ಪವರ್ ಸ್ಟಾರ್ ಹೆಗಲಿಗೆ ಹೊಸ ಹೊಣೆ, ಬಿಎಂಟಿಸಿಗೆ ಪುನೀತ್ 'ರಾಜ'

By Suvarna News  |  First Published Dec 13, 2019, 7:45 PM IST

ಬೆಂಗಳೂರು ಮಹಾನಗರ ರಸ್ತೆ ಸಾರಿಗೆ ಸಂಸ್ಥೆಗೆ ಪವರ್ ಸ್ಟಾರ್ ರಾಯಭಾರಿ/ ಪುನೀತ್ ರಾಜ್ ಕುಮಾರ್ ಅವರಿಗೆ ಹೊಸ ಗೌರವ/ ಸಮೂಹ ಸಾರಿಗೆ ಬಳಸಲು ಪುನೀತ್  ಮನವಿ


ಬೆಂಗಳೂರು( ಡಿ. 13) ಬೆಂಗಳೂರು ಮಹಾನಗರ ರಸ್ತೆ ಸಾರಿಗೆ ಸಂಸ್ಥೆ ನೂತನ ರಾಯಭಾರಿಯಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೇಮಕವಾಗಿದ್ದಾರೆ.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟನೆ ಕಡಿಮೆ ಮಾಡಿ ಬಿಎಂಟಿಸಿಯಲ್ಲಿ ಹೆಚ್ಚು ಜನರು ಪ್ರಯಾಣಿಸುವಂತೆ ಪ್ರೇರೇಪಿಸಲು ರಾಯಭಾರಿಯಾಗಿ ನಟ ಪವರ್​ ಸ್ಟಾರ್​ ಪುನೀತ್​ ರಾಜ್ ಕುಮಾರ್​ ಅವರನ್ನು ಆಯ್ಕೆ ಮಾಡಲಾಗಿದೆ. 

Tap to resize

Latest Videos

ಇದಕ್ಕೆ ಪುನೀತ್​ ಕೂಡ ಸಮ್ಮತಿ ಸೂಚಿಸಿದ್ದಾರೆ. ಈ ಕುರಿತು ಬಿಎಂಟಿಸಿ ಎಂಡಿ ಶಿಖಾ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಬಿಬಿಎಂಪಿ ಹಾಗೂ ಬೆಂಗಳೂರು ನಗರ ಪೊಲೀಸರ ಜಂಟಿ ಸಹಯೋಗದ ಮಹತ್ವಾಕಾಂಕ್ಷಿ ಯೋಜನೆ ಪ್ರತ್ಯೇಕ ಬಸ್ ಪಥ (ಬಸ್ ಪ್ರಿಯಾರಿಟಿ ಲೇನ್). ಆದರೆ ಈ ಪಥ ಅಷ್ಟು ಜನಪ್ರಿಯವಾಗಿಲ್ಲ. ಈ ಬಗ್ಗೆ ಫೇಸ್ ಬುಕ್ ಹಾಗೂ ವಾಟ್ಸಾಪ್‍ಗಳಲ್ಲಿ ಬಿಎಂಟಿಸಿಯಿಂದ ಜಾಹೀರಾತುಗಳನ್ನು ಮಾಡಿ ಪ್ರಚಾರ ಮಾಡಲಾಗುತ್ತಿದೆ.

ಬಿಎಂಟಿಸಿಯಿಂದ ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ

ಬಿಎಂಟಿಸಿ ಬ್ರಾಂಡ್ ಅಂಬಾಸಿಡರ್ ಆಗಲು ಪುನೀತ್ ಯಾವುದೇ ಸಂಭಾವನೆ ಪಡೆದಿಲ್ಲ.  ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಪುನೀತ್ ಒಪ್ಪಿಗೆ ನೀಡಿದ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ.  

click me!