Gadag| ಅಕಾಲಿಕ ಮಳೆಗೆ ಸೋರುತ್ತಿವೆ ಬಡವರ ಮನೆಗಳು

By Kannadaprabha News  |  First Published Nov 20, 2021, 11:27 AM IST

*  ಬಿಟ್ಟೂಬಿಡದೇ ಸುರಿದ ಮಳೆಯಿಂದ ಮನೆಯಿಂದ ಆಚೆ ಬರದಂತ ಸ್ಥಿತಿ
*  ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿಯಲ್ಲಿ ರೈತ ಸಮುದಾಯ
*  ಗದಗ ಜಿಲ್ಲಾದ್ಯಂತ ನಸುಕಿನಿಂದಲೇ ಮಳೆ ಶುರು
 


ಎಸ್‌.ಜಿ. ತೆಗ್ಗಿನಮನಿ

ನರಗುಂದ(ನ.20):  ಕಳೆದೊಂದು ವಾರದಿಂದ ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ನಿರಂತರವಾಗಿ ಅಕಾಲಿಕ ಮಳೆ(Untimely Rain) ಸುರಿಯುತ್ತಿದ್ದು, ಬಡವರ ಮಣ್ಣಿನ ಮನೆಗಳು(Homes) ಸೋರುತ್ತಿರುವುದರಿಂದ ಬಡವರ ಬದುಕು ಕಷ್ಟಕ್ಕೆ ಸಿಲುಕಿದೆ.

Latest Videos

undefined

ಈಗಾಗಲೇ ಮುಂಗಾರು ಮಳೆ ಜೂನ್‌ ತಿಂಗಳಲ್ಲಿ ಸುರಿದಿದ್ದರಿಂದ ತಾಲೂಕಿನಲ್ಲಿ ಹಲವಾರು ಮಣ್ಣಿನ ಮನೆಗಳು ಆ ಮಳೆಗೆ ಬಿದ್ದಿದ್ದು ಜನತೆ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಮಳೆಗಾಲ ಮುಗಿದಿದೆ ಎಂದು ತಿಳಿದು ಜನತೆ ತಮ್ಮ ಕಾರ್ಯದಲ್ಲಿ ತೊಡಗಿದ ಸಂದರ್ಭದಲ್ಲಿ ವಾಯುಭಾರ ಕುಸಿತವಾಗಿ ಕಳೆದೊಂದು ವಾರದಿಂದ ನಿರಂತರ ತುಂತುರ ಮಳೆ ಸುರಿಯುತ್ತಿರುವುದರಿಂದ ಈ ಮಣ್ಣಿನ ಮನೆಗಳು ಸೋರುತ್ತಿದ್ದು, ವಾಸ ಮಾಡವುದು ಕಷ್ಟವಾಗಿದೆ.

ಗಗನಕ್ಕೇರಿದೆ ಬೆಲೆ

ಮಳೆ(Rain)ಹಾನಿಯಿಂದ ತಪ್ಪಿಸಿಕೊಳ್ಳಬೇಕೆಂದು ಮಣ್ಣಿನ ಮನೆಯವರು ಮಾಳಿಗಿಗೆ ಪ್ಲಾಸ್ಟಿಕ್‌ನ ಹೊದಿಕೆ ಹಾಕಿದ್ದಾರೆ. ಇವುಗಳ ಬೆಲೆಯೂ ಗಗನಕ್ಕೇರಿದ್ದು, ಬಡವರು ಉಳ್ಳವರ ಹತ್ತಿರ ಸಾಲ ಮಾಡಿ ಮನೆಗಳನ್ನು ರಕ್ಷಣೆ ಮಾಡಿಕೊಳ್ಳಬೇಕಾದ ಸ್ಥಿತಿ ಬಂದಿದೆ.

Bengaluru Rain| ನಗರದಲ್ಲಿ ಅವಾಂತರ ಸೃಷ್ಟಿಸಿದ ಮಳೆ

ಕೇಸರು ಗದ್ದೆಯಾದ ರಸ್ತೆಗಳು

ಪಟ್ಟಣದ ಹೊಸರು, ಜನತಾ ಪ್ಲಾಟ್‌, ಬಸವೇಶ್ವರ ನಗರ, ಸೇರಿದಂತೆ ಪಟ್ಟಣದ ಕೆಲವು ಬಡಾವಣೆಗಳ ರಸ್ತೆಗಳಿಗೆ ಕಾಂಕ್ರೀಟ್‌ ಇಲ್ಲದಿರುವುದರಿಂದ ಈ ರಸ್ತೆಗಳು ಈ ಜಡಿ ಮಳೆಗೆ ಕೆಸರಿನ ಗದ್ದೆಯಾಗಿ ಮಾರ್ಪಟ್ಟಿವೆ. ಜನತೆ ಈ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಇನ್ನು ಗ್ರಾಮೀಣ ಭಾಗದಲ್ಲಿ(Rural Area) ಕೆಲ ಪ್ರದೇಶಗಳಲ್ಲಿ ಯೋಗ್ಯ ರಸ್ತೆಗಳು ಇಲ್ಲದಿರುವುದರಿಂದ ಜನತೆ ಈ ರಸ್ತೆಯಲ್ಲಿ ಪರದಾಡುವ ಸ್ಥಿತಿ ಇದೆ.

ಬೆಳೆಹಾನಿ ಪರಿಹಾರ ಸಿಗುವುದೇ

ತಾಲೂಕಿನ ರೈತರು ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಆಗಿದ್ದರಿಂದ ಉತ್ತಮ ಬೆಳೆ ಬೆಳೆದಿದ್ದರು. ಆದರೆ ಜೂನ್‌ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದರಿಂದ ತೇವಾಂಶ ಹೆಚ್ಚಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿತ್ತು. ಆದರೆ, ಕೃಷಿ ಇಲಾಖೆ(Department of Agriculture) ಹಾಗೂ ಕಂದಾಯ ಇಲಾಖೆ(Department of Revenue) ಅಧಿಕಾರಿಗಳು ರೈತರ(Farmers) ಜಮೀನಿಗೆ(Land) ಹೋಗಿ ಸರಿಯಾಗಿ ಸಮೀಕ್ಷೆ(Survey) ಮಾಡದ್ದರಿಂದ ಮುಂಗಾರು ಬೆಳೆ ಹಾನಿ(Corp Loss) ಈ ತಾಲೂಕಿನ ರೈತರಿಗೆ ಸಿಗಲಿಲ್ಲ. ಈಗಲಾದರು ತಾಲೂಕು ಆಡಳಿತ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಯಾಗಿ ಸಮೀಕ್ಷೆ ಮಾಡಿ ಪರಿಹಾರ(compensation) ಕೊಡಸಲು ಪ್ರಯತ್ನ ಮಾಡಬೇಕಿದೆ.

ಮಳೆ ನಿಂತ ಮೇಲೆ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸೇರಿಕೊಂಡು ಜಮೀನುಗಳು ಮತ್ತು ಬಿದ್ದ ಮನೆಗಳ ಸರ್ವೇ ಮಾಡಿಸಲಾಗುವುದು ಎಂದು ನರಗುಂದ ತಹಸೀಲ್ದಾರ್‌ ಎ.ಡಿ. ಅಮರವಾದಗಿ ತಿಳಿಸಿದ್ದಾರೆ. 
ಮಳೆಯಿಂದ ಹಾನಿಯಾದರೂ ಅಧಿಕಾರಿಗಳ ತಪ್ಪಿನಿಂದ ರೈತರಿಗೆ ಪರಿಹಾರ ಸಿಗುತ್ತಿಲ್ಲ. ಆದ್ದರಿಂದ ತಾಲೂಕು ಆಡಳಿತದ ಅಧಿಕಾರಿಗಳು ಹಾನಿಯ ಕುರಿತು ಸರ್ಕಾರಕ್ಕೆ ಸರಿಯಾಗಿ ವರದಿ ಸಲ್ಲಿಸಿ ಪರಿಹಾರ ಕೊಡಿಸಲು ಮುಂದಾಗದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ರೈತ ಸೇನೆ ರಾಜ್ಯಾಧ್ಯಕ್ಷ ಶಂಕ್ರಣ್ಣ ಅಂಬಲಿ ಹೇಳಿದ್ದಾರೆ.

Karnataka Rain| ಬೆಳೆ ಹಾನಿ ಸಮೀಕ್ಷೆ ಮುಗಿದ ಕೂಡಲೇ ಪರಿಹಾರ: ಬಿಸಿಪಾ

ಗದಗ ಜಿಲ್ಲಾದ್ಯಂತ ನಸುಕಿನಿಂದಲೇ ಮಳೆ ಶುರು

ಗದಗ ಬೆಟಗೇರಿ(Gadag-Betageri) ಅವಳಿ ನಗರವೂ ಸೇರಿದಂತೆ ಜಿಲ್ಲಾದ್ಯಂತ ಶುಕ್ರವಾರ ನಸುಕಿನಿಂದಲೇ ಮಳೆ ಆರಂಭವಾಗಿದ್ದು, ಬಿಟ್ಟೂಬಿಡದೆ ಸುರಿದ ಮಳೆಯಿಂದಾಗಿ ಸಾರ್ವಜನಿಕರು ಮನೆಯಿಂದ ಆಚೆ ಬರದಂತಹ ಸ್ಥಿತಿ ನಿರ್ಮಾಣವಾಯಿತು.

ಜಿಲ್ಲೆಯ ಮುಂಡರಗಿ, ರೋಣ, ಗಜೇಂದ್ರಗಡ, ಲಕ್ಷ್ಮೇಶ್ವರ ಪಟ್ಟಣ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಬೆಳಗ್ಗೆ 4ರಿಂದಲೇ ಮಳೆ ಆರಂಭವಾಗಿತ್ತು. ಇದರಿಂದ ಬೆಳಗ್ಗೆ ತಮ್ಮ ಕೆಲಸ ಕಾರ್ಯಗಳಿಗೆ ತೆರಳುವವರಿಗೆ, ಶಾಲಾ(School0-ಕಾಲೇಜಿಗೆ(College) ತೆರಳಬೇಕಿದ್ದ ವಿದ್ಯಾರ್ಥಿಗಳು(Students) ತೀವ್ರ ತೊಂದರೆ ಅನುಭವಿಸುವಂತಾಯ್ತು. ಮಳೆಯಲ್ಲಿಯೆ ರೇನ್‌ ಕೋಟ್‌, ಕೊಡೆ ಹಿಡಿದು ಶಾಲಾ ಕಾಲೇಜುಗಳಿಗೆ ತೆರಳಿದರು.

ಕೃಷಿ ಕಾರ್ಯಗಳಿಗೆ ಅಡ್ಡಿ

ಕೆಲ ದಿನಗಳಿಂದ ಜಿಲ್ಲೆಯ ಹಲವೆಡೆ ಸುರಿಯುತ್ತಿರುವುದರಿಂದ ಕೃಷಿ(Agriculture) ಚಟುವಟಿಕಗಳಿಗೆ ಅಡ್ಡಿಯಾಗುತ್ತಿರುವುದು ಒಂದು ಕಡೆಯಾದರೆ, ಇನ್ನೊಂದೆಡೆ ಕಟಾವಿಗೆ ಬಂದಿರುವ, ರಾಶಿ ಮಾಡಿಟ್ಟಿರುವ ಬೆಳೆ ಮಳೆಯಿಂದ ಹಾನಿಯಾಗುತ್ತಿದೆ. ಅದರಲ್ಲಿಯೂ ಪ್ರಮುಖವಾಗಿ ಮಳೆಯಿಂದ ಈರುಳ್ಳಿ ಅತಿಯಾದ ತೇವಾಂಶದಿಂದ ಕೊಳೆಯುವ ಸ್ಥಿತಿ ಎದುರಾಗಿದೆ. ಮೊದಲೇ ಬೆಲೆ ಇರದೇ ತೊಂದರೆ ಅನುಭವಿಸುತ್ತಿರುವ ರೈತರು, ಮಳೆಯಿಂದಾಗಿ ಇನ್ನಷ್ಟುಹಾನಿ ಅನುಭವಿಸುತ್ತಿದ್ದಾರೆ. ಗದಗ, ನರಗುಂದ, ಮುಂಡರಗಿ, ಲಕ್ಷ್ಮೇಶ್ವರ, ಡಂಬಳ ಸೇರಿದಂತೆ ವಿವಿಧ ಭಾಗಗಳಲ್ಲಿ ಗೋವಿನ ಜೋಳ, ಬಿ.ಟಿ. ಹತ್ತಿ, ಸೂರ್ಯಕಾಂತಿ, ಮೆಣಸಿನಕಾಯಿ ಬೆಳೆದ ರೈತರಿಗೆ ಸಾಕಷ್ಟುಸಮಸ್ಯೆ ಎದುರಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದೆ. ಹಾನಿಯ ಕುರಿತಂತೆ ಇನ್ನಷ್ಟೇ ಸಮೀಕ್ಷೆ ಮಾಡಬೇಕಿದೆ. ಬಳಿಕವೇ ಹಾನಿಯ ಅಂದಾಜು ಸಿಗಲಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
 

click me!