ಕೊರಳಲ್ಲಿ ಹಾವು ಸುತ್ತಿಕೊಂಡು ಸೈಕಲ್‌ ಸವಾರಿ ಮಾಡಿದ ವೃದ್ಧ

Published : Jul 05, 2021, 07:13 AM IST
ಕೊರಳಲ್ಲಿ ಹಾವು ಸುತ್ತಿಕೊಂಡು ಸೈಕಲ್‌ ಸವಾರಿ ಮಾಡಿದ ವೃದ್ಧ

ಸಾರಾಂಶ

ಹಾವು ಕಂಡರೆ ಸಾಕು ಮಾರುದ್ದ ಹೋಗುವವರೇ ಹೆಚ್ಚು ಹಾವನ್ನು ವೃದ್ಧನೋರ್ವ ಕೊರಳಲ್ಲಿ ಸುತ್ತಿಕೊಂಡು ಸೈಕಲ್ ಸವಾರಿ ಮಾಡಿದ ವೃದ್ಧ ಹಾವನ್ನು ಕಾಡಿಗೆ ಬಿಟ್ಟು ಸಂರಕ್ಷಣ ಮಾಡಿದ ವೃದ್ಧ  

ಬೆಳಗಾವಿ (ಜು.05):  ಹಾವು ಕಂಡರೆ ಸಾಕು ಮಾರುದ್ದ ಹೋಗುವವರೇ ಹೆಚ್ಚು. ಅಂತಹದರಲ್ಲಿ ವೃದ್ಧನೋರ್ವ ಹಾವನ್ನು ಯಾವುದೇ ಭಯವಿಲ್ಲದೆ ಗಂಟೆಗಟ್ಟಲೇ ಕೊರಳಲ್ಲಿ ಹಾಕಿಕೊಂಡು ಸೈಕಲ್‌ ಸವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ ಶನಿವಾರ ಮನೆಗೆಯೊಳಗೆ ಬಂದಿದ್ದ ಹಾವನ್ನು ವೃದ್ಧನೋರ್ವ ಕೊರಳಲ್ಲಿ ಸುತ್ತಿಕೊಂಡು ಸೈಕಲ್‌ ಸವಾರಿ ಮಾಡಿದ್ದಾನೆ. ಅಲ್ಲದೇ ಆ ಹಾವನ್ನು ಕೊರಳಲ್ಲಿ ಸುತ್ತಿಕೊಂಡೇ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟುಬಂದಿದ್ದಾನೆ. 

ಕಡೂರು: ಒಂದೇ ದಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ 3 ಸ್ತ್ರೀಯರು ಹಾವು ಕಚ್ಚಿ ಸಾವು ...

ಹಾವನ್ನು ಕೊರಳಿಗೆ ಹಾಕಿಕೊಂಡು ಸೈಕಲ್‌ ಸವಾರಿ ಮಾಡಿದ್ದಾಗ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕನೊಬ್ಬ ಈತನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ವೃದ್ಧನ ಧೈರ್ಯಕ್ಕೆ ಜನ ಬೆರಗಾಗಿದ್ದಾರೆ.

PREV
click me!

Recommended Stories

ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!