Chikkamagaluru: ಪೊಲೀಸ್ ಇಲಾಖೆ, ನಗರಸಭೆ ಸಿಬ್ಬಂದಿಗಳಿಂದ ಬಿಡಾಡಿ ದನಗಳ ಹಿಡಿಯುವ ಕಾರ್ಯಾಚರಣೆ!

ಕಾಫಿನಾಡು ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ವಾಹನ ಸಂಚಾರಕ್ಕೆ ತೊಡಕುಂಟು ಮಾಡುತ್ತಿರುವ ಬಿಡಾಡಿ ದನ-ಕರುಗಳನ್ನು ಹಿಡಿದು ಸುರಕ್ಷಿತವಾಗಿ ಗೋ ಶಾಲೆಗೆ ಕಳುಹಿಸಲಾಗುತ್ತಿದೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಆ.03): ಕಾಫಿನಾಡು ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ವಾಹನ ಸಂಚಾರಕ್ಕೆ ತೊಡಕುಂಟು ಮಾಡುತ್ತಿರುವ ಬಿಡಾಡಿ ದನ-ಕರುಗಳನ್ನು ಹಿಡಿದು ಸುರಕ್ಷಿತವಾಗಿ ಗೋ ಶಾಲೆಗೆ ಕಳುಹಿಸಲಾಗುತ್ತಿದೆ. ಚಿಕ್ಕಮಗಳೂರು ನಗರದ ಉಪ್ಪಳ್ಳಿ ಬಳಿ ನಗರಸಭಾ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಹಕಾರದಿಂದ ಮುಂಜಾನೆಯಿಂದ ಅಲ್ಲಲ್ಲಿ ಓಡಾಡುತ್ತಿರುವ ದನ-ಕರುಗಳನ್ನು ಇಂದು ಸುರಕ್ಷಿತ ಸೆರೆಹಿಡಿದು ಕಡೂರು ಸಮೀಪದ ಗೋಶಾಲೆಗೆ ಬಿಡಲಾಗಿದೆ. 

Latest Videos

ಸಾರ್ವಜನಿಕರಿಗೆ ತೊಂದರೆ: ಪ್ರತಿನಿತ್ಯ ವಾಹನ ಸವಾರರು, ಹಾಗೂ ಪಾದಚಾರಿಗಳು ಬಿಡಾಡಿ ದನಗಳಿಂದ ತೊಂದರೆಗೆ ಒಳಗಾಗುತ್ತಿದ್ದು  ಸಾರ್ವಜನಿಕರು ದನಗಳನ್ನು ಸ್ವಂತ ಜಾಗದಲ್ಲಿ ಇರಿಸಲು ಅನೇಕ ಬಾರಿ ಪ್ರಕಟಣೆ ಹೊರಡಿಸಿದರೂ ಯಾವುದೇ ಕಾಳಜಿ ತೋರದ ಹಿನ್ನೆಲೆ ಸೆರೆಹಿಡಿಯುವ ಕಾರ್ಯಕ್ಕೆ ಮುಂದಾಗಲಾಗಿದೆ. ಬಿಡಾಡಿ ದನಗಳ ಕಡಿವಾಣಕ್ಕೆ ಗೋಪಾಲಕರಿಗೆ ಅನೇಕ ಬಾರಿ ವಿನಂತಿಸಿದರೂ ಯಾವುದೇ ಕ್ರಮ ವಹಿಸುತ್ತಿಲ್ಲ. ಗೋಪಾಲಕರು ದನಗಳನ್ನು ಕಟ್ಟಿಹಾಕದಿರುವ ಪರಿಣಾಮ ರಸ್ತೆಗಳಲ್ಲಿ ಅಪಘಾತ ಹೆಚ್ಚಾಗಿ ಪ್ರಾಣಹಾನಿ ಸಂಭವಿಸುತ್ತಿದೆ. ಹೀಗಾಗಿ ದನಗಳನ್ನು ಶೀಘ್ರದಲ್ಲೇ ಕರೆದೊಯ್ಯದಿದ್ದರೆ ಗೋಶಾಲೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 

ಅಪ್ಪು ಹೇಗೋ ದುನಿಯಾ ವಿಜಯ್ ಕೂಡಾ ನನಗೆ ತಮ್ಮನ ತರ: ಭೀಮ ಚಿತ್ರದ ಟ್ರೈಲರ್ ಲಾಂಚ್ ಮಾಡಿದ ಶಿವಣ್ಣ

ಗೋ ಶಾಲೆಗೆ ಬಿಡಾಡಿ ದನಗಳು: ಸ್ಥಳೀಯ ನಿವಾಸಿಗಳು ಮನೆಯ ಮುಂಭಾಗದಲ್ಲಿ ದನಗಳಿಗೆ ಆಹಾರ ಒದಗಿಸುವ ಕಾರಣ ಹಸುಗಳ ಗುಂಪು ತಾಣವಾಗಿ ಮಾಡಿಕೊಂಡಿದೆ. ಹೀಗಾಗಿ ನಿವಾಸಿಗಳು ಆಹಾರವಿಡಲು ಮುಂದಾಗದಂತೆ ಎಚ್ಚರಿಕೆ ವಹಿಸಬೇಕು. ಹದಿನೈದು ದಿನಗಳ ಹಿಂದೆ ನಗರಸಭೆಯಿಂದ ಅನೇಕ ಬಿಡಾಡಿ ದನಗಳನ್ನು ಹಿಡಿದು ಗೋ ಶಾಲೆಗೆ ಕಳಿಸಲಾಗುತ್ತಿದೆ. ಕಾರ್ಯಚಾರಣೆಯಲ್ಲಿ ನಗರಸಭೆ ಸಿಬ್ಬಂದಿಗಳಾದ ತೇಜಸ್ವಿನಿ, ಹಿರಿಯ ಆರೋಗ್ಯ ನಿರೀಕ್ಷಕರಾದ ಈಶ್ವರಪ್ಪ, ರಂಗಪ್ಪ, ನಾಗಪ್ಪ, ಶಶಿರಾಜ್, ವೆಂಕಟೇಶ್, ಪ್ರಾಣಿದಯ ಸಂಘದ ಅಧ್ಯಕ್ಷೆ ನಳೀನಾ ಡೀಸಾ, ಸ್ಥಳೀಯರಾದ ಕಬೀರ್ಖಾನ್ ಮತ್ತಿತರರು ಹಾಜರಿದ್ದರು.

click me!