ರಾಜ್ಯ ರಾಜಧಾನಿ ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿ ಇಂದು ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಬೆಂಗಳೂರು (ಫೆ.19): ರಾಜ್ಯ ರಾಜಧಾನಿ ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿ ಇಂದು ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಪೊಲೀಸ್ ಕಾನ್ಸ್‌ಸ್ಟೇಬಲ್ ಮಹಾಂತೇಶ್ ಬೀರಾದಾರ್ ಎನ್ನುವವರು ಹೃದಯಾಘಾತದಿಂದ ಸಾವನ್ನಪ್ಪಿದ ಸಿಬ್ಬಂದಿ ಆಗಿದ್ದಾರೆ. ಮಹಾಂತೇಶ್ ಅವರು ವೈಟ್ ಫೀಲ್ಡ್ ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಳಗ್ಗೆ ಹೃದಯಾಘಾತ ಉಂಟಾಗಿದೆ. ಕೂಡಲೇ ಆವರನ್ನು ಆಸ್ಪತ್ರೆಗೆ ರವಾನಿಸುವ ಪ್ರಯತ್ನ ಮಾಡಲಾಗಿದೆ ಆದರೂ ತೀವ್ರ ಹೃದಯಾಘಾತದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
IAS vs IPS Fight:ರೋಹಿಣಿ ಸಿಂಧೂರಿ ಖಾಸಗಿ ಚಿತ್ರ ಫೋಸ್ಟ್ ಮಾಡಿದ ಡಿ. ರೂಪ
ಶಿವರಾತ್ರಿ ಹಿನ್ನೆಲೆಯಲ್ಲಿ ಬೈಕ್ ವ್ಹೀಲಿಂಗ್ ಪುಂಡಾಟ: ಇಡೀ ದೇಶದಲ್ಲಿ ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಶಿವನ ಧ್ಯಾನ, ಆರಾಧನೆ, ಜಪ- ತಪ ಹಾಗೂ ಪುರಾಣ ಓದಿಸುವುದು, ಕೀರ್ತನೆಗಳು ಹಾಗೂ ಭಜನೆ ಮಾಡುವ ಮೂಲಕ ಜಾಗರಣೆ ಮಾಡುವ ಭಕ್ತರನ್ನು ನಾವು ನೋಡಿದ್ದೇವೆ. ಆದರೆ, ಬೆಂಗಳೂರಿನ ಕೆಲವು ರಸ್ತೆಯಲ್ಲಿ ಶಿವರಾತ್ರಿ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ರಸ್ತೆ, ಯಶವಂತಪುರ ರಸ್ತೆ ಸೇರಿ ವಿವಿಧೆಡೆ ಜಾಗರಣೆ ಮಾಡುವ ಉದ್ದೇಶದಿಂದ ಕೆಲ ಯುವಕರ ಗುಂಪು ಬೈಕ್ ವ್ಹೀಲಿಂಗ್ ಮಾಡುತ್ತಿರುವುದು ಕಂಡುಬಂದಿದೆ.
ಪ್ರಶ್ನೆ ಮಾಡಿದವರ ಮೇಲೆಯೇ ನಿಂದನೆ: ಶಿವರಾತ್ರಿಯ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಏರ್ಪೋರ್ಟ್ ರಸ್ತೆ , ಯಶವಂತಪುರ ಮೇಲ್ ಸೇತುವೆ ಮೇಲೆ ಪುಂಡರ ಹಾವಳಿ ಕಂಡುಬಂದಿದೆ. ಹತ್ತು ಬೈಕ್ ಗಳಲ್ಲಿ ವಿಲ್ಹಿಂಗ್ ಮಾಡಿಕೊಂಡು ಹಾರಂನ್ ಮಾಡಿ ಪುಂಡಾಟಿಕೆ ಮೆರೆದಿದ್ದಾರೆ. ರಾತ್ರಿ ವೇಳೆ ವಾಹನ ಸಂಚಾರ ಇರುವ ರಸ್ತೆಗಳಲ್ಲಿ ವಿಲ್ಹಿಂಗ್ ಮಾಡುತ್ತಿದ್ದಾರೆ. ಶಿವಾರಾತ್ರಿ ಹಿನ್ನೆಲೆ ರಸ್ತೆಗಳು ಖಾಲಿ ಇರುತ್ತವೆ ಎಂದು ತಿಳಿದು ಪುಂಡಾಟಿಕೆ ಮಾಡಿರುವುದು ಕಂಡುಬಂದಿದೆ. ಇದರಿಂದ ವಿರಳವಾಗಿ ಸಂಚಾರ ಮಾಡುತ್ತಿದ್ದ ಇತರೆ ವಾಹನಗಳ ಸವಾರರಿಗೆ ಕಿರಿಕಿರಿ ಉಂಟಾಗಿದೆ. ವ್ಹೀಲಿಂಗ್ ಮಾಡಿದವರನ್ನು ಪ್ರಶ್ನೆ ಮಾಡಿದರೆ, ಅವರಿಗೆ ಕೆಟ್ಟ ಬಾಷೆಯಲ್ಲಿ ನಿಂಧನೆ ಮಾಡಿದ್ದಾರೆ.
ಹಳೇ ವೈಷಮ್ಯದ ಹಿನ್ನೆಲೆ ರೌಡಿಶೀಟರ್ ಕೊಲೆ : ಹುಬ್ಬಳ್ಳಿ. (ಫೆ.19): ಹಳೇ ವೈಷಮ್ಯದ ಹಿನ್ನೆಲೆ, ಚಾಕುವಿನಿಂದ ಇರಿದು ರೌಡಿಶೀಟರ್ ಒಬ್ಬನನ್ನು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಸಂತೋಷ ನಗರದಲ್ಲಿ ನಡೆದಿದೆ. ನಾಗರಾಜ ಚಲವಾದಿ (26) ಮೃತ ಯುವಕ ಆಗಿದ್ದಾನೆ.
IAS vs IPS Fight: ಈ ಪಿಕ್ಸ್ ಕೇವಲ ಸ್ಯಾಂಪಲ್ ಅಷ್ಟೆ: ಆಕೆ ಬಿಹೇವಿಯರ್ ಸರಿಯಿಲ್ಲ..! ಎಂದ ಡಿ ರೂಪಾ
ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರ ಶೋಧ: ದುಷ್ಕರ್ಮಿಗಳು ನಾಗರಾಜು ಮೇಲೆ ಚಾಕುವಿನಿಂದ ದಾಳಿ ಮಾಡಿ ಪರಾರಿ ಆಗಿದ್ದಾರೆ. ಇದನ್ನು ನೋಡಿದ ಸ್ಥಳೀಯ ಸಾರ್ವಜನಿಕರು ರಕ್ತಸ್ರಾವದಿಂದ ಬಳಲುತ್ತಿದ್ದ ಯುವಕ ನಾಗರಾಜು ಅವರನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಕಿಮ್ಸ್ ಆಸ್ಪತ್ರೆಯಲ್ಲಿ ಯುವಕ ಮೃತಪಟ್ಟಿದ್ದಾನೆ. ಈ ಕೊಲೆ ಘಟನೆಯ ಬಗ್ಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.