ಬೀದರ್‌ನಲ್ಲಿ ಹೊಸ ವರ್ಷಾಚರಣೆ ವೇಳೆ ಗುಂಪು ಘರ್ಷಣೆ: ಓರ್ವ ವ್ಯಕ್ತಿ ಸಾವು

Suvarna News   | Asianet News
Published : Jan 01, 2020, 04:27 PM ISTUpdated : Jan 01, 2020, 04:39 PM IST
ಬೀದರ್‌ನಲ್ಲಿ ಹೊಸ ವರ್ಷಾಚರಣೆ ವೇಳೆ ಗುಂಪು ಘರ್ಷಣೆ: ಓರ್ವ ವ್ಯಕ್ತಿ ಸಾವು

ಸಾರಾಂಶ

ಹೊಸ ವರ್ಷಾಚರಣೆ ವೇಳೆ ಗುಂಪು ಘರ್ಷಣೆ| ವ್ಯಕ್ತಿಯೋರ್ವ ಬಲಿ| ಜಿಲ್ಲೆಯ ಭಾಲ್ಕಿ ತಾಲೂಕಿನ ಸಿಕಿಂದ್ರಾಬಾದ್ ವಾಡಿಯಲ್ಲಿ ನಡೆದ ಘಟನೆ| ಮಾತಿಗೆ ಮಾತು ಬೆಳೆದು ತಾರಕಕ್ಕೇರಿದ ಜಗಳ| ಗುಂಪು ಝರೆಪ್ಪ ಮೇಲೆ ಹಲ್ಲೆ ಮಾಡಿದ ಯುಕರ ಗುಂಪು| ತೀವ್ರವಾಗಿ ಗಾಯಗೊಂಡಿದ್ದ ಝರೆಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವು|

ಬೀದರ್(ಜ.01): ಹೊಸ ವರ್ಷಾಚರಣೆ ವೇಳೆ ಗುಂಪು ಘರ್ಷಣೆಯಾಗಿ ವ್ಯಕ್ತಿಯೋರ್ವ ಬಲಿಯಾದ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಸಿಕಿಂದ್ರಾಬಾದ್ ವಾಡಿಯಲ್ಲಿ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನ ಝರೆಪ್ಪೆ(30) ಎಂದು ಗುರುತಿಸಲಾಗಿದೆ. 

ಸಿಕಿಂದ್ರಾಬಾದ್ ವಾಡಿಯ ರಸ್ತೆಯಲ್ಲೇ ಯುವಕರ ತಂಡವೊಂದು ಡಿಜೆ ಹಾಕಿಕೊಂಡು ನ್ಯೂ ಇಯರ್ ಸೆಲೆಬ್ರೆಷನ್ ಮಾಡುತ್ತಿತ್ತು. ಈ ವೇಳೆ ಝರೆಪ್ಪ ಮತ್ತು ಸ್ನೇಹಿತರು ರಸ್ತೆಯ ಪಕ್ಕದಲ್ಲಿ ಸೆಲೆಬ್ರೆಷನ್ ಮಾಡಲು ಹೇಳಿದ್ದಾರೆ. ಇದರಿಂದ ಕೋಪಗೊಂಡ ಯುವಕರ ತಂಡವೊಂದು ಜಗಳಕ್ಕೆ ಇಳಿದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದಿದೆ. ಯುವಕರ ಗುಂಪು ಝರೆಪ್ಪ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಝರೆಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನಪ್ಪಿದಾರೆ. ಈ ಸಂಬಂಧ ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC