ಪೌರಕಾರ್ಮಿಕರು, ಎಸ್‌ಐಗೆ ಸೋಂಕು : ಪೊಲೀಸ್ ಠಾಣೆ ಸೀಲ್ ಡೌನ್

Suvarna News   | Asianet News
Published : Aug 13, 2020, 10:33 AM IST
ಪೌರಕಾರ್ಮಿಕರು, ಎಸ್‌ಐಗೆ ಸೋಂಕು : ಪೊಲೀಸ್ ಠಾಣೆ ಸೀಲ್ ಡೌನ್

ಸಾರಾಂಶ

ಪೌರ ಕಾರ್ಮಿಕರು ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಗೆ ಕೊರೋನಾ ವೈರಸ್ ಪಾಸಿಟಿವ್ ಬಂದಿದ್ದು ಈ ನಿಟ್ಟಿನಲ್ಲಿ ಪುರಸಭೆ ಹಾಗೂ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಪಾವಗಡ (ಆ.13): 6 ಮಂದಿ ಪೌರಕಾರ್ಮಿಕರು ಸೇರಿ ಬುಧವಾರ ಒಂದೇ ದಿನ ತಾಲೂಕಿನಾದ್ಯಂತ 23 ಮಂದಿಗೆ ಸೋಂಕು ದೃಢವಾಗಿರುವುದಾಗಿ ಜಿಲ್ಲಾ ಆರೋಗ್ಯ ಕೇಂದ್ರದಿಂದ ಮಾಹಿತಿ ಲಭ್ಯವಾಗಿದೆ.

ಇದರ ಬೆನ್ನಲ್ಲೆ ಪಿಎಸ್‌ಐಯೊಬ್ಬರಿಗೆ ಸೋಂಕು ದೃಢವಾಗಿದ್ದು ಪಾವಗಡ ಪೊಲೀಸ್‌ ಠಾಣೆ ಸೀಲ್‌ಡೌನ್‌ ಮಾಡಲಾಗಿದೆ. 6ಮಂದಿ ಪೌರಕಾರ್ಮಿಕರಿಗೆ ಕೊರೋನಾ ಸೋಂಕು ಪಾಸಿಟಿವ್‌ ದೃಢವಾದ ಕಾರಣ ತಾಲೂಕು ಆಡಳಿತದಿಂದ ಪಟ್ಟಣದ ಪುರಸಭೆ ಕಂಪ್ಲೀಟ್‌ ಸೀಲ್‌ಡೌನ್‌ ಮಾಡಲಾಗಿದೆ.

ಸಚಿವ ಶ್ರೀರಾಮುಲು ತಾಯಿ, ಸೋದರನಿಗೂ ಕೊರೋನಾ ಪಾಸಿಟಿವ್‌..

ಅ.12ರಂದು ಪತ್ತೆಯಾದ 23 ಮಂದಿ ಸೇರಿದಂತೆ ಇದುವರೆವಿಗೂ ತಾಲೂಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 231ಕ್ಕೆ ಏರಿಕೆಯಾಗಿದೆ. ಈ ಎಲ್ಲಾ ಸೋಂಕಿತರನ್ನು ಪಟ್ಟಣದ ಕೊವಿಡ್‌ ಕೇರ್‌ ಸೆಂಟರ್‌ಗೆ ದಾಖಲಿಸಲಾಗಿದೆ. ಕಳೆದ 1 ತಿಂಗಳಿಂದಲೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!