ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ: 2 ವರ್ಷ ಬಳಿಕ ಕರೆದಿದ್ದ ಸಭೆ ಮತ್ತೆ ಮುಂದೂಡಿಕೆ

By Kannadaprabha NewsFirst Published Dec 20, 2019, 2:18 PM IST
Highlights

ಎರಡು ವರ್ಷಗಳ ನಂತರ ಸಭೆ ಕರೆದು, ಗ್ರಾಮಸ್ಥರು ಸಭೆಗೆ ಹಾಜರಾದರೂ ಮತ್ತೆ ಸಭೆ ಮುಂದೂಡಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬೇಜಾವಾಬ್ದಾರಿ ತೋರಿಸಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಮಡಿಕೇರಿ(ಡಿ.20): ಶನಿವಾರಸಂತೆ ಸಮೀಪದ ಬ್ಯಾಡಗೊಟ್ಟಗ್ರಾಮ ಪಂಚಾಯಿತಿಯ ಜಮಾಬಂದಿ ಸಭೆಯನ್ನು ಕಳೆದ ಎರಡು ವರ್ಷಗಳಿಂದ ನಡೆಸಿಲಿಲ್ಲ. ದಿನಾಂಕ ನಿಗದಿ ಮಾಡಿ ಇನ್ನೇನು ಸಭೆ ನಡೆಯಬೇಕು ಎನ್ನುವಷ್ಟರಲ್ಲಿ ಇದೀಗ ಮತ್ತೆ ಸಭೆ ಮುಂದೂಡಲಾಗಿದೆ.

ಬ್ಯಾಡಗೊಟ್ಟಗ್ರಾ.ಪಂ. ವ್ಯಾಪ್ತಿಯ ಜನರು ಜಮಾಬಂದಿ ಸಭೆ ನಡೆಸಲು ಆಗ್ರಹಿಸುತ್ತಿದ್ದರೂ ಗ್ರಾ.ಪಂ. ಇಲ್ಲದ ನೆಪಗಳನ್ನು ಹೇಳಿಕೊಂಡು 2 ವರ್ಷದಿಂದ ಸಭೆಯನ್ನು ಮುಂದಕ್ಕೆ ಹಾಕಿಕೊಂಡೇ ಬಂದಿತ್ತು. ಇದೀಗ ಎರಡು ವರ್ಷಗಳ ಬಳಿಕ ಗುರುವಾರ ಬ್ಯಾಡಗೊಟ್ಟಗ್ರಾ.ಪಂ. ಅಧ್ಯಕ್ಷೆ ನಿರ್ಮಲ ಸುಂದರ್‌ ಅಧ್ಯಕ್ಷತೆಯಲ್ಲಿ ಜಮಾಬಂದಿಯ ಸಭೆಯನ್ನು ಕರೆಯಲಾಗಿತ್ತು.

ಮಂಡ್ಯ: ತ್ರಿವರ್ಣ ಧ್ವಜ ಹಿಡಿದು, ಕಪ್ಪು ಪಟ್ಟಿ ಧರಿಸಿ ನಮಾಜ್‌ ಸಲ್ಲಿಕೆ

ಆದರೆ ಸಭೆಗೆ ಗ್ರಾ.ಪಂ.ಅಧ್ಯಕ್ಷೆ, ಬೆರಳೆಣಿಕೆಯ ಸದಸ್ಯರು, ಪಿಡಿಒ ಹೊರತುಪಡಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಲಿ, ಸಂಬಂಧಪಟ್ಟಅಧಿಆರಿಗಳಾಗಲಿ ಹಾಜರಾಗಿರಲಿಲ್ಲ. ಅಲ್ಲದೆ ಸಭೆಗೆ ಗ್ರಾಮಸ್ಥರು ಕೂಡ ವಿರಳವಾಗಿ ಹಾಜರಿದ್ದರಿಂದ ಸಭೆಯನ್ನು ಮತ್ತೆ ಮುಂದೂಡಲಾಯಿತು.

ಮಂಗಳೂರು: ಕಾಂಗ್ರೆಸ್ ಪಕ್ಷದ ನಿಯೋಗ ಪೊಲೀಸ್ ವಶಕ್ಕೆ

click me!