ಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿಸಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ

By Kannadaprabha News  |  First Published Jul 29, 2022, 9:03 AM IST

ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ವಿರೋಧಿಸಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ

ಹಿಂದು ಕಾರ್ಯಕರ್ತರ ಸಮಾಧಿ ಮೇಲೆ ಕೀಳು ರಾಜಕೀಯ ಮಾಡುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ


ವಿರಾಜಪೇಟೆ(  ಜು.29) : ಹಿಂದೂ ಕಾರ್ಯಕರ್ತ ಒಬ್ಬ ಸತ್ತರೇ ಸಾವಿರಾರು ಹಿಂದೂಗಳು ಮರು ಜನ್ಮಪಡೆದುಕೊಳ್ಳುತ್ತಾರೆ. ಹಿಂದೂಗಳ ಸಮಾಧಿಯ ಮೇಲೆ ಕೀಳು ರಾಜಕೀಯ ಮಾಡುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದು ತಮಗೆ ಎಚ್ಚರಿಕೆಯ ಘಂಟೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹಿಂದೂ ಪರ ಸಂಘಟನೆಗಳು ಗುಡುಗಿದೆ.

ವಿಶ್ವ ಹಿಂದೂ ಪರಿಷತ್‌(Vishwa Hindu Parishath) ಮತ್ತು ಬಜರಂಗಳ(Bajarangadala) ತಾಲೂಕು ಪ್ರಖಂಡದ ವತಿಯಿಂದ ಸುಳ್ಯ ಬೆಳ್ಳಾರೆ ಭಾಜಪ()Bellare Bjp ಮುಖಂಡ ಪ್ರವೀಣ್‌ ನೆಟ್ಟಾರು(Praveen Nettaru) ಹತ್ಯೆಯನ್ನು ಖಂಡಿಸಿ ನಗರದ ಗಡಿಯಾರ ಕಂಬದ ಬಳಿ ಹಿಂದೂ ಪರ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವು.

Tap to resize

Latest Videos

ಪ್ರವೀಣ್ ಹತ್ಯೆಗೆ ಭುಗಿಲೆದ್ದ ಆಕ್ರೋಶ: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಅಲ್ಲಲ್ಲಿ ಭಾರೀ ಪ್ರತಿಭಟನೆ

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ವಿರಾಜಪೇಟೆ(Virajapete) ನಗರ ಸಂಯೋಜಕ ದಿನೇಶ್‌ ನಾಯರ್‌(Dinesh Nair) ಅವರು, ಗ್ರಾಮ, ಜಿಲ್ಲೆ ರಾಜ್ಯ ಮತ್ತು ದೇಶವನ್ನು ಆಳುವ ಸರ್ಕಾರಗಳು ಇದ್ದರು ಕಾರ್ಯಕರ್ತರಿಗೆ ಯಾವುದೇ ರಕ್ಷಣೆಯಿಲ್ಲದಾಗಿದೆ. ರಾಜಕೀಯ ದಾಳಕ್ಕೆ ಬಲಿಪಶುಗಳಾಗಿ ಇಂದು ಅಮಾಯಕ ಯುವ ಕಾರ್ಯಕರ್ತರು ಬಲಿಯಾಗುವ ಸನ್ನಿವೇಶ ಬಂದೋಗಿದೆ. ಇದು ನಮ್ಮ ದುರಾದೃಷ್ಟವಾಗಿದೆ. ಇನ್ನೊಂದು ಹಿಂದೂ ಕಾರ್ಯಕರ್ತರ ಹತ್ಯೆಯಾದಲ್ಲಿ ಕಾರ್ಯಕರ್ತರ ರಕ್ಷಣೆಯನ್ನು ಕಾರ್ಯಕರ್ತರೆ ಮಾಡುತ್ತಾರೆ. ಹಿಂದೂ ಮಹಿಳೆಯರೂ ಖಡ್ಗ ಎತ್ತಿಕೊಳ್ಳುತಾರೆ ಎಂದು ತಿಳಿಸಿದ ಅವರು ರಾಜ್ಯದ ಗೃಹಮಂತ್ರಿಗಳು ಹಿಜಾಬ್‌ ವಿವಾದದಿಂದ ಹತ್ಯೆಯಾಗಿದೆ ಎಂದು ಬಿಂಬಿಸುತ್ತಾರೆ.

ಹಿಜಾಬ್‌ ವಿವಾದ ಬೇರೆ ಹತ್ಯೆಯಾಗಿರುವುದು ಬೇರೆ. ಪಿ.ಎಫ್‌.ಐ. ಸಂಘಟನೆಯ ಕಿಡಿಗೇಡಿಗಳಿಂದ ಹತ್ಯೆಯಾಗಿರುವ ಕಾಣದ ಕೈಗಳ ಬಗ್ಗೆ ಹೆಚ್ಚಿನ ತನಿಖೆಗೆ ಒಳಪಡಿಸಬೇಕು. 24 ಗಂಟೆಗೆ ಒಳಗೆ ಹತ್ಯೆಯ ಹಿಂದಿರುವ ವ್ಯಕ್ತಿಗಳನ್ನು ಬಂಧಿಸಬೇಕು ಎಂದು ಸಂಘಟನೆಗೆಳ ಪರವಾಗಿ ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ. ಪ್ರತಿಭಟನೆಯ ಮೊದಲಿಗೆ ಹತ್ಯೆಯಾದ ಪ್ರವೀಣ್‌ ನೆಟ್ಟಾರು ಅವರ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಲಾಯಿತು.

Karnataka News Live Updates: ರಾಯಚೂರು: ಪ್ರವೀಣ್ ನೆಟ್ಟಾರು ಹತ್ಯೆ: ಬಿಜೆಪಿ ಯುವ ಮುಖಂಡರ ರಾಜೀನಾಮೆ

ಪ್ರತಿಭಟನಕಾರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಗೃಹ ಮಂತ್ರಿಗಳ ರಾಜಿನಾಮೆಗೆ ಒತ್ತಾಯಿಸಿದರು. ವಿರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ನಿರಂಜನ್‌ ರಾಜೇ ಅರಸ್‌ ಅವರಿಗೆ ಸಂಘಟನೆಗಳ ಪರವಾಗಿ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯ ವೇಳೆಯಲ್ಲಿ ತಾಲೂಕು ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಸಾಯಿನಾಥ್‌, ಕಾನೂನು ಪ್ರಕೋಷ್ಟಕದ ದರ್ಶನ್‌ ಕುಮಾರ್‌, ವಿರಾಜಪೇಟೆ ನಗರ ಶಕ್ತಿ ಕೇಂದ್ರದ ಪ್ರಮುಖರಾದ ಟಿ.ಪಿ. ಕೃಷ್ಣ, ಕಾರ್ಯದರ್ಶಿಗಳಾದ ಪ್ರದೀಪ್‌ ರೈ ಸೇರಿದಂತೆ ಒಟ್ಟು 10 ಮಂದಿ ಸಮಿತಿಯ ಸದಸ್ಯರು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ನಿರಂತರ ಹತ್ಯೆಯನ್ನು ಖಂಡಿಸಿ ಕಾರ್ಯಕರ್ತರ ರಕ್ಷಣೆಗೆ ವಿಫಲವಾದ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಮತ್ತು ಗೃಹ ಸಚಿವ ತಮ್ಮ ಕರ್ತವ್ಯ ನಿರ್ವಹಿಸಲು ವಿಫಲವಾಗಿರುವ ಹಿನ್ನಲೆಯಲ್ಲಿ ತಮ್ಮ ಸ್ಥಾನಕ್ಕೆ ಸಮೂಹಿಕ ರಾಜಿನಾಮೆ ನೀಡಿದರು.

ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್‌ ತಾಲೂಕು ಅಧ್ಯಕ್ಷ ಬಿ. ಎಂ. ಕುಮಾರ್‌, ಬಜರಂಗದಳ ಜಿಲ್ಲಾ ಸಹ ಸಂಯೋಜಕ್‌ ವಿವೇಕ್‌ ರೈ, ತಾಲೂಕು ಸಂಯೋಜಕ್‌ ಐನಂಡ ಕುಶಾಲಪ್ಪ, ನಗರ ಸಂಚಾಲಕ ಕಿಸನ್‌, ಪುರಸಭೆಯ ಸದಸ್ಯರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಪ್ರತಿಭಟನೆಗೆ ಆರಕ್ಷಕ ಇಲಾಖೆಯು ಬಿಗಿ ಬಂದೋಬಸ್ತು ಕಲ್ಪಿಸಿತ್ತು.

click me!