ಪ್ರಧಾನಿ ಮೋದಿ ಪ್ರಮಾಣ ವಚನ: ದೇಶದ ನಾಗರಿಕನಾಗಿ ಪದಗ್ರಹಣದಲ್ಲಿ ಪಾಲ್ಗೊಂಡಿದ್ದು ಸಂತಸ ತಂದಿದೆ, ಪೇಜಾವರ ಶ್ರೀ

Published : Jun 09, 2024, 10:22 PM IST
ಪ್ರಧಾನಿ ಮೋದಿ ಪ್ರಮಾಣ ವಚನ:  ದೇಶದ ನಾಗರಿಕನಾಗಿ ಪದಗ್ರಹಣದಲ್ಲಿ ಪಾಲ್ಗೊಂಡಿದ್ದು ಸಂತಸ ತಂದಿದೆ, ಪೇಜಾವರ ಶ್ರೀ

ಸಾರಾಂಶ

ದೇಶದ ನಾಗರಿಕನಾಗಿ ಪದಗ್ರಹಣದಲ್ಲಿ ಸಂತೋಷದಿಂದ‌ ಭಾಗವಹಿಸಿದ್ದೇವೆ. ನೂತನ ಸಂಪುಟ ಶ್ರದ್ಧೆಯಿಂದ ಕಾರ್ಯನಿರ್ವಹಿಸಲಿ. ಸಮಾಜದ ಎಲ್ಲರಿಗೂ ಹಿತವಾಗುವಂತೆ ಕಾರ್ಯನಿರ್ವಹಿಸಲಿ. ಮುಂದಿನ ಐದು ವರ್ಷದ ಆಡಳಿತವನ್ನ ಸುಸೂತ್ರವಾಗಿ ಪರಿಪೂರ್ಣಗೊಳಿಸಲಿ ಎಂದು ಹಾರೈಸಿದ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ 

ಉಡುಪಿ(ಜೂ.09):  ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಪಾಲ್ಗೊಂಡಿದ್ದಾರೆ. 

ಕಾರ್ಯಕ್ರಮದ ಬಳಿಕ ಮಾತನಾಡಿದ ಪೇಜಾವರ ಶ್ರೀಗಳು, ದೇಶದ ನಾಗರಿಕನಾಗಿ ಪದಗ್ರಹಣದಲ್ಲಿ ಸಂತೋಷದಿಂದ‌ ಭಾಗವಹಿಸಿದ್ದೇವೆ. ನೂತನ ಸಂಪುಟ ಶ್ರದ್ಧೆಯಿಂದ ಕಾರ್ಯನಿರ್ವಹಿಸಲಿ. ಸಮಾಜದ ಎಲ್ಲರಿಗೂ ಹಿತವಾಗುವಂತೆ ಕಾರ್ಯನಿರ್ವಹಿಸಲಿ. ಮುಂದಿನ ಐದು ವರ್ಷದ ಆಡಳಿತವನ್ನ ಸುಸೂತ್ರವಾಗಿ ಪರಿಪೂರ್ಣಗೊಳಿಸಲಿ ಎಂದು ಹಾರೈಸಿದ್ದಾರೆ. 

ಈಶ್ವರನ ಹೆಸರಿನಲ್ಲಿ ಮೋದಿ ಪ್ರಮಾಣವಚನ, ಮೋದಿ 3.0 ಸರ್ಕಾರದಲ್ಲಿ ಯಾರಿಗೆ ಸಚಿವ ಸ್ಥಾನ?

ಮೂರನೇ ಅವಧಿಯ ನರೇಂದ್ರ ಮೋದಿ ಸರ್ಕಾರದಲ್ಲಿ ಈ ಬಾರಿ ಕರ್ನಾಟಕದಿಂದ ಐವರಿಗೆ ಸಚಿವಗಿರಿ ಭಾಗ್ಯ ದೊರೆತಿದೆ. ನಿರ್ಮಲಾ ಸೀತಾರಾಮನ್‌, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಪ್ರಹ್ಲಾದ್‌ ಜೋಶಿ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 

PREV
Read more Articles on
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!