ಬೆಳಗಾವಿಗೆ ಬರಲಿವೆ 50 ಎಲೆಕ್ಟ್ರಿಕಲ್‌ ವಾಹನಗಳು..!

By Kannadaprabha News  |  First Published Dec 20, 2023, 8:11 PM IST

ಬೆಳಗಾವಿ ನಗರ ಸಾರಿಗೆಯನ್ನು ಬಲಪಡಿಸಲು ಹೊಸದಾಗಿ 50 ಎಲೆಕ್ಟ್ರಿಕಲ್‌ ವಾಹನಗಳನ್ನು ಒದಗಿಸುವ ಯೋಜನೆ ರೂಪಿಸಲಾಗಿದ್ದು, ಈ ಕುರಿತು ಅವಶ್ಯಕ ಪೂರ್ವ ತಯಾರಿ ಮಾಡಿಕೊಳ್ಳಲು ಸೂಚಿಸಿದರು. ಅಲ್ಲದೆ, ಬರುವ 3 ತಿಂಗಳಲ್ಲಿ ಬೆಳಗಾವಿ ನಗರಕ್ಕೆ ಹೆಚ್ಚಿನ ಬಸ್ಸುಗಳನ್ನು ನೀಡಲಿದ್ದು ಈ ಬಸ್ಸುಗಳ ಕಾರ್ಯಾಚರಣೆಗೆ ಕಾರ್ಯಯೋಜನೆ ರೂಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಭರತ್ 


ಬೆಳಗಾವಿ(ಡಿ.20):  ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಭರತ್ ಸೋಮವಾರ ಬೆಳಗಾವಿ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಬೆಳಗಾವಿ ವಿಭಾಗದ ಬಸ್ ಕಾರ್ಯಾಚರಣೆ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿ ಕುರಿತು ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೆಲಸ ಕಾರ್ಯಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದರು.

ಪ್ರಸ್ತುತ ಶಕ್ತಿ ಯೋಜನೆ ಅನುಷ್ಠಾನದಲ್ಲಿದ್ದು, ವಿದ್ಯಾರ್ಥಿಗಳಿಗೆ ಅನಾನುಕೂಲ ಉಂಟಾಗದಂತೆ ಹೆಚ್ಚಿನ ಜಾಗ್ರತೆ ವಹಿಸಿ ಕಾರ್ಯಾಚರಣೆ ಮಾಡಲು ಎಲ್ಲ ಅಧಿಕಾರಿಗಳಿಗೆ ತಿಳಿಸಿದರು. ಬೆಳಗಾವಿ ನಗರ ಸಾರಿಗೆಯನ್ನು ಬಲಪಡಿಸಲು ಹೊಸದಾಗಿ 50 ಎಲೆಕ್ಟ್ರಿಕಲ್‌ ವಾಹನಗಳನ್ನು ಒದಗಿಸುವ ಯೋಜನೆ ರೂಪಿಸಲಾಗಿದ್ದು, ಈ ಕುರಿತು ಅವಶ್ಯಕ ಪೂರ್ವ ತಯಾರಿ ಮಾಡಿಕೊಳ್ಳಲು ಸೂಚಿಸಿದರು. ಅಲ್ಲದೆ, ಬರುವ 3 ತಿಂಗಳಲ್ಲಿ ಬೆಳಗಾವಿ ನಗರಕ್ಕೆ ಹೆಚ್ಚಿನ ಬಸ್ಸುಗಳನ್ನು ನೀಡಲಿದ್ದು ಈ ಬಸ್ಸುಗಳ ಕಾರ್ಯಾಚರಣೆಗೆ ಕಾರ್ಯಯೋಜನೆ ರೂಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

Tap to resize

Latest Videos

ಬೆಳಗಾವಿಯಲ್ಲಿ ಹೆಚ್ಚಾಯ್ತು ಮರಾಠಿಗರ ಪುಂಡಾಟ: ಕನ್ನಡ ಬಾವುಟ ಹಾರಿಸಿದ ಕನ್ನಡಿಗರ ಮೇಲೆ ಹಲ್ಲೆ!

ಜನದಟ್ಟಣೆ ಅವಧಿಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೆಚ್ಚುವರಿ ಟ್ರಿಪ್‌ಗಳನ್ನು ಕಾರ್ಯಾಚರಣೆ ಮಾಡಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ವಾಹನಗಳ ಶುಚಿಕರಣ ಹಾಗೂ ಕಾರ್ಯಾಚರಣೆ ಕುರಿತು ಇನ್ನೂ ಹೆಚ್ಚಿನ ಶಿಸ್ತನ್ನು ಕೈಗೊಳ್ಳಲು ಹೇಳಿದರು.

ಕಿತ್ತೂರು ಬಸ್ ಘಟಕದ ಕಾಮಗಾರಿಯನ್ನು ಮಾರ್ಚ್‌-2024ರ ಒಳಗಾಗಿ ಪೂರ್ಣಗೊಳಿಸಿ ಘಟಕದಿಂದ ಬಸ್ಸುಗಳನ್ನು ಕಾರ್ಯಾಚರಣೆಗೆ ತರುವಂತೆ ಹಾಗೂ ಖಾನಾಪೂರ ಹೊಸ ಬಸ್ ನಿಲ್ದಾಣದ ನಿರ್ಮಾಣದ ಕಾಮಗಾರಿಯನ್ನು ಮಾರ್ಚ್‌-2024ರ ಒಳಗಾಗಿ ಪೂರ್ಣಗೊಳಿಸಲು ಆದೇಶಿಸಿದರು.

ಇನ್ನೂ 2 ರಿಂದ 3 ತಿಂಗಳಲ್ಲಿ ವಿಭಾಗಕ್ಕೆ 40 ಡಿಸೇಲ್ ಹೊಸ ವಾಹನಗಳನ್ನು ನೀಡಲಾಗುತ್ತಿದ್ದು, ಸೂಕ್ತ ಮಾರ್ಗಗಳಲ್ಲಿ ಹೆಚ್ಚುವರಿ ಕಾರ್ಯಾಚರಣೆಗೆ ಕಾರ್ಯ ಯೋಜನೆ ರೂಪಿಸುವಂತೆ ತಿಳಿಸಿದರು. ಸಭೆಯಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ ಹುದ್ದಾರ, ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ ಎಲ್ ರಾಠೋಡ್, ವಿಭಾಗೀಯ ಸಾರಿಗೆ ಅಧಿಕಾರಿ ಕೆ.ಕೆ ಲಮಾಣಿ, ಭದ್ರತಾ ಮತ್ತು ಜಾಗೃತಾಧಿಕಾರಿ ಬಿ.ಡಿ ಗುರಿಕಾರ್, ವಿಭಾಗದ ಅಧಿಕಾರಿ ಮತ್ತು ಘಟಕ ವ್ಯವಸ್ಥಾಪಕರು ಉಪಸ್ಥಿತತರಿದ್ದರು.

click me!