ಉತ್ತರಕನ್ನಡ: ಮತ್ತೆ ಮುನ್ನೆಲೆಗೆ ಬಂದ ಪ್ರತ್ಯೇಕ ಶಿರಸಿ ಜಿಲ್ಲಾ ಹೋರಾಟ!

By Girish GoudarFirst Published Oct 16, 2024, 9:14 PM IST
Highlights

ಡಾ. ವಿ.ಎಸ್.ಸೋಂದೆ ಅವರ ಪತ್ರಗಳ‌ ಮೂಲಕ ಆರಂಭವಾಗಿದ್ದ ಚಳುವಳಿ, ಬಳಿಕ ನ್ಯಾಯವಾದಿ ಎನ್.ಎಸ್.ಹೆಗಡೆ ಮಾಳೆನಳ್ಳಿ ಮುಂದುವರಿಸಿದ್ರು.‌ ಕಳೆದ 10-15 ವರ್ಷಗಳಿಂದ ಶಿರಸಿ ಜಿಲ್ಲೆ ಹೋರಾಟ ಸಮಿತಿ ಮೂಲಕ ಜೆಡಿಎಸ್‌ನ ಉಪೇಂದ್ರ ಪೈ ಹಾಗೂ ಸಂಗಡಿಗರು ಹೋರಾಟ  ನಡೆಸುತ್ತಿದ್ದರು. ಇದೀಗ ಮತ್ತೆ ಘಟ್ಟದ ಮೇಲಿನ ಎಲ್ಲಾ ತಾಲೂಕಿನ ಜನರ ಹಾಗೂ ಜನಪ್ರತಿನಿಧಿಗಳ ವಿಶ್ವಾಸ ಪಡೆದು ಹೋರಾಟಕ್ಕೆ ಸಿದ್ಧತೆಗಳಾಗುತ್ತಿದೆ. 
 
ಕಾರವಾರ(ಅ.16): ಉತ್ತರಕನ್ನಡ ಜಿಲ್ಲೆ ಇಬ್ಭಾಗ ಮಾಡುವ ಪ್ರತ್ಯೇಕ ಶಿರಸಿ ಜಿಲ್ಲೆ ನಿರ್ಮಾಣದ ಕೂಗು ಮತ್ತೆ ಪ್ರಾರಂಭವಾಗಿದೆ. ಕಳೆದ 30 ವರ್ಷಗಳಿಂದ ಶಿರಸಿ ಪ್ರತ್ಯೇಕ ಜಿಲ್ಲೆಯಾಗಬೇಕೆಂಬ ಕೂಗು ಕೇಳಿ ಬರ್ತಿದ್ದು, ಇದೀಗ ಮತ್ತೆ ಹೋರಾಟ ನಡೆಯುವ ಸಿದ್ಧತೆಗಳಾಗುತ್ತಿದೆ. 

ಡಾ. ವಿ.ಎಸ್.ಸೋಂದೆ ಅವರ ಪತ್ರಗಳ‌ ಮೂಲಕ ಆರಂಭವಾಗಿದ್ದ ಚಳುವಳಿ, ಬಳಿಕ ನ್ಯಾಯವಾದಿ ಎನ್.ಎಸ್.ಹೆಗಡೆ ಮಾಳೆನಳ್ಳಿ ಮುಂದುವರಿಸಿದ್ರು.‌ ಕಳೆದ 10-15 ವರ್ಷಗಳಿಂದ ಶಿರಸಿ ಜಿಲ್ಲೆ ಹೋರಾಟ ಸಮಿತಿ ಮೂಲಕ ಜೆಡಿಎಸ್‌ನ ಉಪೇಂದ್ರ ಪೈ ಹಾಗೂ ಸಂಗಡಿಗರು ಹೋರಾಟ  ನಡೆಸುತ್ತಿದ್ದರು. ಇದೀಗ ಮತ್ತೆ ಘಟ್ಟದ ಮೇಲಿನ ಎಲ್ಲಾ ತಾಲೂಕಿನ ಜನರ ಹಾಗೂ ಜನಪ್ರತಿನಿಧಿಗಳ ವಿಶ್ವಾಸ ಪಡೆದು ಹೋರಾಟಕ್ಕೆ ಸಿದ್ಧತೆಗಳಾಗುತ್ತಿದೆ.

Latest Videos

ಸಿದ್ದರಾಮಯ್ಯ ಸರ್ಕಾರ ರಾಷ್ಟ್ರದ್ರೋಹಿಗಳನ್ನು ರಕ್ಷಿಸುತ್ತಿದೆ: ಸಂಸದ ಕಾಗೇರಿ ಕಿಡಿ 

ಜಿಲ್ಲೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣದ ಜತೆ ಶಿರಸಿ ಪ್ರತ್ಯೇಕ ಜಿಲ್ಲೆಯಾಗಬೇಕೆಂಬ ಹೋರಾಟ ನಡೆಯಲಿದ್ದು, ರಾಜಕೀಯ ಮುಖಂಡ, ಹೋರಾಟಗಾರ ಅನಂತಮೂರ್ತಿ ಹೆಗಡೆ ಇದರ ನೇತೃತ್ವ ವಹಿಸಲಿದ್ದಾರೆ.
ಈಗಾಗಲೇ ಶಾಸಕ ಭೀಮಣ್ಣ ನಾಯ್ಕ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಉಪೇಂದ್ರ ಪೈ ಸೇರಿದಂತೆ ಇನ್ನಿತರರನ್ನು ಸಂಪರ್ಕಿಸಿರುವ ಅನಂತಮೂರ್ತಿ ಹೆಗಡೆ, ಪ್ರತ್ಯೇಕ ಶಿರಸಿ ಜಿಲ್ಲೆಗಾಗಿ ಪಕ್ಷಾತೀತ ಹೋರಾಟ ಮಾಡುವ ನಿರ್ಧಾರವನ್ನು ಘೋಷಿಸಿದ್ದಾರೆ. 

ಶಿರಸಿ ಜಿಲ್ಲೆಯಾದರೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ನಿರ್ಮಾಣವಾಗುತ್ತೆ. ಪ್ರತ್ಯೇಕ ಜಿಲ್ಲೆಯ ಹೋರಾಟ ಕಿಚ್ಚು ಹೆಚ್ಚಿಸಲು ಸಾರ್ವಜನಿಕರು ಬೆಂಬಲ ನೀಡಬೇಕು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯಾಗ್ತಿದ್ದು, ಶಿರಸಿಯೂ ಜಿಲ್ಲೆ ಆಗಬೇಕು. ಜಿಲ್ಲೆಗೊಂದು ಮೆಡಿಕಲ್ ಕಾಲೇಜು ನಿಯಮದಿಂದ ಶಿರಸಿಗೂ ಮೆಡಿಕಲ್ ಕಾಲೇಜು ಸರಳವಾಗಿ ಬರುತ್ತೆ, ಮೆಡಿಕಲ್ ‌ಕಾಲೇಜು ಜತೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯೂ ಸುಲಭವಾಗಿ ಬರಲಿದೆ.

ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಶಿರಸಿ ಜಿಲ್ಲೆ ಹೋರಾಟ ಸಮಿತಿಯ ಸದಸ್ಯರೂ ಆಗಿರುವ ಅನಂತಮೂರ್ತಿ ಹೆಗಡೆ ಅಭಿಪ್ರಾಯ ಪಟ್ಟಿದ್ದಾರೆ. ಹೋರಾಟದ ನೇತೃತ್ವದ ವಹಿಸಿರುವ ಅನಂತ ಮೂರ್ತಿ ಹೆಗಡೆಗೆ ಜಿಲ್ಲೆಯ ವಿವಿಧ ಮುಖಂಡರು ಬೆಂಬಲ ಕೂಡ ಘೋಷಿಸಿದ್ದಾರೆ.

click me!