ಕೊರೊನಾ ಟೆಸ್ಟ್ ಗೆ ಸರದಿ ಸಾಲಿನಲ್ಲಿ ನಿಂತಿದ್ದಾಗ ಕುಸಿದು ಬಿದ್ದು ಸೋಂಕಿತ ಸಾವನ್ನಪ್ಪಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ತೋರಣಗಲ್ ನ ಓಪಿಜಿ ಸೆಂಟರ್ ನಲ್ಲಿ ಘಟನೆ ನಡೆದಿದೆ.
ಬಳ್ಳಾರಿ(ಜು.23): ಕೊರೊನಾ ಟೆಸ್ಟ್ ಗೆ ಸರದಿ ಸಾಲಿನಲ್ಲಿ ನಿಂತಿದ್ದಾಗ ಕುಸಿದು ಬಿದ್ದು ಸೋಂಕಿತ ಸಾವನ್ನಪ್ಪಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ತೋರಣಗಲ್ ನ ಓಪಿಜಿ ಸೆಂಟರ್ ನಲ್ಲಿ ಘಟನೆ ನಡೆದಿದೆ.
ಶೀತ ಮತ್ತು ಜ್ವರದ ಜೊತೆ ಉಸಿರಾಟದ ಸಮಸ್ಯೆ ಇದ್ದ ಹಿನ್ನೆಲೆ ಆಸ್ಪತ್ರೆಗೆ ಬಂದು ಕರೊನಾ ಟೆಸ್ಟ್ ಗೆ ಮುಂದಾಗಿದ್ದ 58ರ ವೃದ್ದ ಟೆಸ್ಟ್ ಮಾಡಿಸಲು ಸರದಿಯಲ್ಲಿ ನಿಂತಿದ್ದರು. ಈ ಸಂದರ್ಭ ಏಕಾಏಕಿ ಕುಸಿದು ಬಿದ್ದು ವೃದ್ದ ಸಾವನ್ನಪ್ಪಿದ್ದಾರೆ.
ತಹಸೀಲ್ದಾರ್ ನೇತೃತ್ವದಲ್ಲಿ ನಿಧಿ ಶೋಧ..!
ಬಳಿಕ ಆ್ಯಂಟಿಜನ್ ಕಿಟ್ ಮೂಲಕ ಪರೀಕ್ಷೆ ಮಾಡಿದಾಗ ವೃದ್ದನಿಗೆ ಕೊರೊನಾ ಧೃಡಪಟ್ಟಿದೆ. ಆರೋಗ್ಯ ಇಲಾಖೆ ಮೃತ ದೇಹವನ್ನ ಸಂಬಂಧಿಗಳಿಗೆ ನೀಡದೇ ಎಸ್ ಒ ಪಿ ನಿಯಮದ ಪ್ರಕಾರ ಅಂತಿಮ ಸಂಸ್ಕಾದ ಮಾಡಿದೆ. ತೋರಣಗಲ್ ನ ಕಂಟೈನ್ ಮೆಂಟ್ ಪ್ರದೇಶವೊಂದರಲ್ಲಿ ವೃದ್ದ ವಾಸವಾಗಿದ್ದರು.