ಸಿ.ಟಿ.ರವಿ ಜೊತೆ ಕೈ ಮುಖಂಡನ ಇಸ್ಫೀಟ್‌ ಆಟ ಫೋಟೋ ವೈರಲ್‌..!

By Kannadaprabha News  |  First Published Apr 4, 2023, 8:40 AM IST

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜೊತೆ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಇಸ್ಫೀಟ್‌ ಆಟ ಆಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಚುನಾವಣಾ ಸಮಯದಲ್ಲಿ ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.


ಮಂಡ್ಯ:  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜೊತೆ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಇಸ್ಫೀಟ್‌ ಆಟ ಆಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಚುನಾವಣಾ ಸಮಯದಲ್ಲಿ ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಜೆಡಿಎಸ್‌ ಸಾಮಾಜಿಕ ಜಾಲತಾಣದ ಫೇಜ್‌ಗಳಲ್ಲಿ ಈ ಫೋಟೋ ಸಾಕಷ್ಟುಹರಿದಾಡುತ್ತಿದ್ದು, ಬಿಸಿ ಬಿಸಿಯಾಗಿ ಚರ್ಚೆಯಾಗುತ್ತಿದೆ. ಮಂಡ್ಯದಲ್ಲಿ ಜೆಡಿಎಸ್‌ ಸೋಲಿಸಲು ಬಿಜೆಪಿ ಮತ್ತು ಕಾಂಗ್ರೆಸ್‌ ಒಂದಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಅಸಲಿಗೆ ಬಿಜೆಪಿಯ ಬಿ ಟೀಂ ಯಾವುದು ಅಂತ ಈಗ ಎಲ್ಲರಿಗೂ ಗೊತ್ತಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

Tap to resize

Latest Videos

ಈ ಫೋಟೋ ಕುರಿತಂತೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದ್ದು, ಮಂಡ್ಯ ಜಿಲ್ಲಾ ರಾಜಕಾರಣದ ಕುರಿತು ಮಾತನಾಡುವ ಸಲುವಾಗಿಯೇ ಇಬ್ಬರು ನಾಯಕರು ಒಟ್ಟಿಗೆ ಸೇರಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಈ ಫೋಟೋ ಎಲ್ಲಿಯದು, ಯಾವ ಸಂದರ್ಭದಲ್ಲಿ ತೆಗೆದ ಚಿತ್ರ ಎನ್ನುವುದು ಇದುವರೆಗೂ ಸ್ಪಷ್ಟವಾಗಿಲ್ಲ. 

ತಾರತಮ್ಯ ಮಾಡಲು ಕೈ ಸರ್ಕಾರವಲ್ಲ

ಚಿಕ್ಕಮಗಳೂರು (ಮಾ.30) : ಮೀಸಲಾತಿ ವಿಚಾರದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚಲು ನಮ್ಮದು ಕಾಂಗ್ರೆಸ್‌ ಸರ್ಕಾರವಲ್ಲ. ಎಲ್ಲರಿಗೂ ನ್ಯಾಯ ಕೊಡಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಕೆಲವರು ರಾಜಕೀಯ ಪ್ರೇರಿತವಾಗಿ ತಪ್ಪು ಅಭಿ​ಪ್ರಾ​ಯ ಮೂಡಿಸುವ ಪ್ರಯತ್ನ ಮಾಡುತ್ತಾರೆ. ಸದಾಶಿವ ಆಯೋಗ(Sadashiva report) ಬಂಜಾರ, ಬೋವಿ, ಕೊರಚ, ಕೊರಮ ಈ ಸಮುದಾಯಗಳಿಗೆ ಶೇ.3ರಷ್ಟುಮೀಸಲಾತಿ ನಿಗದಿ ಪಡಿಸಿತ್ತು. ಆದರೆ ಬಿಜೆ​ಪಿ ಸರ್ಕಾರ ಕೊಟ್ಟಿರುವುದು ಶೇ.4.50ರಷ್ಟುಮೀಸ​ಲಾತಿ. ಕಾಂಗ್ರೆಸ್‌ ಸರ್ಕಾರ ಶೇ.2.50ರಿಂದ ಶೇ.3ರಷ್ಟುಮೀಸಲಾತಿ ಅಷ್ಟೇ ನೀಡಬೇಕು ಎಂದು ಟಿಪ್ಪಣಿ ತಯಾರಿಸಿತ್ತು ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆ​ಸಿ​ದರು.

Ticket fight: ಕಾಫಿನಾಡು ಮೂಡಿಗೆರೆಯಲ್ಲಿ ಮುಗಿಯದ ಬಿಜೆಪಿ ಬಣ ರಾಜಕೀಯ!

ಸದಾಶಿವ ಆಯೋಗ ಶಿಫಾರಸು ಮಾಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ಮೀಸಲಾತಿಯನ್ನು ನೀಡಿರುವುದರಿಂದ ಆತಂಕ ಪಡುವ ಅಗತ್ಯವಿಲ್ಲ. ಇದರ ಮೇಲೆ ಯಾರಿಗಾದರೂ ಅನ್ಯಾಯವಾಗಿದೆ ಎನ್ನಿಸಿದರೆ ಅದನ್ನು ಸರಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಭರ​ವಸೆ ನೀಡಿ​ದ್ದಾರೆ ಎಂದರು. ಬಂಜಾರÜ, ಬೋವಿ ಸಮಾಜ ಬಿಜೆಪಿ ಜೊತೆಗೆ ಮುಂಚಿನಿಂದಲೂ ಇದೆ. ನಾವೂ ಅವರ ಜೊತೆಗಿದ್ದೇವೆ. ಯಾರನ್ನೂ ಬಿಟ್ಟುಕೊಡುವ, ಕಡೆಗಣಿಸುವ ಪ್ರಶ್ನೆಯಿಲ್ಲ ಎಂದು ತಿಳಿಸಿದರು.

ಜೋಡಿಹೋಚಿಹಳ್ಳಿ ಪಂಚಾಯ್ತಿಗೆ 15.96 ಕೋಟಿ ರು. ಅನುದಾನ

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ(Chikkamagaluru assembly constituency)ದ ವ್ಯಾಪ್ತಿಯಲ್ಲಿರುವ ಜೋಡಿಹೋಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಕಳೆದ ಐದು ವರ್ಷಗಳಲ್ಲಿ 15.96 ಕೋಟಿ ರು. ಅನುದಾನ ಮಂಜೂರು ಮಾಡಲಾಗಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಇತ್ತೀಚೆಗೆ ಜೋಡಿಹೋಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡೇರಹಳ್ಳಿ ತಾಂಡದಲ್ಲಿ ನಡೆದ ಕಂದಾಯ ಗ್ರಾಮ ಘೋಷಣೆ ಹಾಗೂ ಹಕ್ಕಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜೋಡಿಹೋಚಿಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 3.30 ಕೋಟಿ ರು. ಅನುದಾನ ನೀಡಿದ್ದೇನೆಂದು ಹೇಳಿದರು. ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಲುಬುರ​ಗಿಯಲ್ಲಿ ಲಂಬಾಣಿ ತಾಂಡಾದ ಹಾಗೂ ಗೊಲ್ಲರಹಟ್ಟಿಗಳಿಗೆ ಸಂಬಂಧಿಸಿದಂತೆ 1575 ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಿ, 60 ಸಾವಿರಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರವನ್ನು ವಿತರಿಸಿದರು.

click me!