ಇಲ್ಲಿನ ವಿಧಾನ ಸಭೆ ಚುನಾವಣೆಯ, ಪಕ್ಷ ಸಂಘಟನೆ ಹಿನ್ನಲೆಯಲ್ಲಿ ಆಗಮಿಸಿದ್ದು ಚುನಾವಣೆ ಸ್ವರ್ಧೆ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಸಕಾರತ್ಮಕ ಸ್ಪಂದನೆæ ಸಿಕ್ಕಿದೆ. ಪಕ್ಷ ಕುಟುಂಬವಿದ್ದ ಹಾಗೆ. ಇಲ್ಲಿ ಭಿನ್ನಾಭಿಪ್ರಾಯ ಸಹಜ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಜಿಲ್ಲಾ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಮಯೂರ ವರ್ಮ ಹೇಳಿದರು.
ಪಾವಗಡ : ಇಲ್ಲಿನ ವಿಧಾನ ಸಭೆ ಚುನಾವಣೆಯ, ಪಕ್ಷ ಸಂಘಟನೆ ಹಿನ್ನಲೆಯಲ್ಲಿ ಆಗಮಿಸಿದ್ದು ಚುನಾವಣೆ ಸ್ವರ್ಧೆ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಸಕಾರತ್ಮಕ ಸ್ಪಂದನೆæ ಸಿಕ್ಕಿದೆ. ಪಕ್ಷ ಕುಟುಂಬವಿದ್ದ ಹಾಗೆ. ಇಲ್ಲಿ ಭಿನ್ನಾಭಿಪ್ರಾಯ ಸಹಜ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಜಿಲ್ಲಾ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಮಯೂರ ವರ್ಮ ಹೇಳಿದರು.
ಅವರು ಇಲ್ಲಿನ ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಪಕ್ಷ ಸಂಘಟನೆ ಇತರೆ ಸಮಸ್ಯೆಗಳ ಮಾಹಿತಿ ದೃಢೀಕರಿಸುವ ಹಿನ್ನಲೆಯಲ್ಲಿ ಶನಿವಾರ ಪಾವಗಡಕ್ಕೆ ಆಗಮಿಸಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.
ಪಾವಗಡ ವಿಧಾನ ಸಭೆಯ ಚುನಾವಣೆ ಹಿನ್ನಲೆಯಲ್ಲಿಟಿಕೆಟ್ ಬಯಸಿ ಆರೇಳು ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಕೆಲ ಮಾನದಂಡಗಳ ಅನ್ವಯ ಹಾಗೂ ಸರ್ವೆ ಮಾಹಿತಿ ಆಧರಿಸಿ ಕೆಪಿಸಿಸಿ ತೀರ್ಮಾನದಂತೆ ಇಲ್ಲಿನ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಿ ಎಚ್.ವಿ.ವೆಂಕಟೇಶರನ್ನು ಚುನಾವಣೆಯ ಕಣಕ್ಕಿಳಿಸಲಾಗಿದೆ. ಪಕ್ಷ ಒಂದು ಕುಟುಂಬವಿದ್ದಂತೆ. ಎಐಸಿಸಿ ಮತ್ತು ಕೆಪಿಸಿಸಿ ಆದೇಶದ ಮೇರೆಗೆ ಇಲ್ಲಿಗೆ ಆಗಮಿಸಿದ್ದು, ಪಕ್ಷದಲ್ಲಿರುವ ಸ್ಥಳೀಯ ಭಿನ್ನಾಭಿಪ್ರಾಯ ಮತ್ತು ಕಾಂಗ್ರೆಸ್ ಪರ ಯಾವ ರೀತಿಯ ಸಹಕಾರವಿದೆ ಹಾಗೂ ಅಭ್ಯರ್ಥಿ ಘೋಷಣೆ ಬಳಿಕ ಪಕ್ಷ ಸಂಘಟನೆ ಯಾವ ರೀತಿ ಇದೆ ಎಂಬ ಮಾಹಿತಿ ಸಂಗ್ರಹಿಸಲಾಗಿದೆ ಎಂದರು.
ಬೆಳಗ್ಗೆ ಪಾವಗಡಕ್ಕೆ ಬಂದ ಕೂಡಲೇ ಟಿಕೆಟ್ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದ ಗಾಯಿತ್ರಿಬಾಯಿ ಶಂಕರ್‌ನಾಯಕ್ ಅವರ ನಿವಾಸಕ್ಕೆ ತೆರಳಿ ಮಾಜಿ ಶಾಸಕ ಸೋಮ್ಲನಾಯಕ್ ಹಾಗೂ ಪುತ್ರಿ ಗಾಯಿತ್ರಿಬಾಯಿ ಜತೆ ಚರ್ಚಿಸಲಾಯಿತು. ಸುರ್ದೀಘವಾಗಿ ಚರ್ಚಿಸಿದ ಬಳಿಕ ನಾನು ಕಾಂಗ್ರೆಸ್‌ನವನಾಗಿದ್ದು, ಪಕ್ಷದಿಂದ ದೂರ ಸರಿಯುವುದಿಲ್ಲ. ಪಕ್ಷದ ಪರವಾಗಿ ಕೆಲಸ ಮಾಡಲಿದ್ದು, ಇನ್ನುಮುಂದೆ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಳ್ಳುವೆ ಎಂದು ಭರವಸೆ ನೀಡಿದ್ದಾರೆ. ಹಾಗೆಯೇ ಟಿಕೆಟ್ ಬಯಸಿದ್ದ ಕೆಂಚಮಾರಯರನ್ನು ಭೇಟಿ ಮಾಡಿದ್ದು, ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ.ಟಿಕೆಟ್ ಬಯಸಿದ್ದ ಹಿರಿಯ ಮುಖಂಡರಾದ ಕೋರ್ಚ್ ನರಸಪ್ಪ ಹಾಗೂ ಮೇಗಲಪಾಳ್ಯ ಕೃಷ್ಣನಾಯಕ್‌ರನ್ನು ಭೇಟಿ ಮಾಡಿ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿದ್ದು, ಪಕ್ಷದಲ್ಲಿ ನಿಷಾವಂತರಾಗಿ ಕೆಲಸ ಮಾಡುತ್ತಿದ್ದೇವೆ. ನಾವು ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗುವುದಿಲ್ಲ.ನಾವು ಕಾಂಗ್ರೆಸ್ ಗೆಲುವಿಗೆ ಹೆಚ್ಚಿನ ಶ್ರಮಹಾಕುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಇಲ್ಲಿ ಕಾಂಗ್ರೆಸ್ ಸದೃಢವಾಗಿದೆ.ಅತ್ಯಧಿಕ ಮತಗಳಿಂದ ವೆಂಕಟೇಶ್ ಗೆಲುವ ವಿಶ್ವಾಸವಿದೆ. ಸಣ್ಣಪುಟ್ಟಗೊಂದಲ ಆಸಮಾಧಾನ ಸರಿಹೋಗುತ್ತದೆ. ಕಾಂಗ್ರೆಸ್ ತತ್ವ ಸಿದ್ದಾಂತಗಳ ಪಕ್ಷ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಸರಿಪಡಿಸಿಕೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮತ್ತು ನಮ್ಮ ಅಭ್ಯರ್ಥಿ ವೆಂಕಟೇಶ್ ಅವರಿಗೆ ಸೂಚಿಸಲಿದ್ದೇನೆ ಎಂದರು.
ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಹಾಗೂ ತಾಲೂಕು ಕಾಂಗ್ರೆಸ್ ಅಭ್ಯರ್ಥಿ ಎಚ್.ವಿ.ವೆಂಕಟೇಶ್ ಮಾತನಾಡಿದರು. ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಶಶಿಹುಲಿಕುಂಟೆ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್‌ಬಾಬು, ಯುವ ಘಟಕದ ಅಧ್ಯಕ್ಷ ಸುಜಿತ್ ಇತರೆ ಆನೇಕ ಮಂದಿ ಗಣ್ಯರು ಉಪಸ್ಥಿತರಿದ್ದರು.