ನರಳಿ ನಾಲ್ಕು ತಿಂಗಳ ಗರ್ಭಿಣಿ ಕಾಡಾನೆ ಸಾವು

By Suvarna News  |  First Published Aug 18, 2020, 7:33 AM IST

ನಾಲ್ಕು ತಿಂಗಳ ಗರ್ಭಿಣಿ ಹೆಣ್ಣಾನೆಯೊಂದು ನರಳಿ ಪ್ರಾಣ ಬಿಟ್ಟ ಘಟನೆ ಮಡಿಕೇರಿಯಲ್ಲಿ ನಡೆದಿದೆ. 


ಮಡಿಕೇರಿ (ಆ.18): ನಾಲ್ಕು ತಿಂಗಳ ಗರ್ಭಿಣಿ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಮಡಿಕೇರಿ ತಾಲೂಕಿನ ಬೈರಂಬಾಡದಲ್ಲಿ ಸೋಮವಾರ ಬೆಳಕಿಗೆ ಬಂದಿದೆ.

ಬೈರಂಬಾಡ ಗ್ರಾಮದ ಮುಕ್ಕಾಟಿರ ರಂಜನ್‌ ಎಂಬವರ ಕಾಫಿ ತೋಟದಲ್ಲಿ ಕಳೆದ ಎರಡು ದಿನಗಳಿಂದ ಹೆಣ್ಣಾನೆಯೊಂದು ನೋವಿನಲ್ಲಿ ನರಳಾಡುತ್ತಿತ್ತು. ಆನೆಗೆ ಚಿಕಿತ್ಸೆ ನೀಡುವ ಸಲುವಾಗಿ ಅರಣ್ಯಾಧಿಕಾರಿಗಳು ತೆರಳಿದ್ದ ಸಂದರ್ಭ ಕಾಡಾನೆ ಸ್ಪಂದಿಸಲಿಲ್ಲ.

Tap to resize

Latest Videos

 ನೋವು ತಾಳಲಾರದೆ ತೋಟದ ಹಳ್ಳಕ್ಕೆ ಬಿದ್ದು ಮೃತಪಟ್ಟಿದೆ ಎಂದು ಅರಣ್ಯ ಅಧಿಕಾರಿ ರೋಶಿನಿ ತಿಳಿಸಿದ್ದಾರೆ. ಆನೆಯ ಮರಣೋತ್ತರ ಪರೀಕ್ಷೆಯನ್ನು ಪಶು ವೈದ್ಯ ಮುಜೀಬ್‌ ನೆರವೇರಿಸಿದರು. ಆನೆಯ ಅಂತ್ಯಸಂಸ್ಕಾರವನ್ನು ತೋಟದಲ್ಲೇ ನೆರವೇರಿಸಲಾಗಿದೆ. ಈ ಸಂದರ್ಭ ಉಪ ವಲಯ ಅರಣ್ಯಾಧಿಕಾರಿ ಮನೋಜ್…, ಸಚಿನ್, ಸಂಜಿತ್‌ ಸೇರಿದಂತೆ ಅರಣ್ಯ ಇಲಾಖೆಯ ರಾರ‍ಯಪಿಡ್‌ ರೆಸ್ಪಾನ್‌ ಟೀಂ ಪಾಲ್ಗೊಂಡಿತ್ತು.

click me!