ಮೈಸೂರಲ್ಲಿ ಚೀನಾ ಕಂಟೈನರ್‌ ಬಗ್ಗೆಯೇ ಚರ್ಚೆ.! ಆತಂಕದಲ್ಲಿ ಜನ

By Kannadaprabha NewsFirst Published Apr 5, 2020, 11:15 AM IST
Highlights

ಕೊರೋನಾ ವೈರಸ್‌ ಚೀನಾದಿಂದ ಬಂದಿತ್ತು ಎನ್ನಲಾದ ಕಂಟೈನರ್‌ ಬಗ್ಗೆ ಸಾರ್ವಜನಿಕರು ಹೆಚ್ಚು ಚರ್ಚಿಸುತ್ತಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಅಧಿಕಾರಿಗಳ ಸಭೆ ಬಳಿಕ ನೀಡಿದ್ದ ಹೇಳಿಕೆಯ ಹಿನ್ನೆಲೆ ಚರ್ಚೆ ಆರಂಭವಾಗಿದೆ.

ಮೈಸೂರು(ಏ.05): ಕೊರೋನಾ ವೈರಸ್‌ ಚೀನಾದಿಂದ ಬಂದಿತ್ತು ಎನ್ನಲಾದ ಕಂಟೈನರ್‌ ಬಗ್ಗೆ ಸಾರ್ವಜನಿಕರು ಹೆಚ್ಚು ಚರ್ಚಿಸುತ್ತಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಅಧಿಕಾರಿಗಳ ಸಭೆ ಬಳಿಕ ನೀಡಿದ್ದ ಹೇಳಿಕೆಯ ಹಿನ್ನೆಲೆ ಚರ್ಚೆ ಆರಂಭವಾಗಿದೆ.

ಈವರೆಗೆ ವಿದೇಶದಿಂದ ಬಂದಿದ್ದ ವ್ಯಕ್ತಿಯಿಂದ ಸೋಂಕು ತಗುಲಿರಬಹುದು ಎಂಬ ಚರ್ಚೆ ನಡೆದಿತ್ತು. ಆದರೆ ಸಭೆಯಲ್ಲಿ ಅಧಿಕಾರಿಗಳು ನೀಡಿರುವ ಮಾಹಿತಿ ಸುಳ್ಳಾಗಲು ಸಾಧ್ಯವಿಲ್ಲ ಎಂಬ ನಂಬಿಕೆ ದಟ್ಟವಾಗಿದೆ.

 

ಈ ನಡುವೆ ಜಿಲ್ಲಾಡಳಿತ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಮುಂದುವರೆಸಿದ್ದು, ಅನಗತ್ಯವಾಗಿ ತಿರುಗಾಡುವ ಸಾರ್ವಜನಿಕರ ಮೇಲೆ ನಿಗಾವಹಿಸುತ್ತಿದೆ. ಜೊತೆಗೆ ಪಡಿತರ ಮತ್ತು ತರಕಾರಿಯನ್ನು ಕೆಲವಡೆ ಮನೆ ಮನೆಗೆ ತಲುಪಿಸುತ್ತಿದೆ. ಕೆಲವೆಡೆ ನ್ಯಾಯ ಬೆಲೆ ಅಂಗಡಿ ಮುಂದೆ ಸಾರ್ವಜನಿಕರು ಸಾಲುಗಟ್ಟಿನಿಂತು ಪಡಿತರ ಪಡೆದಿದ್ದಾರೆ. ಈ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿಯವರೇ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನೋಡಿಕೊಂಡರು.

ನಗರದ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಜಿಲ್ಲಾಧಿಕಾರಿ, ನಗರ ಪಾಲಿಕೆ ಆಯುಕ್ತರು, ಮೇಯರ್‌ ಮತ್ತು ಇತರ ಅಧಿಕಾರಿಗಳು ತೆರಳಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಹೈಡ್ರೋಜನ್‌ ಫೆರಾಕ್ಸೈಡ್‌ ಸಿಂಪಡಣೆಗೆ ಎಲ್ಲರೂ ಒಳಗಾದರು.

ಪ್ರಸಾದ ವಿತರಣೆ:

ನಂಜನಗೂಡು ಶ್ರೀಕಂಠೇಶ್ವರ ಸೇವಾ ಸಂಘದ ಪದಾಧಿಕಾರಿಗಳು ಶ್ರೀಕಂಠೇಶ್ವರಸ್ವಾಮಿಯ ಪ್ರಸಾದವನ್ನು ತಂದು ನಗರಪಾಲಿಕೆ ಸಿಬ್ಬಂದಿ ವಿತರಿಸಿದರು. ನಗರಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಇದ್ದರು.

ವಾಹನಗಳ ಮೇಲೆ ನಿಗಾ:

ನಗರದ ವಿವಿಧೆಡೆ ಅನಗತ್ಯವಾಗಿ ಸಂಚರಿಸುವ ವಾಹನಗಳ ಮೇಲೆ ಪೊಲೀಸರು ನಿಗಾವಹಿಸಿದ್ದಾರೆ. ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸಿಸಿ ಕ್ಯಾಮರಾ ಮೂಲಕ ವಾಹನಗಳು ಎಷ್ಟುಬಾರಿ ಸಂಚರಿಸಿವೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಅನಗತ್ಯವಾಗಿ ಸಂಚರಿಸಿದ ವಾಹನಗಳನ್ನು ಗುರುತಿಸಲಾಗುತ್ತಿದೆ.

click me!