Heeraben Modi Death: ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ ನಿಧನ; ತಿಪ್ಪರಾಜು ಹವಾಲ್ದಾರ್ ಸಂತಾಪ

Published : Dec 30, 2022, 12:50 PM IST
Heeraben Modi Death: ಪ್ರಧಾನಿ ಮೋದಿಯವರ ತಾಯಿ  ಹೀರಾಬೆನ್ ನಿಧನ;  ತಿಪ್ಪರಾಜು ಹವಾಲ್ದಾರ್ ಸಂತಾಪ

ಸಾರಾಂಶ

ಜಿಲ್ಲೆಯಲ್ಲಿ ಇಂದು ಶತಾಯುಷಿಯಾಗಿ ತುಂಬಾ ಅರ್ಥಪೂರ್ಣ ಬದುಕು ಬದುಕಿದ್ದ, ಪ್ರಧಾನಿ ನರೇಂದ್ರ ಮೋದಿಯವರ ತಾಯಿ, ಹೀರಾಬೆನ್ ಮೋದಿಯವರು ವಯೋ ಸಹಜ ಅನಾರೋಗ್ಯದಿಂದ ಮೃತಪಟ್ಟಿರುವ ಹಿನ್ನೆಲೆ  ರಾಯಚೂರು ಗ್ರಾಮೀಣದ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಿ ಗೌರವ ಸಮರ್ಪಣೆ ಮಾಡಲಾಯಿತು

ರಾಯಚೂರು (ಡಿ.30) : ಜಿಲ್ಲೆಯಲ್ಲಿ ಇಂದು ಶತಾಯುಷಿಯಾಗಿ ತುಂಬಾ ಅರ್ಥಪೂರ್ಣ ಬದುಕು ಬದುಕಿದ್ದ, ಪ್ರಧಾನಿ ನರೇಂದ್ರ ಮೋದಿಯವರ ತಾಯಿ, ಹೀರಾಬೆನ್ ಮೋದಿಯವರು ವಯೋ ಸಹಜ ಅನಾರೋಗ್ಯದಿಂದ ಮೃತಪಟ್ಟಿರುವ ಹಿನ್ನೆಲೆ  ರಾಯಚೂರು ಗ್ರಾಮೀಣದ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಿ ಗೌರವ ಸಮರ್ಪಣೆ ಮಾಡಲಾಯಿತು.  

ಹೀರಾಬೇನ್(Hiraben Modi) ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿದ್ರು. ಈ ವೇಳೆ ಬಿಜೆಪಿ ಗ್ರಾಮೀಣ ಮಂಡಲದ ಪದಾಧಿಕಾರಿಗಳು, ಮೌನ ಆಚರಣೆ ‌ನಡೆಸಿದರು. ಇನ್ನೂ ಪ್ರಧಾನಿ ಮೋದಿ(Narendra Modi)ಯವರಿಗೆ  ದುಃಖವನ್ನು  ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ರಾಯಚೂರು ಗ್ರಾಮೀಣದ ಮಾಜಿ ಶಾಸಕ ಹಾಗೂ ಕರ್ನಾಟಕ ಬಿಜೆಪಿ ಎಸ್ ಟಿ ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್(Tipparaju Hawaldar) ಪ್ರಾರ್ಥನೆ ಸಲ್ಲಿಸಿದರು.

ಈ ಭವ್ಯ ಭಾರತಕ್ಕೆ ಯುಗಪುರುಷನಂತಹ ಮಗನನ್ನು ನೀಡಿ,  ಶತಾಯುಷಿಯಾಗಿ ಅರ್ಥಪೂರ್ಣ ಬದುಕನ್ನ ಬದುಕಿ, ನಮ್ಮಂತಹ ಕೋಟ್ಯಂತ ಜನರಿಗೆ ಸ್ಫೂರ್ತಿಯನ್ನ ತುಂಬಿದ ತಾಯಿ ನಿಜವಾಗಿಯೂ ರಾಜಮಾತೆಯೇ ಆಗಿದ್ದರು. ಹೀರಾಬೇನ್ ಅವರ ಅಗಲಿಕೆ ದೇಶದ ಎಲ್ಲ ಕುಟುಂಬಗಳಿಗೂ ತುಂಬಲಾಗದ ನಷ್ಟವಾಗಿದೆ ಎಂದು ತಿಳಿಸಿದರು.

 

ಪ್ರಧಾನಿ ಮೋದಿ ತಾಯಿ ಹೀರಾಬೆನ್‌ ನಿಧನ: ಗಣ್ಯರ ಸಂತಾಪ

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು