ಮಾಡಿದರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ. ಈಗ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ರೈತರ ಗೋವಿನ ಜೋಳವನ್ನು ಪ್ರತಿ ಕ್ವಿಂಟಲ್‌ಗೆ .1760ಗಳಲ್ಲಿ ಖರೀದಿ ಮಾಡಲಾಗುವದೆಂದು ಹೇಳಿದ್ದು ಸ್ವಾಗತಾರ್ಹ. ಆದರೆ ತಾಲೂಕಿನಲ್ಲಿ 30 ಸಾವಿರ ಮೆಟ್ರಿಕ್‌ ಟನ್‌ಗಿಂತ ಹೆಚ್ಚು ಗೋವಿನ ಜೋಳ ಮಾರಾಟ ಮಾಡಲು ರೈತರು ಚಾತಕ ಪಕ್ಷೆಯೆಂತ ಕಾಯಿತ್ತಿದ್ದಾರೆ. ಕೆಎಂಎಫ್‌ನವರು ಗೋವಿನ ಜೋಳವನ್ನು 7 ಜಿಲ್ಲೆ ಸೇರಿ ಕೇವಲ 7 ಸಾವಿರ ಮೆಟ್ರಕ ಟಿನ ಮಾತ್ರ ಖರೀದಿ ಮಾಡಲಾಗುವದೆಂದು ತಿಳಿಸಿದ್ದಾರೆ. ಹೀಗಾಗಿ ರೈತರು ಬೆಳೆದ ಗೋವಿನ ಜೋಳ ಕೆಎಂಎಫ್‌ ಗೆ ಮಾರಾಟ ಮಾಡಲು ಸಾಧ್ಯವಾಗುವದಿಲ್ಲ. ಸರ್ಕಾರ ಬೇಗ ಗೋವಿನ ಜೋಳ ಬೆಳೆದ ತಾಲೂಕುಗಳನ್ನು ಗುರುತಿಸಿ ರೈತರ ಗೋವಿನ ಜೋಳ ಖರೀದಿಗೆ ಮುಂದಾಗಬೇಕೆಂದು ಆಗ್ರಹಿಸಿದರು.

click me!