ಪತ್ನಿಯ ಜೊತೆ ಅಕ್ರಮ ಸಂಬಂಧ: ಪ್ರಶ್ನಿಸಿದ ಗಂಡನ ಮೇಲೆ ನಾಯಿ ಛೂ ಬಿಟ್ಟ ಪ್ರಿಯಕರ!

Suvarna News   | Asianet News
Published : Mar 07, 2020, 11:51 AM ISTUpdated : Mar 07, 2020, 07:02 PM IST
ಪತ್ನಿಯ ಜೊತೆ ಅಕ್ರಮ ಸಂಬಂಧ: ಪ್ರಶ್ನಿಸಿದ ಗಂಡನ ಮೇಲೆ ನಾಯಿ ಛೂ ಬಿಟ್ಟ ಪ್ರಿಯಕರ!

ಸಾರಾಂಶ

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯ ಪ್ರಿಯಕರ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಪ್ರಿಯಕರ| ಹುಬ್ಬಳ್ಳಿ ನಗರದ ಕೇಶ್ವಾಪುರ ಮುಕ್ತಿಧಾಮದ ಬಳಿ ನಡೆದ ಘಟನೆ| ಮಹಿಳೆಯ ಪತಿ ಮೇಲೆ ಸಾಕು ನಾಯಿಯಿಂದ ಕಡಿಸಿದ ಪ್ರಿಯಕರ| 

ಹುಬ್ಬಳ್ಳಿ(ಮಾ.07): ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯ ಪ್ರಿಯಕರನೊಬ್ಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದ ಕೇಶ್ವಾಪುರ ಮುಕ್ತಿಧಾಮದ ಬಳಿ ಇಂದು(ಶನಿವಾರ) ನಡೆದಿದೆ. ಇಷ್ಟೇ ಅಲ್ಲದೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಗಂಡನ ಮೇಲೆ ಸಾಕು ನಾಯಿ ಚೂ ಬಿಟ್ಟು ಕಡಿಸಿದ್ದಾನೆ ಎಂದು ಆರೋಪಿಸಲಾಗಿದೆ.

"

ಏನಿದು ಪ್ರಕರಣ? 

ಸಂತೋಷ ಕಾಂಬ್ಳೆ ಎಂಬುವನ ಜೊತೆ ರಮಾದೇವಿ(ಹೆಸರು ಬದಲಾಯಿಸಲಾಗಿದೆ) ವಿವಾಹವಾಗಿತ್ತು. ಮದುವೆಯಾದರೂ ರಮಾದೇವಿ ಸನ್ನಿ ಎಂಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಷಯ ಪತಿ ಸಂತೋಷಗೆ ಗೊತ್ತಾಗಿದೆ. ಹೀಗಾಗಿ ಅಕ್ರಮ ಸಂಬಂಧವನ್ನ ಸನ್ನಿಗೆ ಪ್ರಶ್ನಿಸಿದ್ದಾನೆ. ಇದಕ್ಕೆ ಕೋಪಗೊಂಡ ಸನ್ನಿ ಸಂತೋಷ ಮೇಲೆ ಹಲ್ಲೆ ಮಾಡಿ ಮನೆಯ ಸಾಕು ನಾಯಿಯಿಂದ ಕಡಿಸಿದ್ದಾನೆ ಎಂದು ಆರೋಪಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂತೋಷ ಹಾಗೂ ಸನ್ನಿ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಈ ನಡುವೆ ಜಗಳ ಬಿಡಿಸಲು ಬಂದ ಸಂತೋಷ ಕುಟುಂಬಸ್ಥರ ಮೇಲೆಯೂ ಸನ್ನಿ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಸಂತೋಷ ಕಾಂಬ್ಳೆ ಸೇರಿದಂತೆ ಇಬ್ಬರಿಗೆ ಗಾಯವಾಗಿದೆ. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಪತ್ನಿ ರಮಾದೇವಿ ಮನೆ ಬಿಟ್ಟು ಪರಾರಿಯಾಗಿದ್ದಾಳೆ.

ಸದ್ಯ ಗಾಯಾಳುಗಳನ್ನ ಹುಬ್ಬಳ್ಳಿಯ ‌ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

PREV
click me!

Recommended Stories

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ