ಚಿಕ್ಕಮಗಳೂರು: ಕಾಗದರಹಿತ ಆಡಳಿತಕ್ಕೆ ಚಾಲನೆ

By Kannadaprabha News  |  First Published Aug 18, 2019, 3:09 PM IST

ಚಿಕ್ಕಮಗಳೂರಿನ ತರೀಕೆರೆ ತಾಲೂಕಿನಲ್ಲಿ ಕಾಗದರಹಿತ ಆಡಳಿತಕ್ಕೆ ಚಾಲನೆ ನೀಡಲಾಗಿದೆ. ಕಾಗದರಹಿತವಾಗಿ ವಿವರಗಳು ದಾಖಲೆಯಾಗಿ ದೀರ್ಘ ಕಾಲ ಉಳಿಯುವುದರಿಂದ ಆಡಳಿತಕ್ಕೆ ಹೆಚ್ಚು ಅನುಕೂಲವಾಗಲಿದೆ. ಇನ್ನು ಮುಂದೆ ಆಡಳಿತಕ್ಕೆ ಸಂಬಂಧಿಸಿದ ಮಾಹಿತಿಗಳು ಸಾಫ್ಟ್‌ ಕಾಪಿಯಾಗಿ ಉಳಿದುಕೊಳ್ಳಲಿದೆ. 


ಚಿಕ್ಕಮಗಳೂರು(ಆ.18): ತರೀಕೆರೆ ಹಿಂದೆ ಕಾಗದಗಳಲ್ಲಿ ದಾಖಲೆ ಇತ್ತು, ಇದೀಗ ಕಾಗದರಹಿತವಾಗಿ ವಿವರಗಳು ದಾಖಲೆಯಾಗಿ ಉಳಿಯುವುದರಿಂದ ಆಡಳಿತಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎಂದು ಶಾಸಕ ಡಿ.ಎಸ್‌. ಸುರೇಶ್‌ ಹೇಳಿದರು.

ಶುಕ್ರವಾರ ತಾಲೂಕು ಪಂಚಾಯಿತಿಯಲ್ಲಿ ಕಾಗದರಹಿತ ಆಡಳಿತಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕು ಪಂಚಾಯಿತಿಯಲ್ಲಿ ಮೊದಲ ಬಾರಿಗೆ ಇಂತಹ ಪ್ರಯತ್ನ ನಡೆಯುತ್ತಿರುವುದು ಸಂತೋಷ ತಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್‌ ಕನಸು ಕೂಡ ಇದೇ ಆಗಿದೆ ಎಂದು ತಿಳಿಸಿದರು.

Tap to resize

Latest Videos

ಜನಪ್ರತಿನಿಧಿಗಳು ತಮ್ಮ ವೇತನವನ್ನು ನೆರೆ ಸಂತ್ರಸ್ತರ ನೆರವಿಗೆ ನೀಡಿ ಸಹಕರಿಸಬೇಕು, ತಾಲೂಕಿನಲ್ಲಿ ವಿವಿಧ ಪ್ರದೇಶಗಳಲ್ಲಿ ಹಾನಿ ಆಗಿರುವ ಪೂರ್ಣ ವಿವರಗಳನ್ನು ನೀಡಿದರೆ, ಸರ್ಕಾರಕ್ಕೆ ಈ ವಿವರ ಕಳುಹಿಸಿ, ಹೆಚ್ಚಿನ ಪರಿಹಾರ ಅನುದಾನ ತರಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಒಂದು ಆ್ಯಕ್ಸಿಡೆಂಟ್‌ನಿಂದ ಕರ್ನಾಟಕ ಪೊಲೀಸರಿಗೆ ಸಿಕ್ತು 'ಟೆರರ್ ಆಪರೇಷನ್' ಸುಳಿವು!

ತಾಪಂ ಅಧ್ಯಕ್ಷೆ ಪದ್ಮಾವತಿ ಸಂಜೀವ್‌ಕುಮಾರ್‌ ಮಾತನಾಡಿ, ತರಬೇತಿ ಹೊಂದಿದ ಸಿಬ್ಬಂದಿ ಇದ್ದರೆ ಕಾಗದರಹಿತ ಆಡಳಿತ ನಡೆಸಲು ಹೆಚ್ಚು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ಸದಸ್ಯರಾದ ಬಿ.ರಾಮಪ್ಪ, ಕೃಷ್ಣಪ್ಪ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವಿಶಾಲಾಕ್ಷಮ್ಮ ಮಾತನಾಡಿದರು.

click me!