ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

Published : Sep 28, 2019, 02:25 PM ISTUpdated : Sep 28, 2019, 02:33 PM IST
ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಾರಾಂಶ

ಪೊಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಬೇಕೆಂದುಕೊಂಡಿರುವವರಿಗೆ ಉತ್ತಮ ಅವಕಾಶ ಇದೆ. ಭಾರತದಾದ್ಯಂತ ಖಾಲಿ ಇರುವ ಪೊಲೀಸ್ ವಿಭಾಗದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್ 16ರ ತನಕ ಅರ್ಜಿ ಸಲ್ಲಿಸಲು ಅವಕಾಶವಿದೆ.

ಹಾಸನ(ಸೆ.28): ಭಾರತಾದ್ಯಂತ ಖಾಲಿ ಇರುವ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಜನರಲ್‌ ಡ್ಯೂಟಿ) ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಎಕ್ಸಿಕ್ಯೂಟಿವ್‌) (ಪುರುಷ ಮತ್ತು ಮಹಿಳೆ) ದೆಹಲಿ ಪೊಲೀಸ್‌ ಮತ್ತು ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ (ಎಕ್ಸಿಕ್ಯೂಟಿವ್‌) ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು ಅಂಗೀಕೃತ ವಿಶ್ವವಿದ್ಯಾನಿಲಯದಲ್ಲಿ ಪದವಿ ಅಥವಾ ತತ್ಸಮಾನ ಪದವಿಯನ್ನು ಪಡೆದಿರಬೇಕು ಅರ್ಜಿ ಸಲ್ಲಿಸಲು ಅ.16 ಕಡೇ ದಿನವಾಗಿದೆ.

ಪರೀಕ್ಷೆ ನಡೆಸಿ ಫಲಿತಾಂಶ ನೀಡದ ಕೆಪಿಎಸ್‌ಸಿ

ಪುರುಷರು 170 ಸೆ.ಮೀ. ಎತ್ತರ, ಸಾಮಾನ್ಯ 80-85 (ಪೂರ್ತಿ ವಿಸ್ತರಿಸಿದಾಗ) ಕನಿಷ್ಠ ವಿಸ್ತರಣೆ: 5 ಸೆಂ.ಮೀ. ಎದೆ ಸುತ್ತಳತೆ ಹೊಂದಿರಬೇಕು ಹಾಗೂ ಮಹಿಳೆಯರು 157 ಸೆ.ಮೀ. ಎತ್ತರ, 45 ಕೆ.ಜಿ.ತೂಕ ಹೊಂದಿರಬೇಕು.

ಹಾಸನ: KSRTC ಬಸ್‌ನಲ್ಲಿ ಸ್ಟೂಡೆಂಟ್ಸ್ ಫುಲ್ ರೋಮ್ಯಾನ್ಸ್.. ಎಲ್ಲಿಗೆ ಬಂತು ಕಾಲ!

ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡದ ಅಭ್ಯರ್ಥಿಗಳಿಗೆ 5 ವರ್ಷಗಳ ವಿನಾಯಿತಿಯಿದ್ದು ಒ.ಬಿ.ಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಿನಾಯಿತಿ ನೀಡಲಾಗಿದæ. ಅರ್ಜಿ ಸಲ್ಲಿಸಲು ಅ.16 ಕೊನೆಯ ದಿನವಾಗಿದ್ದು http://ssconline.nic.in ವೆಬ್‌ಸೈಟ್ನ ಮೂಲಕ ಆನ್‌ಲೈನ್‌ ಮುಖಾಂತರ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ